ನಾಳೆ ಸಂಜೆ 4ಕ್ಕೆ ಸಚಿವ ಸಂಪುಟ ಸಭೆ ನಿಗದಿಪಡಿಸಿದ ರಾಜ್ಯ ಸರ್ಕಾರ

ಬೆಂಗಳೂರು, ಬುಧವಾರ, 25 ಅಕ್ಟೋಬರ್ 2017 (17:15 IST)

ಬೆಂಗಳೂರು: ವಿಧಾನಸೌಧದ ವಜ್ರಮಹೋತ್ಸವದಿಂದ ಸರ್ಕಾರ ಅಂತರ ಕಾಯ್ದುಳ್ಳುತ್ತಿದೆ ಎಂಬ ಟೀಕೆಯಿಂದ ತಪ್ಪಿಸಿಕೊಳ್ಳಲು ಇಂದು ನಡೆಯಬೇಕಿದ್ದ ಸಚಿವ ಸಂಪುಟ ಸಭೆಯನ್ನ ನಾಳೆಗೆ ಮುಂದೂಡಿದೆ.


ವಜ್ರಮಹೋತ್ಸವ ಅಂಗವಾಗಿ ಸಂಜೆವರೆಗೆ ವಿವಿಧ ಕಾರ್ಯಕ್ರಮವಿದ್ದರೂ ಇಂದು ಸಂಜೆ 4 ಗಂಟೆಗೆ ಸಂಪುಟ ಸಭೆ ನಿಗದಿಯಾಗಿತ್ತು. ಕೂಡಲೇ ಎಚ್ಚೆತ್ತ ಸರ್ಕಾರ ಆರೋಪದಿಂದ ದೂರ ಸರಿಯಲು ಸಚಿವ ಸಂಪುಟ ಸಭೆಯನ್ನು ನಾಳೆ ಸಂಜೆ 4 ಗಂಟೆಗೆ ಮುಂದೂಡಿದೆ.

ವಜ್ರಮಹೋತ್ಸವ ಕಾರ್ಯಕ್ರಮ ಮಾಡುವ ಕುರಿತು ಘೋಷಣೆಯಾದಾಗಿನಿಂದಲೂ ಒಂದಿಲ್ಲೊಂದು ವಿವಾದ ಸೃಷ್ಟಿಯಾಗಿತ್ತು. ವಜ್ರಮಹೋತ್ಸವಕ್ಕೆ 27 ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಿ, ನಂತರ 10 ಕೋಟಿ ರೂ.ಗೆ ಕಾರ್ಯಕ್ರಮ ಮಾಡಲು ತೀರ್ಮಾನಿಸಲಾಯಿತು. ಅಂದಿನಿಂದ ಸರ್ಕಾರ ವಜ್ರಮಹೋತ್ಸವದಿಂದ ಅಂತರ ಕಾಯ್ದುಕೊಂಡಿದೆ ಎಂದು ಹೇಳಲಾಗಿತ್ತು. ಹೀಗಾಗಿ ರಾಷ್ಟ್ರಪತಿ ಭಾಷಣ ಮುಗಿದ ಬಳಿಕ ವಿಧಾನಸೌಧದ ಕಾರ್ಯಚಟುವಟಿಕೆ ಎಂದಿನಂತೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಹಲವರು ಟೀಕೆ ಬಂದ ಹಿನ್ನೆಲೆಯಲ್ಲಿ ಸಂಪುಟ ಸಭೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಾಷ್ಟ್ರಪತಿ ಜತೆ ಫೋಟೊ ಸೆಷನ್ ಗೆ ಜೆಡಿಎಸ್ ಬಹಿಷ್ಕರಿಸಿದ್ದೇಕೆ ಗೊತ್ತಾ…?

ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಜತೆ ಶಾಸಕರ ಗ್ರೂಪ್ ...

news

ನಾವು ರಾಷ್ಟ್ರಪತಿಯವರಿಗೆ ಭಾಷಣ ಬರೆದುಕೊಡಲು ಆಗುತ್ತಾ: ಸಿಎಂ

ಬೆಂಗಳೂರು: ನಾವು ರಾಷ್ಟ್ರಪತಿಯವರಿಗೆ ಭಾಷಣ ಬರೆದುಕೊಡಲು ಆಗುತ್ತಾ, ರಾಷ್ಟ್ರಪತಿ ರಾಮಾನಾಥ್ ಕೋವಿಂದ್ ತಾವೇ ...

news

ಜಂಟಿ ಅಧಿವೇಶನದಲ್ಲಿ ಟಿಪ್ಪು ಬಗ್ಗೆ ಹಾಡಿಹೊಗಳಿದ ರಾಷ್ಟ್ರಪತಿ ಕೋವಿಂದ್

ಬೆಂಗಳೂರು: ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ತಾರಕಕ್ಕೇರಿರುವ ಬೆನ್ನಲ್ಲೇ ರಾಷ್ಟ್ರಪತಿ ರಾಮನಾಥ ಕೋವಿಂದ ...

news

ಜೆಡಿಎಸ್ ಪಕ್ಷದಿಂದ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಸ್ಪರ್ಧೆ: ಕುಮಾರಸ್ವಾಮಿ

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುವಂತೆ ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿಯವರಿಗೆ ...

Widgets Magazine
Widgets Magazine