ದಕ್ಷಿಣ ಭಾರತೀಯರನ್ನು ಕರಿಯರೆಂದು ಜರಿದ ಬಿಜೆಪಿ ನಾಯಕರು: ರಮ್ಯಾ ಆರೋಪ

ನವದೆಹಲಿ, ಮಂಗಳವಾರ, 16 ಮೇ 2017 (14:49 IST)

Widgets Magazine

ದಕ್ಷಿಣ ಭಾರತೀಯರನ್ನು ಕರಿಯರೆಂದು ಕರೆದು ಅಪಮಾನ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಭಾರತೀಯರ ಬಗ್ಗೆ ಅಪಮಾನಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮಾಜಿ ಸಂಸದೆ ರಮ್ಯಾ ಆರೋಪಿಸಿದ್ದಾರೆ.  
 
ಬರಪರಿಹಾರ ನೀಡುವಲ್ಲಿ ಕೇಂದ್ರ ಸರಕಾರ ತಾರತಮ್ಯ ಎಸಗಿದೆ. ಕೇಂದ್ರ ಸರಕಾರ ದಕ್ಷಿಣ ಭಾರತವನ್ನು ನಿರ್ಲಕ್ಷದಿಂದ ನೋಡುತ್ತಿದೆ. ತಮಿಳುನಾಡು ರೈತರು ಸಂಸತ್ತಿನ ಮುಂದೆ ಪ್ರತಿಭಟನೆ ನಡೆಸಿದರೂ ಕೇಂದ್ರ ಸರಕಾರ ಕ್ಯಾರೆ ಎನ್ನಲಿಲ್ಲ ಎಂದು ಗುಡುಗಿದರು. 
 
ಆಂಧ್ರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ನಡೆಸಿದ ಹೋರಾಟಕ್ಕೂ ಕೇಂದ್ರ ಕಿಮ್ಮತ್ತು ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 
 
ಕೇರಳ ರಾಜ್ಯಕ್ಕೂ ಕೇಂದ್ರ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ. ಮೂರು ವರ್ಷದಲ್ಲಿ ಅಸಹಿಷ್ಣುತೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನರೇಗಾ ವಿತರಣೆಯಲ್ಲೂ ಕೇಂದ್ರ ಸರಕಾರ ದಕ್ಷಿಣ ಭಾರತವನ್ನು ವಂಚಿಸಿದೆ ಎಂದು ಮಾಜಿ ಸಂಸದೆ ನಟಿ, ರಮ್ಯಾ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಸಿಬಿಐ ದಾಳಿಯ ಬಗ್ಗೆ ಪ್ರತಿಕ್ರಿಯೆಗೆ ಪಿ.ಚಿದಂಬರಂ ನಕಾರ

ಚೆನ್ನೈ: ಪುತ್ರನ ಮನೆ ಹಾಗೂ ಕಂಪೆನಿಗಳ ಮೇಲೆ ನಡೆದ ಸಿಬಿಐ ದಾಳಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ...

news

ಡಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ಮೇಲ್ಚಾವಣಿಯಿಂದ ಕೆಳಗೆ ತಳ್ಳಿದ ಪತಿ

ಕಾನ್ಪುರ್: ಮದುವೆ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಲು ನಿರಾಕರಿಸಿದ ಪತ್ನಿಯನ್ನು ನಾಲ್ಕನೇ ಅಂತಸ್ತಿನ ಮನೆಯ ...

news

ಕೈ ಕುಲುಕಲು ಬಂದ ಪಾಕ್ ಅಧಿಕಾರಿಗೆ ಭಾರತೀಯ ಅಧಿಕಾರಿ ಕೊಟ್ಟ ಉತ್ತರವಿದು!

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ವೈರತ್ವ ಎಷ್ಟು ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ...

news

ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ: ಬಿಎಸ್‌ವೈ ಗುಡುಗು

ಬೆಂಗಳೂರು: ಸರಕಾರದ ಹಗರಣಗಳನ್ನು ಬಯಲು ಮಾಡ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ...

Widgets Magazine