ಜನಾರ್ಧನ ರೆಡ್ಡಿಗಾಗಿ ಮುಂದುವರಿದ ಸಿಸಿಬಿ ಪೊಲೀಸರ ಶೋಧ

ಬಳ್ಳಾರಿ, ಗುರುವಾರ, 8 ನವೆಂಬರ್ 2018 (09:11 IST)

ಬಳ್ಳಾರಿ: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಡೀಲ್ ಪ್ರಕರಣದಲ್ಲಿ ಆರೋಪಿಯಾಗಿರುವ ಗಣಿ ದಣಿ ಜನಾರ್ಧನ ರೆಡ್ಡಿ ಬಂಧನಕ್ಕಾಗಿ ಸಿಸಿಬಿ ಪೊಲೀಸರು ಇಂದೂ ಶೋಧ ಮುಂದುವರಿಸಿದ್ದಾರೆ.
 
ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿಗಾಗಿ ಸಿಸಿಬಿ ಪೊಲೀಸರು ಅವರ ನಿವಾಸಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದೀಗ ಸಿರಗುಪ್ಪದ ನಿವಾಸದ ಮೇಲೆ 8 ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನ, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
 
ಈ ನಡುವೆ ದಾಳಿ ವೇಳೆ ಜನಾರ್ಧನ ರೆಡ್ಡಿ ಮಾವ ಪರಮೇಶ್ವರ್ ರೆಡ್ಡಿ ಆ ನಿವಾಸದಲ್ಲಿದ್ದರು ಎನ್ನಲಾಗಿದೆ. ಕೆಲ ಹೊತ್ತಿನ ಬಳಿಕ ಶಾಸಕ ಬಿ ಶ್ರೀರಾಮುಲು ಕೂಡಾ ಸ್ಥಳಕ್ಕೆ ಆಗಮಿಸಿದ್ದಾರೆ ಎನ್ನಲಾಗಿದೆ. ತಲೆಮರೆಸಿಕೊಂಡಿರುವ ಜನಾರ್ಧನ ರೆಡ್ಡಿಗಾಗಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿರುವ ಅವರ ನಿವಾಸಗಳು, ಸಂಬಂಧಿಕರ ನಿವಾಸಗಳಲ್ಲಿ ಸಿಸಿಬಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜನಾರ್ಧನ ರೆಡ್ಡಿ ನಮ್ಮ ಪಕ್ಷದಲ್ಲಿ ಇಲ್ಲ, ಹಾಗಿದ್ದ ಮೇಲೆ ನಾವ್ಯಾಕೆ ವಿಪಕ್ಷದವರನ್ನು ದೂರೋಣ? ಬಿಎಸ್ ವೈ ಪ್ರಶ್ನೆ

ಮಂಗಳೂರು: ಆಂಬಿಡೆಂಟ್ ಕಂಪನಿಯ ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಗಣಿ ದಣಿ ಜನಾರ್ಧನ ರೆಡ್ಡಿ ...

news

ವಾಜಪೇಯಿಗೋಸ್ಕರ ಹೊಸ ಕ್ರೀಡಾಂಗಣ ನಿರ್ಮಾಣ ಮಾಡಬೇಕಿತ್ತು: ಯುಪಿ ಸರ್ಕಾರಕ್ಕೆ ಅಖಿಲೇಶ್ ಯಾದವ್ ಟಾಂಗ್

ಲಕ್ನೋ: ಇಲ್ಲಿನ ಎಕಾನ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ...

news

ಸುಪ್ರೀಂಕೋರ್ಟ್ ನಿಗದಿತ ಸಮಯ ಉಲ್ಲಂಘಿಸಿ ಪಟಾಕಿ ಹೊಡೆದಿದ್ದಕ್ಕೆ 700 ಮಂದಿ ವಿರುದ್ಧ ಪ್ರಕರಣ

ನವದೆಹಲಿ: ವಾಯುಮಾಲಿನ್ಯ ತಡೆಗಟ್ಟಲು ದೀಪಾವಳಿಯಲ್ಲಿ ಪಟಾಕಿ ಹೊಡೆಯಲು ಸುಪ್ರೀಂಕೋರ್ಟ್ ಸಮಯ ...

news

ಅಪ್ಪ-ಅಮ್ಮನ ಅಜಾಗರೂಕತೆಗೆ ಕಾರ್ ನೊಳಗೆ ಲಾಕ್ ಆದ ಮಗು

ಮೀರತ್: ಅಪ್ಪ-ಅಮ್ಮನ ಅಜಾಗರೂಕತೆಯಿಂದಾಗಿ ಮಗುವೊಂದು ಕಾರೊಳಗೇ ಲಾಕ್ ಆಗಿ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ...

Widgets Magazine