ಕಲಘಟಗಿ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಎಂ.ನಿಂಬಣ್ಣವರ್ ನಾಮಪತ್ರ ಸಲ್ಲಿಸಲು ತೆರಳುವಾಗ ಕುಸಿದು ಬಿದ್ದ ಘಟನೆ ಕಲಘಟಗಿ ತಹಶೀಲ್ದಾರರ ಕಛೇರಿ ಬಳಿ ನಡೆದಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಇವರ ಕೈತಪ್ಪಿ ಟಿಕೆಟ್ ಮಹೇಶ ಟೆಂಗಿನಕಾಯಿಯವರ ಪಾಲಾಗಿತ್ತು. ಇದರಿಂದ ಹಲವು ಬಾರಿ ಪ್ರತಿಭಟನೆ ನಡೆಸಿದ ಬೆಂಬಲಿಗರು ನಿಂಬಣ್ಣವರ್ ಅವರನ್ನು ಬಂಡಾಯವಾಗಿ ಸ್ಪರ್ಧೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಬೆಂಬಲಿಗರ ಒತ್ತಾಯಕ್ಕೆ ಮಣಿದ ನಿಂಬಣ್ಣವರ್ ಕಲಘಟಗಿ ಪಟ್ಟಣದ