ಬಿಜೆಪಿ ಯಾತ್ರೆ ಮಾಡಿದಷ್ಟು ನಮಗೆ ಲಾಭ: ಸಿಎಂ ಲೇವಡಿ

ಬೆಂಗಳೂರು, ಶುಕ್ರವಾರ, 3 ನವೆಂಬರ್ 2017 (14:08 IST)

ಬಿಜೆಪಿ ನಾಯಕರು ಯಾತ್ರೆ ಮಾಡಿದಷ್ಟು ನಮಗೆ ಲಾಭವಾಗಲಿದೆ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿವರ್ತನೆ ಯಾತ್ರೆಗೆ ಜನತೆ ಬಾರದೇ ವಿಫಲಗೊಳಿಸಿದ್ದಾರೆ. ಬಿಜೆಪಿ ಯಾತ್ರೆ ಮಾಡಿದರೆ ನಮಗೇನು ಲಾಭವೆಂದು ಕೇಳುತ್ತಿರುವುದಾಗಿ ತಿಳಿಸಿದ್ದಾರೆ.
 
 ಯಡಿಯೂರಪ್ಪಗೆ ಈಗಾಗಲೇ ಜನತೆ ಬುದ್ದಿ ಕಲಿಸಿದ್ದಾರೆ. ಆದಾಗ್ಯೂ ಬಿಜೆಪಿ ನಾಯಕರು ಬುದ್ದಿಕಲಿಯುವ ಮನಸ್ಥಿತಿಯವರು ಎಂದು ನಾನು ಭಾವಿಸಿಲ್ಲ. ಆದರೆ, ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಿದ ನಂತರ ಬುದ್ದಿ ಕಲಿಯುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
 
ನಿನ್ನೆ ನಡೆದ ಬಿಜೆಪಿ ಪರಿವರ್ತನೆ ಯಾತ್ರೆಗೆ 3 ಲಕ್ಷ ಜನ ಸೇರಲಿದ್ದಾರೆ ಎಂದು ಬಿಜೆಪಿಯವರು ಹೇಳಿಕೆ ನೀಡಿದ್ದರು. ಆದರೆ, ಕನಿಷ್ಠ 20 ಸಾವಿರ ಜನ ಕೂಡಾ ಸೇರಲಿಲ್ಲ. ಬಿಜೆಪಿಯ ಬಗ್ಗೆ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಖಾಸಗಿ ವೈದ್ಯರನ್ನು ನಿಮ್ಮ ಗುಲಾಮರು ಅಂದುಕೊಡಿದ್ದೀರಾ?: ಕುಮಾರಸ್ವಾಮಿ ಕಿಡಿ

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರ ವಿರುದ್ಧ ಮನಬಂದಂತೆ ಹೇಳಿಕೆ ನೀಡುವ ಸಚಿವ ರಮೇಶ್ ಕುಮಾರ್ ...

news

ಯಾರೇ ಅಡ್ಡ ಬಂದ್ರೂ ಬಿಎಸ್‌ವೈ ಸಿಎಂ ಆಗೋದನ್ನು ತಪ್ಪಿಸಲು ಸಾಧ್ಯವಿಲ್ಲ: ಜಗ್ಗೇಶ್

ತುರುವೇಕೆರೆ: ಯಾರೇ ಅಡ್ಡ ಬಂದ್ರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ...

news

ರಾಜ್ಯದಾದ್ಯಂತ ವೈದ್ಯರ ಮುಷ್ಕರ: ಸಚಿವರಿಗೆ ಮಾಹಿತಿ ಇಲ್ಲವಂತೆ..!

ಬೆಂಗಳೂರು: ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರ ನಡೆಸುತ್ತಿದ್ದರೂ ಆರೋಗ್ಯ ಸಚಿವ ರಮೇಶ್ ...

news

`ಇತಿಹಾಸವಿಲ್ಲದೆ ರಾಷ್ಟ್ರಪತಿ ಕೋವಿಂದ್ ಟಿಪ್ಪು ಬಗ್ಗೆ ಮಾತನಾಡಿದ್ದಾರಾ..!?’

ಬೆಂಗಳೂರು: ಟಿಪ್ಪು ಜಯಂತಿ ವೋಟ್ ಬ್ಯಾಂಕ್ ರಾಜಕಾರಣ ಎಂಬ ಅಮಿತ್ ಷಾ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ...

Widgets Magazine
Widgets Magazine