Widgets Magazine
Widgets Magazine

ಯಡಿಯೂರಪ್ಪ ಹುಟ್ಟಿನಿಂದ ಮಾತ್ರ ಲಿಂಗಾಯುತ, ಆಚರಣೆಯಲ್ಲಲ್ಲ : ಮಾತೆ ಮಹಾದೇವಿ

ಬೆಂಗಳೂರು, ಶನಿವಾರ, 29 ಜುಲೈ 2017 (19:32 IST)

Widgets Magazine

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಆತ್ಮವಿಶ್ವಾಸವೇ ಇಲ್ಲ. ಹುಟ್ಟಿನಿಂದ ಮಾತ್ರ ಲಿಂಗಾಯುತರಾಗಿದ್ದಾರೆ ಆದ್ರೆ ಆಚರಣೆಯಲ್ಲಿ ಲಿಂಗಾಯುತರಾಗಿಲ್ಲ ಎಂದು ಮಾತಾ ಮಹಾದೇವಿ ವಾಗ್ದಾಳಿ ನಡೆಸಿದ್ದಾರೆ.
 
ಧರ್ಮ ಬಿಟ್ಟು ಪಕ್ಷದ ಆಧಾರದಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಅವರು ಯಾವ ಧರ್ಮದಲ್ಲಿ ಜನಿಸಿದ್ದಾರೆಯೋ ಅದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ವಿಚಾರವಾದಿ, ಹುಟ್ಟಿನಿಂದ ಲಿಂಗಾಯುತರಾಗಿಲ್ಲದಿರಬಹುದು. ಆದರೆ., ತತ್ವಾಚರಣೆಯಲ್ಲಿ ಲಿಂಗಾಯುತರಾಗಿದ್ದಾರೆ. ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ತಿಳಿಸಿದ್ದಾರೆ. 
 
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವುದು ಬಸವ ಜಯಂತಿ ದಿನದಂದು. ರಾಜ್ಯದ ಎಲ್ಲಾ ಸರಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಹಾಕುವಂತೆ ಆದೇಶ ನೀಡಿ ಬಸವ ಪ್ರೇಮವನ್ನು ಮೆರೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.    
 
ಪ್ರತ್ಯೇಕ ಧರ್ಮ ವಿಚಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಸಿಎಂ ಸಿದ್ದರಾಮಯ್ಯಗೆ ಧೈರ್ಯವಿದ್ದರೆ ಬಹುಮತದ ಆಧಾರದ ಮೇಲೆ ತೀರ್ಮಾನ ತೆಗೆದುಕೊಳ್ಳಲಿ ಬಸವಾಭಿಮಾನಿಗಳು ಸ್ವಯಂಪ್ರೇರಣೆಯಿಂದ ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಚುನಾವಣೆ ಹಿನ್ನೆಲೆಯಲ್ಲಿ ಹೋರಾಟ ತೀವ್ರಗೊಳಿಸಿಲ್ಲ ಎಂದರು.
 
ರಂಭಾಪುರಿ ಶ್ರೀಗಳು ಮಹಿಳೆಯ ಚಾರಿತ್ರ್ಯವಧೆ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಅವರ ಹೇಳಿಕೆ ಅಪ್ಪಟ ಸುಳ್ಳು. ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ಮಾತಾ ಮಹಾದೇವಿ ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಾಕಿಸ್ತಾನದ ಮಧ್ಯಂತರ ಪ್ರಧಾನಿಯಾಗಿ ಶಾಹಿದ್ ಅಬ್ಬಾಸಿ

ಇಸ್ಲಾಮಾಬಾದ್: ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಶಾಹಿದ್ ಅಬ್ಬಾಸಿ ನೇಮಕಗೊಂಡಿದ್ದಾರೆ.

news

ಪ್ರತಿಷ್ಠಿತ 10 ರಿಯಲ್ ಎಸ್ಟೇಟ್ ಕಂಪನಿಯಿಂದ ವಂಚನೆ: 100 ಜನರ ಬಂಧನ

ಕಡಿಮೆ ಮೊತ್ತಕ್ಕೆ ನಿವೇಶನ ನೀಡುವುದಾಗಿ ಹೇಳಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ 10 ಪ್ರತಿಷ್ಠಿತ ...

news

ಕೇಂದ್ರ ಸಚಿವೆ ಸ್ಮೃತಿ ಇರಾನಿ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಗುಜರಾತ್‌ನಿಂದ ರಾಜ್ಯಸಭೆ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೇಂದ್ರ ಚುನಾವಣೆ ...

news

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಒಟ್ಟು ಆಸ್ತಿ ಎಷ್ಟು ಗೊತ್ತಾ?

ನವದೆಹಲಿ: ಕಳೆದ ಐದು ವರ್ಷಗಳ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ಸಂಪತ್ತಿನಲ್ಲಿ ...

Widgets Magazine Widgets Magazine Widgets Magazine