ಬಿಸಿಲೂರಿನಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು!

ಕಲಬುರಗಿ, ಗುರುವಾರ, 10 ಜನವರಿ 2019 (12:35 IST)

ಬಿಸಿಲೂರಿನಲ್ಲಿ ಬೆಳ್ಳಂಬೆಳಗ್ಗೆ ನೆತ್ತರು ಹರಿದಿದ್ದು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಕಲಬುರಗಿ ಕೇಂದ್ರ ಮುಂಭಾಗದಲ್ಲಿ ಬೆಳ್ಳಂಬೆಳಗ್ಗೆ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಬಸ್ ನಿಲ್ದಾಣ ಹತ್ತಿರದಲ್ಲಿರುವ ಕಾವೇರಿ ಲಾಡ್ಜ್ ನ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ (30) ಕೊಲೆಯಾದವರಾಗಿದ್ದಾರೆ.

ಮಲ್ಲಿಕಾರ್ಜುನನ ಜತೆ ಮಾತನಾಡುತ್ತಿರುವಂತೆ ನಟಿಸಿದ ಮೂವರು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕುತ್ತಿಗೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ. ಈ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೆಳ್ಳಂಬೆಳಗ್ಗೆ ಅದು ಜನರು ಓಡಾಡುವ ಪ್ರದೇಶದಲ್ಲಿಯೇ ಕೊಲೆ ನಡೆದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಅಶೋಕ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಳೆ ವಿದ್ಯಾರ್ಥಿನಿಗೆ ವಾಟ್ಸಾಪ್‍ನಲ್ಲಿ ಬೆತ್ತಲೆ ಫೋಟೊ ಕಳುಹಿಸಿದ ಗಣಿತ ಶಿಕ್ಷಕ

ಬೆಂಗಳೂರು : ಗಣಿತ ಶಿಕ್ಷಕನೊಬ್ಬ ಹಳೆ ವಿದ್ಯಾರ್ಥಿನಿಯೊಬ್ಬಳಿಗೆ ಬೆತ್ತಲೇ ಫೋಟೋ ಕಳುಹಿಸಿ ವಿಕೃತ ಮೆರೆದ ...

news

ಮೇಲ್ಜಾತಿಗೆ ಶೇ.10 ಮೀಸಲಾತಿ ವಿಚಾರ; ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಬಿಎಸ್ ವೈ

ಶಿವಮೊಗ್ಗ : ಕೇಂದ್ರ ಸರ್ಕಾರದಿಂದ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲಾತಿ ...

news

ಕುಡಿಯುವ ನೀರಿನ ಟ್ಯಾಂಕಿಗೆ ಕ್ರಿಮಿನಾಶಕ ಬೆರೆಸಿದ ದುಷ್ಕರ್ಮಿಗಳು; ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು

ಯಾದಗಿರಿ : ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದದ ದುರಂತ ಮಾಸುವ ಮೊದಲ್ಲೇ ಇದೀಗ ಕುಡಿಯುವ ನೀರಿನ ...

news

ಕುಡಿಯುವ ನೀರಿಗೆ ಕೀಟನಾಶಕ ಬೆರೆಸಿದ ಪ್ರಕರಣ; ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು : ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಗೆ ಕೀಟನಾಶಕ ಬೆರೆಸಿದ ...