ಬಿಎಸ್‌‌ವೈಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ: ಸಚಿವ ವಿನಯ್

ಹುಬ್ಬಳ್ಳಿ:, ಮಂಗಳವಾರ, 25 ಜುಲೈ 2017 (19:10 IST)

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ತಾಕತ್ತಿದ್ರೆ ಬಿಜೆಪಿ ಕಚೇರಿಯಲ್ಲಿ ಬಸವಣ್ಣನ ಫೋಟೋ ಹಾಕಲಿ ಎಂದು ಸಚಿವ ವಿನಯ್ ಕುಲ್ಕರ್ಣಿ ಸವಾಲ್ ಹಾಕಿದ್ದಾರೆ.
 
ಕಾಂಗ್ರೆಸ್ ಪಕ್ಷ ಮಾತ್ರ ಬಸವಣ್ಣನ ತತ್ವಗಳನ್ನು ಅನುಸರಿಸುತ್ತಿದೆ. ಇತರ ಯಾವ ಪಕ್ಷಗಳು ಬಸವಣ್ಣನ ತತ್ವಗಳ ಪರಿಪಾಲನೆಯಾಗುತ್ತಿಲ್ಲ. ಬಿಎಸ್‌ವೈ ಆರೆಸ್ಸೆಸ್ ಕಪಿಮುಷ್ಠಿಯಲ್ಲಿ ಸಿಲುಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
 
ಪ್ರತ್ಯೇಕ ಧರ್ಮ ಕೇಳುವುದು ನಮ್ಮ ಹಕ್ಕು. ಆದ್ದರಿಂದ ನಾವು ಕೇಳುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 
ಬಿಜೆಪಿ ಮತ್ತು ಆರೆಸ್ಸೆಸ್ ಸಮಾನತೆಯ ವಿರೋಧಿಗಳು. ಬಿಜೆಪಿಯಲ್ಲಿರುವುದರಿಂದ ಬಸವಣ್ಣನವರ ತತ್ವಗಳನ್ನು ವಿರೋಧಿಸುತ್ತಿದ್ದಾರೆ. ಇಲ್ಲವಾದಲ್ಲಿ ಅವರು ಒಪ್ಪಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಯಡಿಯೂರಪ್ಪ ವಿನಯ್ ಕುಲ್ಕರ್ಣಿ ಬಸವಣ್ಣ ಕಾಂಗ್ರೆಸ್ ಬಿಜೆಪಿ Yeddyurappa Basavanna Congress Bjp Vinay Kulkarni

ಸುದ್ದಿಗಳು

news

ವಿಭಜನೆಯಾದರೆ ಎರಡೂ ಧರ್ಮಕ್ಕೂ ನಷ್ಟ: ಪೇಜಾವರ ಶ್ರೀ

ಉಡುಪಿ: ವೀರಶೈವ- ಲಿಂಗಾಯುತ ಧರ್ಮ ವಿಭಜನೆಯಾದರೆ ಎರಡೂ ಧರ್ಮಕ್ಕೂ ನಷ್ಟವಾಗಲಿದೆ. ಯಾರು ಅನ್ಯತಾ ...

news

ತಮಿಳುನಾಡಿನಾದ್ಯಂತ ಶಾಲಾ, ಕಾಲೇಜು, ಕಚೇರಿಗಳಲ್ಲಿ ವಂದೇ ಮಾತರಂ ಕಡ್ಡಾಯ

ಚೆನ್ನೈ: ತಮಿಳುನಾಡಿನಾದ್ಯಂತ ಎಲ್ಲಾ ಶೈಕ್ಷಣಿಕ ಸಂಸ್ಥೆಗಳು ಮತ್ತು ಕಚೇರಿಗಳಲ್ಲಿ ರಾಷ್ಟ್ರೀಯ ಹಾಡು ...

news

ಸ್ವತಂತ್ರ ಧರ್ಮ: ಬಿಎಸ್‌ವೈ ವಿರುದ್ಧ ಲಿಂಗಾಯುತ ಶಾಸಕರ ಅಸಮಾಧಾನ ಸ್ಫೋಟ

ಬೆಂಗಳೂರು: ಸ್ವತಂತ್ರ ಲಿಂಗಾಯುತ ಧರ್ಮ ಕುರಿತಂತೆ ನಿಲುವು ಸ್ಪಷ್ಟಪಡಿಸುವುದು ಅಗತ್ಯವಾಗಿದೆ ಎಂದು ...

news

ರಾಜಕೀಯ ಹತ್ಯೆ ತಡೆಯಲು ಸರಕಾರಕ್ಕೆ ಗೃಹ ಸಚಿವಾಲಯ ಸೂಚನೆ

ಬೆಂಗಳೂರು: ಬಿಜೆಪಿ ನಾಯಕರ ಮನವಿಗೆ ಸ್ಪಂದಿಸಿದ ಕೇಂದ್ರ ಸರಕಾರ ರಾಜಕೀಯ ಹತ್ಯೆಗಳನ್ನು ತಡೆಯಲು ಅಗತ್ಯವಾದ ...

Widgets Magazine