ಏರೋ ಇಂಡಿಯಾ ಸ್ಥಳಾಂತರವಾಗುತ್ತೆ ಎಂದವರೆಲ್ಲಾ ಈಗ ಕ್ಷಮೆ ಯಾಚಿಸಲಿ: ಬಿಎಸ್ ವೈ

ಬೆಂಗಳೂರು, ಸೋಮವಾರ, 10 ಸೆಪ್ಟಂಬರ್ 2018 (09:15 IST)

ಬೆಂಗಳೂರು: ಈ ಬಾರಿ ಏರ್ ಶೋ ಬೆಂಗಳೂರಿನಲ್ಲಿ ನಡೆಯದೇ ಉತ್ತರ ಪ್ರದೇಶಕ್ಕೆ ಸ್ಥಳಾಂತರವಾಗಲಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೇ ಕಾಂಗ್ರೆಸ್-ಜೆಡಿಎಸ್ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು.
 
ಇದೀಗ ಕೇಂದ್ರ ಸರ್ಕಾರವೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಏರೋ ಇಂಡಿಯಾ ಶೋ ಯಾವುದೇ ಕಾರಣಕ್ಕೂ ಬೆಂಗಳೂರಿನಿಂದ ಸ್ಥಳಾಂತರವಾಗದು ಎಂದಿದೆ. ಹೀಗಾಗಿ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
 
‘ಎಂದಿನಂತೆ ಈ ಬಾರಿಯೂ ಏರೋ ಇಂಡಿಯಾ ಶೋವನ್ನು ಫೆ.20 ರಂದು ಬೆಂಗಳೂರಿನಲ್ಲೇ ನಡೆಸುವುದಾಗಿ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ. ಕೇಂದ್ರ ಸರ್ಕಾರವನ್ನು ಅವಹೇಳನ ಮಾಡುವ ದುರುದ್ದೇಶದಿಂದ ಏರ್ ಶೋ ಸ್ಥಳಾಂತರವಾಗಲಿದೆ ಎಂದು ಅಪಪ್ರಚಾರ ಮಾಡಿ ಕನ್ನಡಿಗರಲ್ಲಿ ಆತಂಕ ಸೃಷ್ಟಿಸಿದ ಕಾಂಗ್ರೆಸ್-ಜೆಡಿಎಸ್ ಈಗ ಕ್ಷಮೆ ಯಾಚಿಸಲಿ’ ಎಂದು ಬಿಎಸ್ ವೈ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೈಲಾಸ ಯಾತ್ರೆ ಬಳಿಕ ರಾಹುಲ್ ಗಾಂಧಿ ಮುಂದಿನ ಭೇಟಿ ಎಲ್ಲಿಗೆ ಗೊತ್ತಾ?

ನವದೆಹಲಿ: ಇದೀಗ ಪವಿತ್ರ ಯಾತ್ರಾ ಸ್ಥಳ ಕೈಲಾಸ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಅಧ‍್ಯಕ್ಷ ರಾಹುಲ್ ಗಾಂಧಿ ...

news

ಭ್ರಷ್ಟಾಚಾರ ನಿಗ್ರಹ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾದ ಕೇಂದ್ರ

ನವದೆಹಲಿ : ಭ್ರಷ್ಟಾಚಾರ ನಿಗ್ರಹ ಕಾನೂನನ್ನು ಮತ್ತಷ್ಟು ಬಿಗಿಗೊಳಿಸಲು ಮುಂದಾಗಿರುವ ಕೇಂದ್ರ ಸರಕಾರ, ಈ ...

news

ಪತ್ನಿಯ ಅಕ್ರಮ ಸಂಬಂಧ ಕಣ್ಣಾರೆ ಕಂಡ ಪತಿ, ಮಾಡಿದ್ದನ್ನು ಕೇಳಿದರೆ ಬೆಚ್ಚಿ ಬೀಳ್ತೀರಾ!

ಚಿಕ್ಕಮಗಳೂರು : ಪತ್ನಿ ಪರಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಕಣ್ಣಾರೆ ಕಂಡ ಪತಿ ಆಕೆಯ ...

news

ಇಂದು ಭಾರತ ಬಂದ್ ; ಏನೆಲ್ಲಾ ಇದೆ? ಏನೆಲ್ಲಾ ಇಲ್ಲ?

ನವದೆಹಲಿ : ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಯಾಗಿರುವ ಹಿನ್ನಲೆಯಲ್ಲಿ ಇಂದು ಕಾಂಗ್ರೆಸ್ ಪಕ್ಷ ...

Widgets Magazine
Widgets Magazine