ಟಿಪ್ಪು ಜಯಂತಿಯಲ್ಲಿ ಭಾಗಿಯಾದ ಬಿಜೆಪಿ ಶಾಸಕ ಆನಂದ್ ಸಿಂಗ್ ಓರ್ವ ಸ್ವಾಭಿಮಾನಿ: ಸಚಿವ ತಿಮ್ಮಾಪೂರ್

ಬಾಗಲಕೋಟೆ, ಶುಕ್ರವಾರ, 10 ನವೆಂಬರ್ 2017 (14:55 IST)

ಬಿಜೆಪಿ ಶಾಸಕ ಆನಂದ್ ಸಿಂಗ್ ಓರ್ವ ಸ್ವಾಭಿಮಾನಿಯಾಗಿದ್ದರಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಅಬಕಾರಿ ಖಾತೆ ಸಚಿವ ಆರ್.ಬಿ.ತಿಮ್ಮಾಪೂರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸಪೇಟೆಯಲ್ಲಿ ಬಿಜೆಪಿ ಶಾಸಕ ಆನಂದ ಸಿಂಗ್ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಅವರು ಸ್ವಾಭಿಮಾನಿ ಮತ್ತು ಆತ್ಮಗೌರವವುಳ್ಳವರಾಗಿದ್ದಾರೆ. ಆನಂದ್ ಸಿಂಗ್ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಪ್ರಶಂಸಿದರು.
 
ಬಿಜೆಪಿಯವರು ಟಿಪ್ಪು ಸುಲ್ತಾನ್ ಜಯಂತಿಯನ್ನು ವಿರೋಧಿಸುತ್ತಾರೆ. ಇವರೆಲ್ಲಾ ನಕಲಿ ಹಿಂದುಗಳು. ಮುಂಬರುವ ದಿನಗಳಲ್ಲಿ ಮುಸ್ಲಿಂ ಸಮುದಾಯದ ಜನತೆ ಬಿಜೆಪಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಸಚಿವ ತಿಮ್ಮಾಪೂರ್ ಕಿಡಿಕಾರಿದ್ದಾರೆ. 
 
ಬಿಜೆಪಿಯ ಇತರ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡು ಬಿಜೆಪಿ ಕಚೇರಿಯ ಮುಂದೆಯೇ ಟಿಪ್ಪು ಜಯಂತಿ ಆಚರಿಸಿದ ಆನಂದ್ ಸಿಂಗ್, ಬಿಜೆಪಿ ವರಿಷ್ಠರ ವಿರೋಧ ಕಟ್ಟಿಕೊಂಡಂತಾಗಿದೆ.
 
ಬಳ್ಳಾರಿಯ ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯ ಸಂಖ್ಯೆ ಅಧಿಕವಾಗಿರುವುದರಿಂದ ಟಿಪ್ಪು ಜಯಂತಿ ಆಚರಿಸದಿದ್ದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಿರುಗೇಟು ಬೀಳುವ ಸಾಧ್ಯತೆಗಳಿವೆ ಎನ್ನುವ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿ ಆಚರಿಸಿದ್ದಾರೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಜೆಪಿ ಸಚಿವನಿಗೆ ಅರ್ಥವಾಗಿಲ್ವಂತೆ ಪ್ರಧಾನಿ ಮೋದಿಯ ಜಿಎಸ್‌ಟಿ

ಭೋಪಾಲ್: ದೇಶದಾದ್ಯಂತ ವಿಪಕ್ಷಗಳು ಜಿಎಸ್‌ಟಿ ಜಾರಿಗೊಳಿಸಿರುವ ಬಗ್ಗೆ ತೀವ್ರ ವಿರೋಧ ...

news

ವಿಧಾನಸಭೆ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧಿಸೋಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದಿಂದ ಇಬ್ಬರು ಮಾತ್ರ ...

news

ಟಿಪ್ಪು ಜಯಂತಿಗೆ ಬಿಜೆಪಿ ವಿರೋಧ: ಆದ್ರೆ ಬಿಜೆಪಿ ಶಾಸಕನಿಂದಲೇ ಟಿಪ್ಪು ಜಯಂತಿ ಆಚರಣೆ

ಬಳ್ಳಾರಿ: 'ಟಿಪ್ಪು ಸುಲ್ತಾನ್ ಕೊಲೆಗಡುಕ, ದೇಶದ್ರೋಹಿ, ಹಿಂದು ವಿರೋಧಿ ಎಂದು ಬಿಜೆಪಿ ಕಟುವಾಗಿ ...

news

ಯುಎಸ್- ಭಾರತ ವಹಿವಾಟು ಹೆಚ್ಚಿಸಲು ಆದ್ಯತೆ: ಸಿಜಿ ಬುರ್ಗೆಸ್

ನವದೆಹಲಿ: ಅನ್-ಲಾಕ್ ಯು.ಎಸ್.-ಇಂಡಿಯಾ ವಹಿವಾಟು ಸಂಭಾವ್ಯ ನಮ್ಮ ಎರಡು ದೇಶಗಳ ಎದುರಿಸುತ್ತಿರುವ ಅತ್ಯಂತ ...

Widgets Magazine
Widgets Magazine