ಬಿಜೆಪಿಯ ನಾಯಕರಿಗೆ ಬುದ್ದಿ ಬೆಳೆದಿಲ್ಲ– ಮಾಜಿ ಸಚಿವ ಶ್ರೀನಿವಾಸ ಪ್ರಸಾದ್

ಮೈಸೂರು, ಶನಿವಾರ, 30 ಡಿಸೆಂಬರ್ 2017 (13:47 IST)

ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡು ಬಿಜೆಪಿ ಸೇರಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್‍ಪ್ರಸಾದ್ ಬಿಜೆಪಿ ನಾಯಕರ ವಿರುದ್ಧವೇ ಗುಡುಗಿದ್ದು, ಬಿಜೆಪಿಯ ನಾಯಕರಿಗೆ ಬುದ್ದಿ ಬೆಳೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
 
ಮೈಸೂರಿನಲ್ಲಿ ಮಾತನಾಡಿರುವ ಅವರು, ಸಂವಿಧಾನದ ಬಗ್ಗೆ ಅಪಸ್ವರ ಎತ್ತಿರುವ ಬಿಜೆಪಿ ನಾಯಕರ ವಿರುದ್ಧ ವ್ಯಕ್ತಪಡಿಸಿದ್ದಾರೆ. ಗೋ. ಮಧುಸೂದನ್ ಅವರಿಗೆ ಇನ್ನೂ ಬುದ್ದಿ ಬೆಳೆದಿಲ್ಲ. ಅನಾವಶ್ಯಕವಾಗಿ ಸಂವಿಧಾನದ ಬಗ್ಗೆ ಮಾತನಾಡುತ್ತಾನೆ. ಇಂತವರು ಪಕ್ಷದ ವಕ್ತಾರರಾಗುತ್ತಾರೆ ಎಂದು ಕಿಡಿ ಕಾರಿದರು.
 
ಎರಡು ಬಾರಿ ಎಂಎಲ್‍ಸಿ ಆಗಿರುವ ಗೋ.ಮಧುಸೂದನ್ ಅವರನ್ನು ಎಲ್ಲರೂ ಗೋ ಅನ್ನುತ್ತಾರೆ, ಕಮ್ ಅನ್ನೋದಿಲ್ಲಾ ಎಂದ ಅವರು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಮೋದಿ ಸರ್ಕಾರದಲ್ಲಿ ಮಂತ್ರಿಯಾಗಿರುವುದು ಅವಮಾನ ಎಂದಿದ್ದಾರೆ. ಸಂವಿಧಾನದ ಬಗ್ಗೆ ಪೇಜಾವರ ಶ್ರೀ ನೀಡಿರುವ ಹೇಳಿಕೆ ಖಂಡನೀಯ. ಮಠಾಧಿಪತಿಗಳು ಮಠದ ಕಾರ್ಯಗಳನ್ನು ಮಾಡಬೇಕು. ಉಳಿದೆಲ್ಲ ಕೆಲಸವನ್ನು ಮಾಡಬಾರದು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂ.ಜಿ.ರಸ್ತೆಯಲ್ಲಿ ಹೊಸವರ್ಷಾಚರಣೆ ಅನುಮತಿ ಬೇಡವೆಂದ ಸ್ವಾಮೀಜಿ

ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಬೇಕು ಎಂದು ...

news

ಪಾಕಿಸ್ತಾನ ಹೈಕಮಿಷನಿಗೆ ಚಪ್ಪಲಿ ಕಳುಹಿಸಿದ ಬಿಜೆಪಿ ನಾಯಕ

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ...

news

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ತುಮಕೂರು ಕ್ಷೇತ್ರ ಬಿಟ್ಟುಕೊಡಲು ಸಿದ್ದ– ಶಾಸಕ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ...

news

51 ಬಾಲಕಿಯರಿಗೆ ಮದರಸಾದಲ್ಲಿ ಲೈಂಗಿಕ ಶೋಷಣೆ

ಮದರಸಾ ಒಂದರಲ್ಲಿ 51 ಬಾಲಕಿಯರನ್ನು ಒತ್ತೆಯಾಳಾಗಿರಿಸಿಕೊಂಡು ಲೈಂಗಿಕವಾಗಿ ಶೋಷಿಸಿರುವ ಆತಂಕಕಾರಿ ಸಂಗತಿ ...

Widgets Magazine