ಕರ್ನಾಟಕದಲ್ಲಿ ದೋಸ್ತಿ ಸರಕಾರವನ್ನು ಅಲುಗಾಡಿಸಲು ಬಿಜೆಪಿಯಿಂದಾಗದು- ರಾಹುಲ್ ಗಾಂಧಿ ಸ್ಪಷ್ಟನೆ

ಅಹಮದಾಬಾದ್, ಶನಿವಾರ, 13 ಜುಲೈ 2019 (06:14 IST)

ಅಹಮದಾಬಾದ್ : ರಾಜ್ಯ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು, ಇದಕ್ಕೆ ಬಿಜೆಪಿಯೇ ನೇರ ಹೊಣೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.




ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲ, ಅಧಿಕಾರ ಬಲ, ಬೆದರಿಕೆ ತಂತ್ರವನ್ನು ಬಿಜೆಪಿ ಅನುಸರಿಸುತ್ತಿದೆ. ರಾಜ್ಯ ಸರಕಾರಗಳನ್ನು ಉರುಳಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರಕಾರವನ್ನು ಬಿಕ್ಕಟ್ಟಿಗೆ ಸಿಲುಕಿಸಲಾಗಿದೆ. ಇದಕ್ಕೆ ಬಿಜೆಪಿ ವರಿಷ್ಠ ನಾಯಕರ ಕುಮ್ಮಕ್ಕಿದೆ ಎಂದು ಕಿಡಿಕಾರಿದ್ದಾರೆ.


ಇದೇ ರೀತಿ ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲೂ ಬಿಜೆಪಿ ಸರಕಾರಗಳನ್ನು ಉರುಳಿಸಲು ಪ್ರಯತ್ನಿಸುತ್ತಿದೆ. ಎಲ್ಲ ಬೆಳವಣಿಗೆಗಳು ಸ್ಪಷ್ಟವಾಗಿದೆ. ಬಿಜೆಪಿಯು ಇದೇ ರೀತಿ ಎಲ್ಲಡೆ ಮಾಡುತ್ತಿರುವುದು ಅಧಿಕಾರದ ಸಂಪೂರ್ಣ ದುರುಪಯೋಗ ಆಗುತ್ತಿದ್ದಕ್ಕೆ ಸಾಕ್ಷಿಯಾಗಿದೆ. ಆದರೆ ಕರ್ನಾಟಕದಲ್ಲಿ ದೋಸ್ತಿ ಸರಕಾರವನ್ನು ಅಲುಗಾಡಿಸಲು ಆಗದು ಎಂದು ರಾಹುಲ್‌ ಗಾಂಧಿ ಸ್ಪಷ್ಟವಾಗಿ ತಿಳಿಸಿದ್ದಾರೆ.
 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಎಂಟಿಬಿ ನಾಗರಾಜ್ ರಾಜೀನಾಮೆ ಹಿಂದಿದೆಯಂತೆ ಬಿಜೆಪಿ ತಂತ್ರ

ಬೆಂಗಳೂರು : ಸಚಿವ ಎಂಟಿಬಿ ನಾಗರಾಜ್ ರಾಜೀನಾಮೆ ನೀಡಿರುವುದರ ಹಿಂದೆ ಬಿಜೆಪಿಯ ಮಾಸ್ಟರ್ ಪ್ಲ್ಯಾನ್ ಇದೆ ...

news

ಶಾಸಕರ ಕಾವಲು ಕಾಯೋದೇ ಈಗ ನಾಯಕರ ಕೆಲಸ! ಬೆಳ್ಳಂ ಬೆಳಿಗ್ಗೆ ಎಂಟಿಬಿ ಮನೆ ಮುಂದೆ ಪ್ರತ್ಯಕ್ಷರಾದ ಡಿಕೆಶಿ

ಬೆಂಗಳೂರು: ರಾಜ್ಯ ರಾಜಕೀಯ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ...

news

ಇಂದು ಶಿರಡಿ ಹಾಗೂ ಔರಂಗಾಬಾದ್‍ಗಳಿಗೆ ಪ್ರಯಾಣ ಬೆಳೆಸಲಿರುವ ಅತೃಪ್ತ ಶಾಸಕರು

ಮುಂಬೈ : ರಾಜೀನಾಮೆ ನೀಡಿ ಮುಂಬೈ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ ಮೈತ್ರಿ ಸರ್ಕಾರದ ಅತೃಪ್ತ ಶಾಸಕರು ...

news

ಹೂಸು ಬಿಟ್ಟು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ ಕಳ್ಳ!

ಅಮೇರಿಕಾ : ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಅವರಿಂದ ತಪ್ಪಿಸಿಕೊಡು ಅಡಗಿಕುಳಿತ ಕಳ್ಳನೊಬ್ಬನು ಜೋರಾಗಿ ...