ಮಳೆ ಹಾನಿ ಪ್ರದೇಶಕ್ಕೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿಸುತ್ತೇನೆ ಎಂದ ಬಿಎಸ್ ವೈ

ಮೈಸೂರು, ಭಾನುವಾರ, 19 ಆಗಸ್ಟ್ 2018 (14:34 IST)

ಕೊಡಗು‌ ಹಾಗೂ ಇತರೆ ಜಿಲ್ಲೆಗಳ ಮಳೆ ಹಾನಿ ಪ್ರದೇಶಗಳ ನೆರವಿಗೆ ಕೇಂದ್ರ ಸರ್ಕಾರದಿಂದ  ಇನ್ನಷ್ಟು ಬಿಡುಗಡೆ ಮಾಡುವಂತೆ  ಶಿಫಾರಸು ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.
 
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ 100 ಕೋಟಿ ಬಿಡುಗಡೆ ಮಾಡಿದೆ. ಇನ್ನಷ್ಟು ಅನುದಾನ ಬಿಡುಗಡೆಗೊಳಿಸುವಂತೆ ಪ್ರಧಾನಿ ಮೋದಿ ಅವರಿಗೆ ಕೇಳುವೆ.
ರಾಜ್ಯ ಸರ್ಕಾರ ಇನ್ನೂ ಕ್ರಮಗಳನ್ನು ತೆಗೆದುಕೊಳ್ಳಬೇಕು. ರಾಜ್ಯ ಸರ್ಕಾರದ ಕಾರ್ಯವೈಖರಿ ಸಾಲುತ್ತಿಲ್ಲ ಎಂದರು.
 
ಮಳೆಯಿಂದ ಕೊಡಗು‌‌ ಜಿಲ್ಲೆಗಳಲ್ಲಿ ಮನೆ ಕಳೆದುಕೊಂಡರಿಗೆ ಪ್ರಧಾನಿ ಅವಾಸ್ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿ ಕೊಡಲಾಗುವುದು. ಮಳೆ ಅವಾಂತರದಿಂದ ಕೊಡಗು ಜಿಲ್ಲೆ ಜಲ ಪ್ರಳಯದಿಂದ ನಮ್ಮ ಶಾಸಕರು ಹಾಗೂ ಸಂಸದರು ಸ್ಥಳದಲ್ಲಿಯೇ ಇದ್ದಾರೆ ಎಂದು ತಿಳಿಸಿದರು.
 
ಸ್ಥಳೀಯ ಚುನಾವಣೆ ವಿಚಾರದಲ್ಲಿ ನನ್ನ ಹಸ್ತಕ್ಷೇಪ ಇಲ್ಲ. ಅರವಿಂದ ಲಿಂಬವಾಳಿ ನೇತೃತ್ವದಲ್ಲಿ ಅಭ್ಯರ್ಥಿಗಳ ಅಯ್ಕೆ ಪ್ರಕ್ರಿಯೆ ನೆಡೆಯುತ್ತಿದೆ. ಕುರುಬ ಸಮುದಾಯ ಸೇರಿದಂತೆ ಎಲ್ಲ ವರ್ಗದವರಿಗೆ ಅವಕಾಶ ನೀಡುತ್ತೇವೆ ಎಂದು ಹೇಳಿದರು.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರವಾಹ ಪೀಡಿತ ಸ್ಥಳಕ್ಕೆ ಶಾಸಕರ ಭೇಟಿ: ಜನರ ರಕ್ಷಣೆ

ಆ ಕ್ಷೇತ್ರದ ಶಾಸಕ ಅಪಾಯದಲ್ಲಿ ಸಿಲುಕಿರುವ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಕಾರ್ಯಕರ್ತರೊಂದಿಗೆ ಪ್ರವಾಹ ...

news

ಸಂತ್ರಸ್ಥರಿಗಾಗಿ ಆಹಾರ ಪದಾರ್ಥ ಸಂಗ್ರಹಿಸಿದ ವಿಶಿಷ್ಟ ಚೇತನ!

ಕೊಡಗು ಮತ್ತು ಮಡಿಕೇರಿ ಸಂತ್ರಸ್ತರಿಗೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜನತೆ ನೆರವಾಗಿದ್ದಾರೆ.

news

ಜಲ ಪ್ರಳಯ: ಪರಿಹಾರದಲ್ಲಿ ಕೇಂದ್ರ ತಾರತಮ್ಯ ಮಾಡುವುದಿಲ್ಲ ಎಂದ ಕೇಂದ್ರ ಸಚಿವ!

ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಇದರಲ್ಲಿ ಯಾವುದೇ ತಾರತಮ್ಯ ಇಲ್ಲ. ...

news

ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಬ್ಬಿಕೊಂಡ ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದೇನು ಗೊತ್ತಾ?

ಇಸ್ಮಾಮಾಬಾದ್: ಮಾಜಿ ಕ್ರಿಕೆಟಿಗ, ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ...

Widgets Magazine