ನಾಲಿಗೆ ಮತ್ತೆ ಹರಿಬಿಟ್ಟ ಬಿಜೆಪಿ ಶಾಸಕ; ವಿವಾದಾತ್ಮಕ ಹೇಳಿಕೆ

ವಿಜಯಪುರ, ಮಂಗಳವಾರ, 7 ಮೇ 2019 (19:08 IST)

ಎಲ್ಲರೂ ಒಂದೇ ಮದುವೆ ಆಗಿ,  ಎರಡೇ ಮಕ್ಕಳನ್ನು ಮಾಡಬೇಕು ಎಂದು ಮತ್ತೆ ಬಿಜೆಪಿ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ತಮ್ಮನಾಲಿಗೆಯನ್ನು ಹರಿಬಿಟ್ಟಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,   ಕಾಮನ್ ಸಿವಿಲ್ ಕೋಡ್   ಎಲ್ಲರಿಗೂ ಒಂದೇ ಆಗಬೇಕು. ಮೋದಿಮತ್ತೆ ಪ್ರಧಾನಿ ಆಗಲಿದ್ದು, ಎಲ್ಲರಿಗೂ ಕೋಡ್ ಅನ್ವಯವಾಗುವಂತೆ ಏಕರೂಪದ ಕಾನೂನು ಜಾರಿಗೆ ತರಲಾಗುವುದು ಎಂದರು.
 
ಎಲ್ಲರೂ ಒಂದೇ ಮದುವೆ ಆಗಿ,  ಎರಡೇ ಮಕ್ಕಳನ್ನು ಮಾಡಬೇಕು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದಲ್ಲಿ
ಕಾಶ್ಮೀರ 370ನೇ ವಿಧಿ ತೆಗೆಯಲಾಗುವದು. ಸಮಾನ ನಾಗರಿಕ ಸಂಹಿತೆ ತರಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ, ಕಾಶಿ ವಿಶ್ವನಾಥ ಪುನಃ ನಿರ್ಮಾಣ ಮಾಡಲಾಗುವುದು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 300ಕ್ಕಿಂತ ಹೆಚ್ಚು ಸ್ಥಾನ ಬರಲಿದೆ ಎಂದರು. ಈ ಮೂಲಕ ಮತ್ತೆ ಮೋದಿ ಪ್ರಧಾನಿ ಆಗುತ್ತಾರೆಂದು ಯತ್ನಾಳ್ ನುಡಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಂಡ್ಯ ಮಕ್ಕಳ ಮೇಲೆ ಎಲೆಕ್ಷನ್ ಪ್ರಭಾವ ಹೇಗಿದೆ ನೋಡಿ; ವೈರಲ್

ಚಿಕ್ಕ ಮಕ್ಕಳ ಮೇಲೆ ಪ್ರಭಾವ ಬೀರುತ್ತಿದೆ ಮಂಡ್ಯ ಲೋಕಸಭಾ ಚುನಾವಣೆ.

news

ಹಣ ದುಪ್ಪಟ್ಟು ಮಾಡೋದಾಗಿ ವಂಚಿಸುತ್ತಿದ್ದ ಗ್ಯಾಂಗ್ ಅಂದರ್

ಹಣ ದುಪ್ಪಟ್ಟು ಮಾಡಿಕೊಡುತ್ತೇವೆಂದು ವಂಚನೆ ಮಾಡುತ್ತಿದ್ದ ಗ್ಯಾಂಗ್ ಅಂದರ್ ಆಗಿದೆ.

news

ಲಂಗರು ಹಾಕಿದ್ದ ಬೋಟ್ ಏನಾಯ್ತು? ಶಾಕಿಂಗ್

ಲಂಗರು ಹಾಕಲಾಗಿದ್ದ ಬೋಟ್ ಗೆ ಬರಬಾರದ ಸ್ಥಿತಿ ಬಂದಿದೆ.

news

ಖರ್ಗೆ ಕೋಟೆಯಲ್ಲಿ ಠಿಕಾಣಿ ಹೂಡಿದೋರು ಯಾರು?

ಬಿಸಿಲೂರು ಖರ್ಗೆಯವರ ಭದ್ರ ಕೋಟೆ. ಇಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೈ ಪಡೆ ನಾಯಕರು ಭದ್ರವಾಗಿ ...

Widgets Magazine