ರಾಜ್ಯ ಬಿಜೆಪಿಗೆ ಮೋದಿ ಬಲವೊಂದೇ ಸಾಕೇ?

ಬೆಂಗಳೂರು, ಮಂಗಳವಾರ, 6 ಮಾರ್ಚ್ 2018 (08:44 IST)

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೇರುವ ಕನಸು ಕಾಣುತ್ತಿರುವ ಬಿಜೆಪಿಗೆ ಏನೋ ಒಂದು ಕೊರತೆ ಕಾಣುತ್ತಿದೆ.
 
ಈಗಾಗಲೇ ಹಲವು ರಾಜ್ಯಗಳಲ್ಲಿ ಗೆದ್ದು ಬೀಗುತ್ತಿರುವ ಬಿಜೆಪಿಗೆ ಇಲ್ಲಿ ಗೆಲುವು ಅಷ್ಟು ಸುಲಭವಲ್ಲ. ಬಿಜೆಪಿ ನಾಯಕರೊಳಗಿನ ಕಚ್ಚಾಟ, ಅವಕಾಶ ಸಿಕ್ಕಾಗ ಎದುರಾಳಿಗಳಿಗೆ ಸರಿಯಾದ ರೀತಿಯಲ್ಲಿ ಗುದ್ದುಕೊಡುವ ಝಲಕ್ ಇಲ್ಲದೇ ರಾಜ್ಯ ಬಿಜೆಪಿ ಸೊರಗಿದೆ.
 
ಹೀಗಾಗಿ ರಾಷ್ಟ್ರ ನಾಯಕರೇ ಬಿಜೆಪಿಗೆ ಬಲ. ಆದರೆ ಪ್ರಧಾನಿ ಮೋದಿಯ ಮಾತಿನ ಬಲವೊಂದರಿಂದಲೇ ಗೆಲುವು ಸುಲಭವಲ್ಲ. ಅಷ್ಟೇ ಅಲ್ಲ, ಆಗಾಗ ನಡೆಸುವ ಪಾದ ಯಾತ್ರೆಗಳು, ರ್ಯಾಲಿಗಳು ಮತ ಗಳಿಸಲು ಸಾಕಾಗಲ್ಲ.
 
ಕಳೆದ ಬಾರಿ ಅಧಿಕಾರದಲ್ಲಿದ್ದಾಗ ಬಿಜೆಪಿ ನಾಯಕರ ಕಚ್ಚಾಟವನ್ನು ಜನ ಮರೆತಿಲ್ಲ. ಅಷ್ಟೇ ಅಲ್ಲ, ಸಿಎಂ ಸಿದ್ದರಾಮಯ್ಯನವರ ನಾಯಕತ್ವ ಮೆಚ್ಚಿಕೊಂಡ ಜನರಿದ್ದಾರೆ. ಹಾಗಿರುವಾಗ ಅವರನ್ನೇ ಟಾರ್ಗೆಟ್ ಮಾಡುವ ಮೋದಿ ಭಾಷಣಗಳು ಹೆಚ್ಚು ಪ್ರಯೋಜನವಾಗದು.
 
ಸದ್ಯಕ್ಕೆ ಬಿಜೆಪಿಗೆ ಬೇಕಾಗಿರುವುದು ಹೊಸ ಭರವಸೆ ನೀಡುವ ನಾಯಕತ್ವ. ಅದಕ್ಕೆ ಪಕ್ಷದೊಳಗಿ ನಾಯಕರು ಭಿನ್ನಮತ ಮರೆಯಬೇಕು, ಏಕತೆ ಮೆರೆಯಬೇಕು.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಹುಲ್ ಗಾಂಧಿ ಬಲಹೀನತೆಯೇ ಇದು!

ನವದೆಹಲಿ: ರಾಜಕೀಯಕ್ಕಿಳಿದ ಮೇಲೆ ಸದಾ ರಾಜಕಾರಣಿಯಾಗಿಯೇ ಇರಬೇಕು. ಒಂದು ದೊಡ್ಡ ಪಕ್ಷದ ಚುಕ್ಕಾಣಿ ಹಿಡಿದ ...

news

ವೈಯಕ್ತಿಕ ವಿಚಾರಕ್ಕೆ ಬಿಜೆಪಿ ಬಿಟ್ಟಿಲ್ಲ- ಆನಂದಸಿಂಗ್

ಸ್ವಾರ್ಥಿಯಾಗಿದ್ದರೆ ಬಿಜೆಪಿಯಲ್ಲೇ ಇರುತ್ತಿದ್ದೆ, ನಾನು ವೈಯಕ್ತಿಕ ವಿಚಾರಗಳಿಗಾಗಿ ಪಕ್ಷ ಬಿಟ್ಟಿಲ್ಲ ಎಂದು ...

news

ಭಯೋತ್ಪಾದಕರನ್ನು ಸೃಷ್ಠಿಸುವ ಕೈಗಾರಿಕೆ ಮುಚ್ಚಿಸಲು ಕ್ರಮ- ರೆಡ್ಡಿ

ಕರಾವಳಿಯಲ್ಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತಿರುವ ಎರಡು ಕೈಗಾರಿಕೆಗಳನ್ನು ಮುಚ್ಚಿಸುವ ಕೆಲಸವನ್ನು ಪೊಲೀಸ್ ...

news

ಬಿಜೆಪಿಗೆ ಸೇರ್ಪಡೆಯಾಗುತ್ತಾರಾ ಉಪೇಂದ್ರ?

ಬೆಂಗಳೂರು: ಕೆಪಿಜೆಪಿ ಪಕ್ಷದಿಂದ ಹೊರಬರಲಿರುವ ನಟ ಉಪೇಂದ್ರ ಬಿಜೆಪಿ ಸೇರುತ್ತಾರಾ? ಹೀಗೊಂದು ಸುದ್ದಿ ...

Widgets Magazine
Widgets Magazine