ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವೆ ಎಂದ ಶಾಸಕನ ಮೇಲೆ ಬಿತ್ತು ಕೇಸ್!

ಚಿತ್ರದುರ್ಗ, ಗುರುವಾರ, 10 ಜನವರಿ 2019 (17:20 IST)

ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಚಂದ್ರಪ್ಪ ವಿರುದ್ಧ ದೂರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಸೆಕ್ಷನ್ 189, 504, 506(2) ipc ಯಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮರಳು ತೆಗೆಯಲು ಅನುವು ಮಾಡಿಕೊಡದೇ ಹೋದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲಾಗುವುದು ಎಂದು ವಿವಾದಾತ್ಮ ಹೇಳಿಕೆಯನ್ನು ಶಾಸಕ ಚಂದ್ರಪ್ಪ ನೀಡಿದ್ದರು.

ಮರಳಿನ ವಿಚಾರವಾಗಿ ಪ್ರತಿಕಾಗೋಷ್ಠಿ  ನಡೆಸಿದ್ದ ಶಾಸಕ ಚಂದ್ರಪ್ಪ, ಪೊಲೀಸರ ಮೇಲೆ ಆರೋಪ ಮಾಡಿದ್ದರು. ಪೊಲೀಸ್ ಮತ್ತು ಮರಳು ಮಾಫಿಯಾ ಜೊತೆಯಾಗಿ ಮಂತ್ಲಿ ಫಿ‌ಕ್ಸ್ ಮಾಡಿಕೊಂಡಿವೆ ಎಂದು ಆರೋಪಿಸಿದ್ದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದ್ಯಾಕೆ?

ಅಪಾರ ಬೆಲೆ ಬಾಳುವ ಹತ್ತಾರು ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದ ಘಟನೆ ನಡೆದಿದೆ.

news

ಆ ಊರಿನ ಮಂದಿ ಪೊರಕೆ ಮೆರವಣಿಗೆ ನಡೆಸಿದ್ಯಾಕೆ?

ಎಂ ಆರ್ ಪಿ ಎಲ್ ವಿರುದ್ಧ ಪೊರಕೆ ಮೆರವಣಿಗೆ ನಡೆಸಿ ಜೋಕಟ್ಟೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

news

ಕಾಟಾಚಾರಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ?

ಕಾಟಾಚಾರಕ್ಕೆ ಸಚಿವರೊಬ್ಬರು ಆಸ್ಪತ್ರೆಗೆ ಭೇಟಿ ನೀಡಿರುವ ಆರೋಪ ಕೇಳಿಬಂದಿದೆ.

news

ಎಂಪಿ ಚುನಾವಣೆ: ಮಂಡ್ಯಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿ ಅಭ್ಯರ್ಥಿಯಾಗಲಿ ಎಂದವರಾರು ಗೊತ್ತಾ?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ...