ಉಪಚುನಾವಣೆ ಕೋಮುವಾದ, ಜಾತ್ಯಾತೀತದ ಮಧ್ಯದ ಸಮರ: ಸಿಎಂ

ಗುಂಡ್ಲುಪೇಟೆ, ಶುಕ್ರವಾರ, 7 ಏಪ್ರಿಲ್ 2017 (15:26 IST)

Widgets Magazine

ಉಪಚುನಾವಣೆ ಕೋಮುವಾದಿ, ಜಾತ್ಯಾತೀತದ ಮಧ್ಯದ ಸಮರವಾಗಿದೆ ಎಂದು ಹೇಳಿದ್ದಾರೆ.
 
ಇಂದು ಪಟ್ಟಣದಲ್ಲಿ ರೋಡ್‌ಶೋನಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಗೆದ್ದವರಿಗೆ ಅನುಕಂಪವಿದ್ದೇ ಇರುತ್ತದೆ. ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 
ಸರಕಾರದ ಸಚಿವ ಸಂಪುಟ ಉಪಚುನಾವಣೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಎಂಟು ಮಂದಿ ಸಚಿವರು ಉಪಚುನಾವಣೆಯಲ್ಲಿ ಪಾಲ್ಗೊಂಡಿಲ್ಲ. ಇತರ ಕೆಲ ಸಚಿವರು ಮಾತ್ರ ಚುನಾವಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
 
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾಮಹಾದೇವ್ ಪ್ರಸಾದ್, ತುಂಬಾ ಅನುಭವಿ, ಪದವೀಧರೆ ಹಾಗೂ ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುವವರಾಗಿರುವುದರಿಂದ ಅವರ ಗೆಲುವು ಖಚಿತ ಎಂದು ತಿಳಿಸಿದ್ದಾರೆ.
 
ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಸೋಲುವುದಿಲ್ಲ. ಕಾಂಗ್ರೆಸ್ ಪಕ್ಷ ಭಾರಿ ಬಹುಮತಗಳ ಅಂತರದಿಂದ ಗೆಲ್ಲಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾವೇರಿ ವಿವಾದ: ಆದೇಶ ಮಾರ್ಪಾಡು ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ಸುಪ್ರೀಂಕೋರ್ಟ್ ಆದೇಶವನ್ನು ಮಾರ್ಪಾಡುಗೊಳಿಸುವಂತೆ ಕೋರಿ ರಾಜ್ಯ ಸರಕಾರ ಸಲ್ಲಿಸಿದ್ದ ...

news

ಯಾವುದೇ ಸಂಚಾರಿ ನಿರ್ಬಂಧ ಹೇರದೆ ಟ್ರಾಫಿಕ್`ನಲ್ಲೇ ಶೇಖ್ ಹಸೀನಾ ಸ್ವಾಗತಕ್ಕೆ ತೆರಳಿದ ಮೋದಿ

ಪ್ರಧಾನಮಂತ್ರಿ ನರೇಂದ್ರಮೋದಿ ಯಾವುದೇ ಸಂಚಾರ ನಿರ್ಬಂಧ ಹೇರದೇ ಮಧ್ಯಾಹ್ನದ ಗಿಜಿ ಗಿಜಿ ಟ್ರಾಫಿಕ್`ನಲ್ಲೇ ...

news

ಶ್ರೀನಿವಾಸ್ ಪ್ರಸಾದ್ ಸಮಯ ಸಾಧಕ ರಾಜಕಾರಣಿ: ಸಂಸದ ಧೃವನಾರಾಯಣ್

ನಂಜನಗೂಡು: ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಸಮಯ ಸಾಧಕ ರಾಜಕಾರಣಿ ಎಂದು ಕಾಂಗ್ರೆಸ್ ಸಂಸದ ಆರ್. ...

news

ಚೆನ್ನೈ: ಐಟಿ ದಾಳಿ ಬಿಜೆಪಿ-ಆರೆಸ್ಸೆಸ್ ಷಡ್ಯಂತ್ರ: ಎಐಎಡಿಎಂಕೆ

ಚೆನ್ನೈ: ನಗರದಲ್ಲಿ ಇಂದು 32 ಕಡೆ ನಡೆದ ಐಟಿ ದಾಳಿಯ ಹಿಂದೆ ಬಿಜೆಪಿ, ಆರೆಸ್ಸೆಸ್ ಕೈವಾಡವಿದೆ ಎಂದು ...