ಬೆಂಗಳೂರು: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರದಲ್ಲಿ ರಾಮ ಪ್ರತಿಷ್ಟಾಪನೆಗೆ ಹತ್ತು ದಿನಗಳಷ್ಟೇ ಬಾಕಿ ಉಳಿದಿದೆ. ಈ ವೇಳೆ ರಾಮ ಮಂದಿರ ನಿರ್ಮಾಣದ ಬಗ್ಗೆ ಬಿಜೆಪಿ ಹಾಗೂ ಇತರೆ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಮಂದಿರವನ್ನು ಕಟ್ಟುವ ಬದಲು ಜನರಿಗೆ ಉಪಯೋಗವಾಗುವಂತಹ ಶಾಲೆ, ಆಸ್ಪತ್ರೆ ಮುಂತಾದವುಗಳನ್ನು ಕಟ್ಟಬಹುದಿತ್ತು ಎಂದು ಇತರೆ ಪಕ್ಷಗಳು ಮಾಡಿದ್ದ ಟೀಕೆಗೆ ಬಿಜೆಪಿ ಎಕ್ಸ್ ಜಾಲತಾಣದ ಮೂಲಕ ಉತ್ತರ ನೀಡಿದೆ.