15 ಸಚಿವರೇಕೆ, ಇಡೀ ಸಚಿವ ಸಂಪುಟವನ್ನೇ ಕರೆ ತನ್ನಿ: ಶ್ರೀನಿವಾಸ್ ಪ್ರಸಾದ್

ಮೈಸೂರು, ಶುಕ್ರವಾರ, 17 ಮಾರ್ಚ್ 2017 (12:24 IST)

Widgets Magazine

ನಂಜನಗೂಡು ಉಪಚುನಾವಣೆಯಲ್ಲಿ 15 ಸಚಿವರೇಕೆ, ಇಡೀ ಸಚಿವ ಸಂಪುಟವನ್ನೇ ಕರೆ ತನ್ನಿ ಎಂದು ಮಾಜಿ ಸಚಿವ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸವಾಲ್ ಹಾಕಿದ್ದಾರೆ.
 
ನಂಜನಗೂಡು ಉಪಚುನಾವಣೆಯಲ್ಲಿ ಪ್ರತಿಯೊಂದು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಒಬ್ಬೊಬ್ಬ ಸಚಿವರನ್ನು ನಿಯುಕ್ತಿಗೊಳಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ನೀಡಿದ ಹೇಳಿಕೆಗೆ  ಪ್ರಸಾದ್ ಪ್ರತಿಕ್ರಿಯೆ ನೀಡಿದ್ದಾರೆ.
 
ಸಿಎಂ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟವನ್ನು ನಂಜನಗೂಡಿಗೆ ಕರೆತಂದರೂ ನನ್ನ ಗೆಲುವು ಖಚಿತ. ನಂಜನಗೂಡಿನ ಜನತೆ ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ರೈತರ ಅರ್ಧ ಸಾಲವನ್ನು ಮನ್ನಾ ಮಾಡಿ ಇನ್ನರ್ಧ ಸಾಲದ ಬಗ್ಗೆ ಕೇಂದ್ರ ಸರಕಾರದ ಮೊರೆಹೋಗಬೇಕಾಗಿತ್ತು. ಅದನ್ನು ಬಿಟ್ಟು ಕೇಂದ್ರ ಸರಕಾರ ಮನ್ನಾ ಮಾಡಿದರೆ ಮಾತ್ರ ನಾನು ಸಾಲ ಮನ್ನಾ ಮಾಡುತ್ತೇನೆ ಎನ್ನುವುದು ಸರಿಯಲ್ಲ ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶ್ರೀನಿವಾಸ್ ಪ್ರಸಾದ್ ನಂಜನಗೂಡು ಉಪಚುನಾವಣೆ ಬಿಜೆಪಿ ಕಾಂಗ್ರೆಸ್ Srinivasprasad Nanjanagudu Byelection Bjp Congress

Widgets Magazine

ಸುದ್ದಿಗಳು

news

ವಿಪಕ್ಷಗಳ ಧರಣಿ ರಾಜಕೀಯ ಸಂಚು: ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ವಿಧಾನಸೌಧಧಲ್ಲಿ ವಿಪಕ್ಷಗಳು ಧರಣಿ ಮುಂದುವರಿಕೆಯಿಂದ ಸಿಡಿಮಿಡಿಗೊಂಡ ಸಿಎಂ ಸಿದ್ದರಾಮಯ್ಯ ...

news

ಮತ್ತಷ್ಟು ಕಾಂಗ್ರೆಸ್, ಜೆಡಿಎಸ್ ಶಾಸಕರು ಬಿಜೆಪಿಗೆ: ಯಡಿಯೂರಪ್ಪ

ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ಪಕ್ಷಗಳ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲು ತುದಿಗಾಲ ಮೇಲೆ ...

news

ಉತ್ತರ ಪ್ರದೇಶ ಮುಖ್ಯಮಂತ್ರಿ ಹೆಸರು ಫಿಕ್ಸ್!

ಲಕ್ನೋ: ಉತ್ತರ ಪ್ರದೇಶಕ್ಕೆ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಕೊನೆಗೂ ಬಿಜೆಪಿ ಉತ್ತರ ಕಂಡುಕೊಂಡಿದೆ. ...

news

ಪ್ರಯಾಣಿಕರ ಜೀವವುಳಿಸಿ ಸಾವನ್ನಪ್ಪಿದ ಚಾಲಕ!

ತುಮಕೂರು: ಈ ಬಸ್ ಚಾಲಕ ಸಾವಿನಲ್ಲೂ ಸಾಹಸ ಮಾಡಿದ್ದಾರೆ. ತಾನು ಸಾಯುವ ಸ್ಥಿತಿಯಲ್ಲಿದ್ದರೂ, ಸಮಯಪ್ರಜ್ಞೆ ...

Widgets Magazine