ಎಲೆಕ್ಷನ್ ಹತ್ತಿರ ಬರುತ್ತಿರುವ ಕಾರಣಕ್ಕೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿ ಮಾಡಲು ಮುಂದಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದ್ದಾರೆ. ಮತಾಂತರ ಕಾಯ್ಧೆ ಮಂಡನೆ ಮಾಡಲು ಸರ್ಕಾರದವರು ಎರಡು ರೀತಿಯಲ್ಲಿ ಸಿದ್ದತೆ ನಡೆಸಿದೆ. ಸರ್ಕಾರದ ಮೂಲಕ ಮಂಡನೆ ಇಲ್ಲವೇ ಖಾಸಗೀಯಾಗಿ ಮಂಡನೆ ಮಾಡಲು ಬಿಜೆಪಿ ತಯಾರಿ ಮಾಡುತ್ತಿದೆ. ಆದ್ರೆ ಕಾಂಗ್ರೆಸ್ ಮತಾಂತರ ಕಾಯ್ದೆಯನ್ನು ವಿರೋಧಿಸುತ್ತೇವೆ. ರಾಜ್ಯದಲ್ಲಿ ಕ್ರಿಶ್ಚಿಯನ್ ಸಮುದಾಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದೆ. ಕ್ರಿಶ್ಚಿಯನ್ ಸಮುದಾಯ ನಡೆಸುವ ಸ್ಕೂಲ್ ನಲ್ಲಿ ಶೀಟ್ ಪಡೆಯಲು ಬೆಗ್ ಮಾಡ್ತಾರೆ. ಅಲ್ಲದೆ ರಾಜ್ಯದಲ್ಲಿ ಎಲೆಕ್ಷನ್ ಬರ್ತಾ ಇರುವ ಕಾರಣಕ್ಕೆ ಬಿಜೆಪಿ ಒಂದೊಂದು ಸಮಯದಾಯವನ್ನು ಟಾರ್ಗೆಟ್ ಮಾಡುತ್ತಿದೆ. ಕ್ರಿಶ್ಚಿಯನ್ ಸಮುದಾಯ ಮಾವವೀಯತೆಗಾಗಿ ಕೆಲಸ ಮಾಡುತ್ತಿದೆ ಎಂದು ಸಮುದಾಯದ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.