ಲಕ್ಷ್ಮೀ ಹೆಬ್ಬಾಳ್ಕರ್ ಮನೆ ಮುಂದೆ ವಾಮಾಚಾರ..?

ಗುರುವಾರ, 20 ಏಪ್ರಿಲ್ 2017 (11:11 IST)

Widgets Magazine

ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಯಾರಾದರೂ ವಾಮಾಚಾರ ಮಾಡಿಸಿದ್ದಾರಾ..? ಬೆಳಗಾವಿಯ ಕುವೆಂಪು ನಗರದಲ್ಲಿರುವ ಅವರ ನಿವಾಸದ ಬಳಿ ವಾಮಾಚಾರಕ್ಕೆ ಬಳಸಲಾಗುವ ವಸ್ತುಗಳು ಪತ್ತೆಯಾಗಿವೆ.


ಮನೆಯ ಮುಂದೆ ಮತ್ತು ಕಾರಿನ ಕೆಳಗೆ ವಾಮಾಚಾರಕ್ಕೆ ಬಳಸುತ್ತಾರೆ ಎನ್ನಲಾಗುವ ಅರಿಶಿನ-ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಬೂದಕುಂಬಳಕಾಯಿ, ಮೊಟ್ಟೆ, ಹಸಿಮೆಣಸಿನಕಾಯಿ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.
 
ಈ ಕುರಿತು, ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳ್ಕರ್, ನಾವು ವಾಮಾಚಾರವನ್ನ ನಂಬುವುದಿಲ್ಲ. ಆದರೂ ಕೆಲ ದಿನಗಳಿಂದ ನಡೆದಿರುವ ಘಟನೆಗಳು ನೋವುಂಟುಮಾಡಿವೆ, ಇತ್ತೀಚೆಗೆ ನನ್ನ ಸಹೋದರನ ಕಾರು ಮತ್ತು ನನ್ನ ಕಾರು ಅಪಘಾತಕ್ಕೀಡಾಗಿತ್ತು. ವಾಮಾಚಾರದಿಂದಲೇ ಈ ರೀತಿ ಆಗುತ್ತಿದೆಯಾ..? ಎಂಬ ಅನುಮಾನ ಮೂಡಿದ್ದು, ಮಾನಸಿಕ ಕಿರಿಕಿರಿಯಾಗುತ್ತಿದೆ. ನಮ್ಮ ರಾಜಕೀಯ ವಿರೋಧಿಗಳೇ ಮಾಡಿರಬಹುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಲಕ್ಷ್ಮೀ ಹೆಬ್ಬಾಳ್ಕರ್ ಡಿ.ಕೆ. ಶಿವಕುಮಾರ್ Dkshi Black Magic Lakshmi Hebbalkar

Widgets Magazine

ಸುದ್ದಿಗಳು

news

ಅಂಬರೀಷ್ ಮನೆಗೆ ಸಿಎಂ ದಿಢೀರ್ ಭೇಟಿ: ಕುತೂಹಲ ಕೆರಳಿಸಿದ ಮಾತುಕತೆ

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ಅಂಡ್ ಟೀಮ್ ಮಾಜಿ ಸಚಿವ ಅಂಬರೀಷ್ ಮನೆಗೆ ತೆರಳಿ ...

news

ದಿನಕರನ್`ಗೆ ಮಧ್ಯರಾತ್ರಿ ದೆಹಲಿ ಪೊಲೀಸರ ಸಮನ್ಸ್

ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ...

news

ಎಚ್.ಡಿ. ಕುಮಾರಸ್ವಾಮಿ ಮೇಲೆ ನೋಟಿನ ದಾಳಿ

ಮಂಡ್ಯ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಲೆ ಕಾರ್ಯಕರ್ತನೊಬ್ಬ ನೋಟುಗಳ ಕಂತೆ ಕಂತೆಯನ್ನು ...

news

ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚು: ಸತೀಶ್ ಜಾರಕಿಹೊಳಿ

ಯಮಕನಮರಡಿ: ಸ್ವಾಭಿಮಾನದ ಕಿಚ್ಚು ಎಲ್ಲರಿಗಿಂತ ನನಗೆ ಹೆಚ್ಚಾಗಿದೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ...

Widgets Magazine