ಹುಣಸೂರು ಬಂದ್ ವಾಪಸ್ ಪಡೆದ ಬಿಜೆಪಿ

ಮೈಸೂರು, ಸೋಮವಾರ, 4 ಡಿಸೆಂಬರ್ 2017 (10:05 IST)

ಬಿಜೆಪಿ ಸಂಸದ ಪ್ರತಾಪಸಿಂಹ ಅವರ ಬಂಧನ ಖಂಡಿಸಿ ಬಿಜೆಪಿ ಕರೆ ನೀಡಿದ್ದ ಹುಣಸೂರು ಬಂದನ್ನು ವಾಪಸ್ ಪಡೆಯಲಾಗಿದೆ.
ಬಂದ್ ವಾಪಸ್ ಪಡೆದ ಹಿನ್ನೆಲೆಯಲ್ಲಿ ಎಂದಿನಂತೆ ದೈನಂದಿನ ಚಟುವಟಿಕೆಗಳು ಆರಂಭಗೊಂಡಿವೆ. ಬೆಳಿಗ್ಗೆ ಕೆಲವೆಡೆ ಅಂಗಡಿ ಮುಂಗಟ್ಟು ಬಂದ್ ಮಾಡಲಾಗಿತ್ತು.


ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಹುಣಸೂರು ಬಂದ್ ವಾಪಸ್ ಪಡೆಯಲಾಗಿದೆ ಎಂದು ಮೈಸೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಣ್ಣ ಹೇಳಿದ್ದಾರೆ.

ಹನುಮ ಜಯಂತಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಪ್ರತಾಪಸಿಂಹ ಅವರು ಹುಣಸೂರಿಗೆ ಬಂದಿದ್ದಾಗ ಬಂಧಿಸಲಾಗಿತ್ತು. ಇದನ್ನು ಖಂಡಿಸಿ ಹುಣಸೂರು ಬಂದ್ ಕರೆನೀಡಲಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ- ಈಶ್ವರಪ್ಪ

ಬಿಜೆಪಿ ರಾಜ್ಯಾಧ್ಯಾಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ವಿಧಾನ ಪರಿಷತ್ ವಿಪಕ್ಷ ...

news

ನರೇಂದ್ರಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಗುಜರಾತ ವಿಚಾರ ಪ್ರಸ್ತಾಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ...

news

ಹಾರ್ದಿಕ್ ಪಟೇಲ್ ಮೇಲೆ ಮತ್ತೊಂದು ಸೆಕ್ಸ್ ಪ್ರಕರಣ ಸಂಕಟ

ಅಹಮ್ಮದಾಬಾದ್: ಇತ್ತೀಚೆಗಷ್ಟೇ ಗುಜರಾತ್ ಪಟೇಲ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ವಿರುದ್ಧ ಲೈಂಗಿಕ ಸಿಡಿ ...

news

ತಂದೆಯಿಂದಲೇ ಹದಿ ಹರೆಯದ ಮಗಳ ಮೇಲೆ ಅತ್ಯಾಚಾರ

ನವದೆಹಲಿ: ತಂದೆಯಿಂದಲೇ ಮಗಳ ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ಇಂತಹದ್ದೇ ಮತ್ತೊಂದು ಘಟನೆ ...

Widgets Magazine