ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆಗೆ ಬಿಜೆಪಿ ವಿರೋಧ

ಮಂಗಳೂರು, ಬುಧವಾರ, 10 ಅಕ್ಟೋಬರ್ 2018 (14:40 IST)

ಗೋ ಕಳ್ಳರಿಗೆ ರಕ್ಷಣೆ ಕೊಡುವ ಕೆಲಸ ಸರಕಾರದವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
 
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮುಖಂಡರು ಸುದ್ದಿಗೋಷ್ಟಿ ನಡೆಸಿದ್ದು, ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಬಳಕೆಗೆ ಮುಂದಾಗುತ್ತಿರುವ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಸತಿ ಸಚಿವ ಯುಟಿ ಖಾದರ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮುಖಂಡರು, ಜನರ, ಬಿಜೆಪಿ ಶಾಸಕರ ಅಭಿಪ್ರಾಯ ಕೇಳಲಿಲ್ಲ. 15 ಕೋಟಿ ಅನುದಾನವನ್ನು ಲೂಟಿ ಮಾಡುವ ಪ್ರಯತ್ನ ಇದಾಗಿದೆ ಎಂದು ದೂರಿದ್ದಾರೆ.

ಇವರೇನು ತುಘಲಕ್, ಹಿಟ್ಲರ್ ರಾಜಕೀಯ ಮಾಡುತ್ತಿದ್ದಾರೆಯೇ..? ಎಂದು ಪ್ರಶ್ನಿಸಿರುವ ಅವರು, ವಸತಿ ಸಚಿವರು ಅಧಿಕಾರ ದುರ್ಬಳಕೆ ಮಾಡುತ್ತಿದ್ದಾರೆ ಎಂದೂ ಟೀಕೆ ಮಾಡಿದ್ದಾರೆ.

ಮುಂದಿನ ದಿನಗಳಲ್ಲಿ ನಾವು ಹೋರಾಟಕ್ಕೆ ಸಿದ್ದಗೊಳ್ಳುತ್ತೇವೆ. ಸ್ಮಾರ್ಟ್ ಸಿಟಿ ಯೋಜನೆ ಇರುವುದು ಅಭಿವೃದ್ಧಿಗಾಗಿ ಎಂದು ಮಂಗಳೂರಲ್ಲಿ ಶಾಸಕ, ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ್ ಮಠಂದೂರು ಮಾಡಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆಗೆ ಬಿಜೆಪಿ ವಿರೋಧ

ಗೋ ಕಳ್ಳರಿಗೆ ರಕ್ಷಣೆ ಕೊಡುವ ಕೆಲಸ ಸರಕಾರದವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಕಸಾಯಿಖಾನೆಗೆ ಸ್ಮಾರ್ಟ್ ಸಿಟಿ ಅನುದಾನ ಬಳಕೆಗೆ ಬಿಜೆಪಿ ವಿರೋಧ

ಗೋ ಕಳ್ಳರಿಗೆ ರಕ್ಷಣೆ ಕೊಡುವ ಕೆಲಸ ಸರಕಾರದವರು ಮಾಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

news

ಹದಗೆಟ್ಟ ರಸ್ತೆ ಸರಿಪಡಿಸಿದ ಮಹಿಳೆಯರು

ರಸ್ತೆ ದುರಸ್ಥಿ ಮಾಡಿಸಿಕೊಡಿ ಎಂದು ಗ್ರಾಮ ಪಂಚಾಯಿತಿಗೆ ಆಗ್ರಹ, ಮನವಿ ಮಾಡಿದರೂ ಪ್ರಯೋಜನವಾಗದ ...

news

ಹುಡುಗಿಯರ ಕಣ್ಣಿಗೆ ಕುತ್ತು ತಂದ ಸೀತಾಫಲ ಹಣ್ಣಿನ ಬೀಜ

ಕೊಪ್ಪಳ : ಸೌಂದರ್ಯಕ್ಕೆ ಮಾರು ಹೋಗಿ ಹುಡುಗಿಯರು ಎಂತಹ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಆದರೆ ಇದೀಗ ...

Widgets Magazine