ಅಡಳಿತ ಪರ ಕಾರ್ಯನಿರ್ವಹಣೆ: ನಾಲ್ವರು ಅಧಿಕಾರಿಗಳ ವರ್ಗಾವಣೆಗೆ ಬಿಜೆಪಿ ಆಗ್ರಹ

ಗುಂಡ್ಲುಪೇಟೆ, ಭಾನುವಾರ, 19 ಮಾರ್ಚ್ 2017 (16:21 IST)

Widgets Magazine

ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ನಾಲ್ವರು ಅಧಿಕಾರಿಗಳು ಸರಕಾರದ ಪರವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅವರನ್ನು ವರ್ಗಾವಣೆಗೊಳಿಸಬೇಕು ಎಂದು ಬಿಜೆಪಿ ಚುನಾವಣೆ ಆಯೋಗಕ್ಕೆ ಮನವಿ ಮಾಡಿದೆ.
 
ಗುಂಡ್ಲುಪೇಟೆಯಲ್ಲಿರುವ ಸರಕಾರಿ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದೆ, ಅಡಳಿತ ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಧೋರಣೆ ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ ಎಂದು ಆರೋಪಿಸಿದೆ. 
 
ಆಹಾರ ಮತ್ತು ನಾಗರಿಕೆ ಪೂರೈಕೆ ಉಪನಿರ್ದೇಶಕ ರಾಮೇಶ್ವರಪ್ಪ, ಚಾಮರಾಜನಗರ ಜಿಪಂ ಉಪ ಅಧೀಕ್ಷಕ ಅಭಿಯಂತರ ಶಿವಮಾದಯ್ಯ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರೇವಣ್ಣ, ಸಾರ್ವಜನಿಕ ಇಲಾಖೆಯ ಉಪನಿರ್ದೇಶಕ ಬಸಪ್ಪ ಅವರನ್ನು ಕೂಡಲೇ ವರ್ಗಾವಣೆಗೊಳಿಸಬೇಕು ಎಂದು ಚುನಾವಣೆ ಆಯೋಗಕ್ಕೆ ಬಿಜೆಪಿ ಪತ್ರ ಬರೆದಿದೆ.  
 
ಕಾಂಗ್ರೆಸ್ ಪಕ್ಷ ಯಾವುದೇ ರಣತಂತ್ರ ರೂಪಿಸಿದರೂ ಸೋಲು ಖಚಿತವಾಗಿದೆ. ಕ್ಷೇತ್ರದ ಜನತೆ ಬಿಜೆಪಿ ಪರವಾಗಿ ಮತ ಚಲಾವಣೆ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಯುಗಾದಿ ಹಬ್ಬದಂದು ಎಚ್‌ಡಿಕೆ ಕ್ಯಾಬ್ಸ್‌ಗೆ ಚಾಲನೆ

ಓಲಾ ಮತ್ತು ಉಬೇರ್ ಕಂಪೆನಿಗಳಿಗೆ ಸವಾಲೊಡ್ಡಲು ಎಚ್‌ಡಿಕೆ ಕ್ಯಾಬ್ಸ್ ಹುಟ್ಟು ಹಾಕಲಾಗಿದ್ದು, ಯುಗಾದಿ ...

news

ಗ್ರಾಮಸ್ಥರ ಮಾತಿಗೆ ಯಾಕೆ ಕಿವಿಗೊಡಲ್ಲ: ಸಚಿವರ ಕಿಡಿ

ಹಾಸನ: ಜಿಲ್ಲೆಯ ಸಕಲೇಶ್‌ಪುರದ ಬಾಳ್ಳುಪೇಟೆ ಗ್ರಾಮದ ಆಸ್ಪತ್ರೆ ಹದಗೆಟ್ಟಿದೆ ಎನ್ನುವ ಗ್ರಾಮಸ್ಥರ ಮಾತಿಗೆ ...

news

ಉ.ಪ್ರದೇಶ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಪದಗ್ರಹಣ

ಲಕ್ನೋ: ಬಿಜೆಪಿ ಮುಖಂಡ ಯೋಗಿ ಆದಿತ್ಯನಾಥ ಇಂದು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ...

news

ನಾಳೆ ದೆಹಲಿಗೆ ತೆರಳಲಿರುವ ಎಸ್‌.ಎಂ.ಕೃಷ್ಣ: ಅಮಿತ್ ಶಾರೊಂದಿಗೆ ಚರ್ಚೆ

ಬೆಂಗಳೂರು: ನಾಳೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ನವದೆಹಲಿಗೆ ತೆರಳುತ್ತಿದ್ದು ಬಿಜೆಪಿ ಪಕ್ಷದ ರಾಷ್ಟ್ರೀಯ ...

Widgets Magazine