ಕೆರೆಗಳ ರಕ್ಷಣೆಗೆ ಧಾವಿಸುವಂತೆ ರಾಜ್ಯಪಾಲರಿಗೆ ಸಂಸದೆ ಶೋಭಾ ಮನವಿ

ಬೆಂಗಳೂರು, ಬುಧವಾರ, 26 ಜುಲೈ 2017 (16:22 IST)

ರಾಜ್ಯ ಸರಕಾರ 1500 ಕೆರೆಗಳ ಡಿನೋಟಿಫಿಕೇಶನ್‌ಗೆ ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ಕೆರೆಗಳ ರಕ್ಷಣೆಗೆ ಧಾವಿಸುವಂತೆ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪತ್ರ ಬರೆದಿದ್ದಾರೆ. 
 
ರಾಜ್ಯ ಸರಕಾರ 1500 ನಿರ್ಜೀವ ಕೆರೆಗಳ ಡಿನೋಟಿಫಿಕೇಶನ್ ಮಾಡುವ ಪ್ರಸ್ತಾವನೆ ಸರಕಾರದ ಮುಂದಿರುವುದರಿಂದ ಕೂಡಲೇ ರಾಜ್ಯಪಾಲ ವಜುಭಾಯಿ ವಾಲಾ ಮಧ್ಯಪ್ರವೇಶಿಸಬೇಕು ಎಂದು ಕೋರಿದ್ದಾರೆ. 
 
ಹರಳೂರು ಕೆರೆ ಮತ್ತು ಸಾರಕ್ಕಿ ಕೆರೆಗಳ ಮಹತ್ವದ ಬಗ್ಗೆ ಸಂಪೂರ್ಣ ವಿವರಣೆಯನ್ನು ರಾಜ್ಯಪಾಲರಿಗೆ ರವಾನಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಸರಕಾರ ರಿಯಲ್ ಎಸ್ಟೇಟ್‌ಗೆ ಆಸ್ಪದ ನೀಡುತ್ತಿದೆ ಎಂದು ಆರೋಪಿಸಿದರು.
 
ರಾಜ್ಯ ಸರಕಾರ ರಿಯಲ್ ಎಸ್ಟೇಟ್ ಲಾಬಿಗೆ ಮಣಿದು ಕೆರೆಗಳ ಡಿನೋಟಿಫಿಕೇಶನ್ ಮಾಡುತ್ತಿದೆ. ಕೆರೆಗಳ ಡಿನೋಟಿಪಿಕೇಶನ್ ಮಾಡದಂತೆ ನಿರ್ದೇಶನ ನೀಡುವಂತೆ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರೈಗೆ ಗೃಹಸಚಿವ ಸ್ಥಾನ ನೀಡಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ: ಆರ್. ಅಶೋಕ್

ಬೆಂಗಳೂರು: ಮಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ...

news

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಯಾರೂ ಹೇಳಿದ್ದು? : ಸಿಎಂ

ಬೆಂಗಳೂರು: ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ನೀಡಲಾಗುವುದು ಎನ್ನುವ ವರದಿಗಳನ್ನು ...

news

ನಿತೀಶ್ ಕುಮಾರ್‌ನನ್ನು ಸಿಎಂ ಮಾಡಿದ್ದು ನಾನು: ಲಾಲೂ ಗುಡುಗು

ಪಾಟ್ನಾ: ನಿತೀಶ್ ಕುಮಾರ್‌ನನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ...

news

ಬೆಂಗಳೂರಿನಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ

ಬೆಂಗಳೂರು: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ...

Widgets Magazine