ಚಾಲಕನಿಗೆ ಹೃದಯಾಘಾತ: ಮನೆಗೆ ನುಗ್ಗಿದ ಬಸ್

ಆಗುಂಬೆ, ಬುಧವಾರ, 1 ಮಾರ್ಚ್ 2017 (07:38 IST)

ಹೃದಯಾಘಾತಕ್ಕೊಳಗಾದರಿಂದ ಆತನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಅಂಗಡಿ, ಮನೆಗೆ ನುಗ್ಗಿದ ಘಟನೆ ಮಂಗಳವಾರ ತೀರ್ಥಹಳ್ಳಿಯ ಗುಡ್ಡೇಕೇರಿಯಲ್ಲಿ ನಡೆದಿದೆ. 
 
ಬಸ್ ಮಂಗಳೂರಿನಿಂದ ಶಿವಮೊಗ್ಗ ಕಡೆ ಚಲಿಸುತ್ತಿತ್ತು. ಹೃದಯಾಘಾತಕ್ಕೊಳಗಾದ ಚಾಲಕ  ಶ್ರೀಕಂಠ (50) ಸ್ಥಳದಲ್ಲೇ ಮೃತಪಟ್ಟಿದ್ದು, ಇವರು ತಾಲ್ಲೂಕಿನ ಕಟ್ಟೆಹಕ್ಕಲು ಸಮೀಪ ಕೂಳೂರು ಗ್ರಾಮದ ನಿವಾಸಿಯಾಗಿದ್ದರು.ಅಪಘಾತದಿಂದ ಬಸ್‌ನಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಜೆ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
 
20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ.
 
ಆಗುಂಬೆ ಸಮೀಪವಿದ್ದಾಗ ಚಾಲಕನಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಲ್ಲಿಂದ 30ಕೀಲೋಮೀಟರ್ ದೂರದಲ್ಲಿರುವ ತೀರ್ಥಹಳ್ಳಿಯಲ್ಲಿ ಚಿಕಿತ್ಸೆ ಪಡೆಯುವುದೆಂದು ತೀರ್ಮಾನಿಸಿ ಪ್ರಯಾಣವನ್ನು ಮುಂದುವರೆಸಲಾಗಿತ್ತು. ಆದರೆ ಸ್ವಲ್ಪ ದೂರ ಪ್ರಯಾಣಿಸುವಷ್ಟರಲ್ಲಿ ಅವರು ಹೃದಯಾಘಾತಕ್ಕೊಳಗಾಗಿದ್ದಾರೆ.
 
ಆಗುಂಬೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಿನ್ನಮ್ಮನನ್ನು ಭೇಟಿಯಾದ ಸಚಿವರು

ತಮಿಳುನಾಡಿನ ನಾಲ್ವರು ಸಚಿವರು ಮಂಗಳವಾರ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ತಮ್ಮ ನಾಯಕಿ ...

news

ಮಾಜಿ ಶಾಸಕ ದಿನಕರ್‌ಶೆಟ್ಟಿ ಜೆಡಿಎಸ್‌ಗೆ ಗುಡ್‌ಬೈ ಬಿಜೆಪಿಗೆ ಹಾಯ್ ಹಾಯ್

ಬೆಂಗಳೂರು: ಜೆಡಿಎಸ್ ಪಕ್ಷದ ಹಿರಿಯ ನಾಯಕ ಮಾಜಿ ಶಾಸಕ ದಿನಕರ್ ಶೆಟ್ಟಿ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಕಮಲ ...

news

ಚುನಾವಣೆ ಚಾಣಕ್ಯ ಪ್ರಶಾಂತ್ ಕಿಶೋರ್‌ಗೆ ರಾಜ್ಯದ ಹೊಣೆ

ಬೆಂಗಳೂರು: ಗುಜರಾತ್‌ನಲ್ಲಿ ಪ್ರಧಾನಿ ಮೋದಿ, ಬಿಹಾರ್‌ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರ ಪಕ್ಷವನ್ನು ...

news

ಯಡಿಯೂರಪ್ಪರನ್ನು ಖೆಡ್ಡಾಗೆ ಕೆಡುವಲು ಕಾಂಗ್ರೆಸ್ ರಣತಂತ್ರ

ಬೆಂಗಳೂರು: ಡೈರಿ ವಿವಾದದಿಂದ ಆಕ್ರೋಶಗೊಂಡಿರುವ ಕಾಂಗ್ರೆಸ್ ಸರಕಾರ, ಬಿಜೆಪಿ ರಾಜ್ಯಾಧ್ಯಕ್ಷ ...

Widgets Magazine
Widgets Magazine