ಮ್ಯಾನ್ ಹೋಲ್ ದುರಂತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಬೆಂಗಳೂರು(, ಮಂಗಳವಾರ, 7 ಮಾರ್ಚ್ 2017 (10:29 IST)

Widgets Magazine

ಬೆಂಗಳೂರು(ಮಾ.7): ಬೆಂಗಳೂರಿನ ಸಿ.ವಿ. ರಾಮನ್ ನಗರದ ಮ್ಯಾನ್ ಹೋಲ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ  ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಹಾರ ಘೋಷಿಸಲಾಗಿದೆ.ಘಟನಾ ಸ್ಥಳಕ್ಕೆ ಮೇಯರ್ ಪದ್ಮಾವತಿ ಮತ್ತು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಚಿವ ಜಾರ್ಜ್, ಅಧಿಕಾರಿಗಳ ನಿರ್ಲಕ್ಷ್ಯವೇ ದುರಂತಕ್ಕೆ ಕಾರಣ. ಬಿಡಬ್ಲ್ಯೂಎಸ್ಎಸ್ಬಿ ವತಿಯಿಂದಲೇ ಪರಿಹಾರ ನೀಡುತ್ತಿದ್ದು,  ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಹೇಳಿದರು.

ಮೃತ ಕಾರ್ಮಿಕರನ್ನ ಆಂಧ್ರ ಮೂಲದ ಆಂಜನೇಯರೆಡ್ಡಿ, ವೀರಯ್ಯ  ತಾವತ್ತಿನ್ ನಾಯ್ಡು ಎಂದು ಗುರ್ತಿಸಲಾಗಿದೆ. ಘಟನೆ ಕುರಿತಂತೆ ತನಿಖೆಗೆ ಆದೇಶಿಸಿರುವ ಬಿಡಬ್ಲ್ಯೂಎಸ್ಎಸ್ಬಿ ಅಧ್ಯಕ್ಷ ತುಷಾರ್ ಗಿರಿನಾಥ್, ವರದಿ ನೀಡುವಂತೆ ಯೋಜನಾ ವಿಭಾಗದ ಮುಖ್ಯ ಇಂಜಿನಿಯರ್ ಮಂಜುನಾಥ್`ಗೆ ಆದೇಶಿಸಿದ್ದಾರೆ.
 
ಮ್ಯಾನ್ ಹೋಲ್`ಗೆ ಕಾರ್ಮಿಕರನ್ನ ಇಳಿಸಬಾರದು ಎಂಬ ಕಾನೂನಿದ್ದರೂ ಪದೇ ಪದೇ ಈ ರೀತಿಯ ದುರಂತಗಳು ನಡೆಯುತ್ತಿರುವುದು  ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ: 164 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಡಿಸೆಂಬರ್ 31ರ ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ...

news

ಎಟಿಎಂ ಹಲ್ಲೆಕೋರ ಮಧುಕರ ರೆಡ್ಡಿ ಬೆಂಗಳೂರಿಗೆ

ಎಟಿಎಂ ಹಲ್ಲೆಕೋರ ಮಧುಕರ ರೆಡ್ಡಿಯನ್ನು ಬೆಂಗಳೂರಿಗೆ ಕರೆತರಲಾಗಿದೆ.

news

ಮ್ಯಾನ್‌ಹೋಲ್‌ನಲ್ಲಿ ಮೂವರು ಬಲಿ

ಮ್ಯಾನ್‌ಹೋಲ್ ದುರಸ್ತಿ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಮತ್ತು ಟ್ರಾಕ್ಟರ್ ಚಾಲಕ ಮೃತಪಟ್ಟಿರುವ ದಾರುಣ ...

news

ಹಿರಿಯ ನಟಿ ಪದ್ಮಾ ಕುಮುಟಾ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಾ ಕುಮುಟಾ(58) ಕೊನೆಯುಸಿರೆಳೆದಿದ್ದಾರೆ.ಅವರಿಗೆ 58 ವರ್ಷ ...

Widgets Magazine Widgets Magazine