ಕಾನೂನು ಸುವ್ಯವಸ್ಥೆ ಹಾಳು ಮಾಡುವುದೇ ಬಿಜೆಪಿ ಸಿದ್ಧಾಂತ- ಕೆ.ಸಿ.ವೇಣುಗೋಪಾಲ

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (14:54 IST)

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹಾಳು ಮಾಡಲು ಬಿಜೆಪಿ ಮುಂದಾಗಿದೆ. ಅಶಾಂತಿ ಉಂಟು ಮಾಡುವುದೇ ಬಿಜೆಪಿಯ ಸಿದ್ಧಾಂತವಾಗಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಂಸದ ಪ್ರತಾಪಸಿಂಹ ಅವರ ವಿಡಿಯೋ ನೋಡಿದ್ದೇನೆ. ರಾಷ್ಟ್ರೀಯ ಅಧ್ಯಕ್ಷರೇ ಆ ರೀತಿ ಹೇಳಿದರೆ ಹೇಗೆ?, ಕೋಮುಭಾವನೆ ಕೆರಳಿಸಲು ಅವರು ಯತ್ನಿಸುತ್ತಿದ್ದಾರೆ. ಅಭಿವೃದ್ಧಿ ವಿಚಾರಗಳನ್ನು ಮಾತನಾಡದೆ ಕೆಲವೇ ವಿಚಾರಗಳಿಟ್ಟುಕೊಂಡು ರಸ್ತೆಗಿಳಿದ್ದಾರೆ ಎಂದಿದ್ದಾರೆ.

ಪಕ್ಷವೆಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಅವೆಲ್ಲಾ ಸಾಮಾನ್ಯ ಎಂದು ಸಿದ್ದರಾಮಯ್ಯ ಹಾಗೂ ಜಿ.ಪರಮೇಶ್ವರ ಅವರ ನಡುವಿನ ಮನಸ್ತಾಪದ ಬಗ್ಗೆ ಪ್ರತಿಕಿಸಿದ ಅವರು, ಲೈಂಗಿಕ ಕಿರುಕುಳದ ಆರೋಪ ರಾಜಕೀಯ ಪ್ರೇರಿತವಾದುದು, ಅದರ ಬಗ್ಗೆ ಎರ್ನಾಕುಲಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇನೆ. ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯಲು ಕೂಡ ಸಿದ್ದನಾಗಿದ್ದೇನೆ. ಬಿಜೆಪಿಯವರು ಪ್ರತಿಭಟನೆ ಮಾಡಿಕೊಳ್ಳಲಿ ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯನಿಂದ ಕುರುಬರಿಗೆ ಅನ್ಯಾಯ- ಎಚ್.ಡಿ.ದೇವೇಗೌಡ

ಕುರುಬ ಸಮುದಾಯದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಕ್ಕಿದ್ದಾರೆ. ಆದರೆ, ಕುರುಬ ಸಮುದಾಯದವರಿಗೆ ...

news

ರಾಹುಲ್ ಗಾಂಧಿಯನ್ನು ಔರಂಗಜೇಬ್ ಎನ್ನುವುದು ಸರಿಯಲ್ಲ: ಸಿಎಂ

ಬೆಂಗಳೂರು: ಎಐಸಿಸಿ ಭಾವಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಔರಂಗಜೇಬರಿಗೆ ಹೋಲಿಸುವುದು ಸರಿಯಲ್ಲ ಎಂದು ...

news

ರಾಹುಲ್ ಗಾಂಧಿಯನ್ನು ಔರಂಗಜೇಬ್ ಎನ್ನುವುದು ಸರಿಯಲ್ಲ: ಸಿಎಂ

ಬೆಂಗಳೂರು: ಎಐಸಿಸಿ ಭಾವಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಔರಂಗಜೇಬರಿಗೆ ಹೋಲಿಸುವುದು ಸರಿಯಲ್ಲ ಎಂದು ...

news

ಪತ್ನಿಯನ್ನು ಕೊಂದು ಜಿಲ್ಲಾಸ್ಪತ್ರೆಗೆ ಸಾಗಿಸಿ ಪರಾರಿಯಾದ ಪತಿ!

ಪತ್ನಿಯನ್ನು ಕೊಲೆ ಮಾಡಿದ ಪತಿಯೇ ಶವವನ್ನು ಜಿಲ್ಲಾಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಯಾದಗಿರಿ ...

Widgets Magazine
Widgets Magazine