ಕೇಂದ್ರ ಸಚಿವ ಹೆಗಡೆ ವಿರುದ್ಧ ಬಿಜೆಪಿ ನಾಯಕರೇ ಅಸಮಾಧಾನ

ಬೆಂಗಳೂರು, ಭಾನುವಾರ, 21 ಜನವರಿ 2018 (14:55 IST)

ಕನ್ನಡ ಪರ ಅವಹೇಳನಾಕಾರಿ ಹೇಳಿಕೆ ನೀಡುತ್ತಿರುವುದಲ್ಲದೇ ಕನ್ನಡ ಭಾಷೆಯ ಸಾಹಿತಿಗಳನ್ನು ಅವಮಾನಿಸುತ್ತಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಮುಖಂಡರು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಒತ್ತಾಯಿಸಿದ್ದಾರೆ.
<a class=bjp logo" class="imgCont" src="http://media.webdunia.com/_media/mr/img/article/2017-10/27/full/1509084552-8152.jpg" style="border: 1px solid rgb(221, 221, 221); margin-right: 0px; z-index: 0; width: 680px; height: 393px;" title="" />
ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಮಾತನಾಡಿ, ದಿನಕ್ಕೊಂದು ಹೇಳಿಕೆ ನೀಡಿ ಬಿಜೆಪಿ ಪಕ್ಷವನ್ನು ಮುಜುಗರಗೊಳಪಡಿಸುತ್ತಿರುವ ಸಚಿವ ಹೆಗಡೆಯವರಿಗೆ ಬುದ್ದಿವಾದ ಹೇಳಿ ಎಂದು ಬಿಎಸ್‌ವೈಗೆ ಕೋರಿದ್ದಾರೆ.
 
ಸಂವಿಧಾನ ಬದಲಾವಣೆ, ನಂತರ ದಲಿತರನ್ನು ನಾಯಿಗಳಿಗೆ ಹೋಲಿಸಿರುವುದು ಕನ್ನಡ ಭಾಷೆ, ಕನ್ನಡ ರಾಜಮನೆತನಗಳನ್ನು ನಿಂದಿಸುತ್ತಿರುವುದು ಬಿಜೆಪಿ ಪಕ್ಷಕ್ಕೆ ಮುಂಬರುವ ಚುನಾವಣೆಯಲ್ಲಿ ತಿರುಗುಬಾಣವಾಗುವ ಸಾಧ್ಯತೆಗಳಿವೆ ಎಂದು ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
 
ನಾನು ಇನ್ನೂ ಭಾರತೀಯನಾಗಿರುವುದರಿಂದ ರಾಷ್ಟ್ರಭಾಷೆ ಹಿಂದಿಯಲ್ಲಿಯೇ ಮಾತನಾಡಲು ಇಚ್ಛಿಸುತ್ತೇನೆ ಎಂದು ಇಂಗ್ಲಿಷ್ ಭಾಷೆಯ ಕುರಿತು ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅಸಮಧಾನ ವ್ಯಕ್ತಪಡಿಸಿದ್ದಲ್ಲದೇ ಕನ್ನಡ ಭಾಷೆಯ ಬಗ್ಗೆ ಅಸಡ್ಡೆ ತೋರಿರುವುದು ಸರಿಯಲ್ಲ ಎಂದು ಬಿಜೆಪಿ ಯುವಮೋರ್ಚಾ ರಾಜ್ಯಾಧ್ಯಕ್ಷ ಭೀಮಾಶಂಕರ್ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ಮಾಡೆಲ್ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎಂದರೆ ದಂಗಾಗುತ್ತೀರಿ

ಈ ಮಾಡೆಲ್ ಎಷ್ಟು ಜನರೊಂದಿಗೆ ಮಲಗಿದ್ದಾಳೆ ಎಂದರೆ ದಂಗಾಗುತ್ತೀರಿ. ಈಕೆ ಎಷ್ಟು ಜನರೊಂದಿಗೆ ಮಲಗಿದ್ದಾಳೆ ...

news

ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಗುಂಡುಹಾರಿಸಿ: ರಾಮಲಿಂಗಾರೆಡ್ಡಿ ಆದೇಶ

ಬೆಂಗಳೂರು: ಪೊಲೀಸರ ಮೇಲೆ ಯಾರೇ ಹಲ್ಲೆ ಮಾಡಿದ್ರೆ ಗುಂಡುಹಾರಿಸಿ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಆದೇಶ ...

news

ಬಿಜೆಪಿ ಪಕ್ಷ ಬಿಡುವವರು ಬಿಡಲಿ ಚಿಂತೆಯಿಲ್ಲ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಪಕ್ಷ ತೊರೆಯುವವರು ತೊರೆಯಲಿ ಯಾವುದೇ ಚಿಂತೆಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ್ಯ ...

news

ದಲಿತರನ್ನು ನಾಯಿಗಳಿಗೆ ಹೋಲಿಸಿದ ಸಚಿವ ಹೆಗಡೆ ವಿರುದ್ಧ ಖರ್ಗೆ ಗರಂ

ಬೆಂಗಳೂರು: ದಲಿತ ಪ್ರತಿಭಟನಾಕಾರರನ್ನು ನಾಯಿಗಳಿಗೆ ಹೋಲಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ...

Widgets Magazine
Widgets Magazine