ಬಿಜೆಪಿಯ ಮಾಜಿ ಸಚಿವ ಹರತಾಳು ಹಾಲಪ್ಪ ನಿರ್ದೋಷಿಯಾಗಿ ಹೊರ ಬಂದಿದ್ದಾರೆ. ಅತ್ಯಾಚಾರ ಆರೋಪ ಪ್ರಕರಣದಿಂದ ಶಿವಮೊಗ್ಗ ಕೋರ್ಟ್ ಅವರನ್ನ ಖುಲಾಸೆಗೊಳಿಸಿ ತೀರ್ಪು ನೀಡಿದೆ. ಹಾಲಪ್ಪ ಖುಲಾಸೆಯಾಗಿ ಹೊರ ಬಂದಿರುವುದು ಬಿಜೆಪಿಯಲ್ಲಿ ರಾಜಕೀಯ ಇಕ್ಕಟ್ಟಿಗೆ ಕಾರಣವಾಗಿದೆ. ಹೌದು, ಹಾಲಪ್ಪ ಈ ಹಿಂದೆ ಸೊರಬ ಕ್ಷೇತ್ರದ ಶಾಸಕರಾಗಿದ್ದರು. ಆಹಾರ ಸಚಿವರಾಗಿದ್ದ ಹಾಲಪ್ಪ ಆರೋಪ ಬಂದ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ, ಅವರು ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಲುವ ಸಾಧ್ಯತೆ ಇದೆ. 2018ರ