ಡಿಐಜಿ ರೂಪಾ ಬೆನ್ನಲ್ಲೇ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಎತ್ತಂಗಡಿ

ಬೆಂಗಳೂರು, ಸೋಮವಾರ, 17 ಜುಲೈ 2017 (16:28 IST)

Widgets Magazine

ಕೇಂದ್ರ ಕಾರಾಗೃಹದ ಡಿಐಜಿ ಡಿ. ರೂಪಾ ಎತ್ತಂಗಡಿ ಬೆನ್ನಲ್ಲೇ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಅವರನ್ನೂ ಎತ್ತಂಗಡಿ ಮಾಡಿ ಸರ್ಕಾರ ಆದೇಶಿಸಿದೆ. ಕೃಷ್ಣಕುಮಾರ್ ಅವರಿಗೆ ಜಾಗ ಯಾವುದೇ ಜಾಗ ಸೂಚಿಸದೇ ವರ್ಗಾವಣೆ ಆದೇಶ ಹೊರಬಿದ್ದಿದ್ದು, ಅಧೀಕ್ಷಕಿ ಡಾ.ಅನಿತಾ ರೈ ಅವರನ್ನ ಪ್ರಭಾರಿ ಹುದ್ದೆಗೆ ನಿಯೋಜಿಸಲಾಗಿದೆ.


ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಣ್ಣಾಡಿಎಂಕೆ ನಾಯಕಿ ಶಶಿಕಲಾ, ತೆಲಗಿಗೆ ವಿಶೇಷ ಸವಲತ್ತು ಮತ್ತು ಗಾಂಜಾ ಸರಬರಾಜು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಡಿಐಜಿ ರೂಪಾ, ಕಾರಾಗೃಹದ ಡಿಜಿಗೆ ವರದಿ ನೀಡಿದ್ದರು. ಈ ವರದಿ ರಾಜ್ಯಾದ್ಯಂತ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಬಹಿರಂಗ ಹೇಳಿಕೆ ನೀಡದಂತೆ ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದ ಸರ್ಕಾರ, ಡಿಐಜಿ ಡಿ. ರೂಪಾ ಮತ್ತು ಡಿಜಿ ಸತ್ಯನಾರಾಯಣ್ ರಾವ್ ಅವರನ್ನ ವರ್ಗಾವಣೆ ಮಾಡಿ ಬೆಳಗ್ಗೆ ಆದೇಶ ಮಾಡಿತ್ತು.

ಆ ಬಳಿಕ ಪ್ರತಿಪಕ್ಷಗಳು ಸೇರಿದಂತೆ, ಮಾಧ್ಯಮಗಳಿಂದ ತೀವ್ರ ಟೀಕೆ ಕೇಳಿಬಂದಿತ್ತು. ಅಕ್ರಮ ಬಯಲು ಮಾಡಿದ್ದ ಡಿಐಜಿ ರೂಪಾ ಅವರನ್ನ ವರ್ಗಾವಣೆ ಮಾಡಿದ್ದ ಬಗ್ಗೆ ಭಾರೀ ಟೀಕೆ ಕೇಳಿಬಂದಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಡಿಐಜಿ ರೂಪಾ Central Jail Dig Roopa

Widgets Magazine

ಸುದ್ದಿಗಳು

news

ಮನೆಗೆ ನುಗ್ಗಿ ಏಕಾಂಗಿಯಾಗಿದ್ದ ಬಾಲಕಿಯ ಮೇಲೆ ಅತ್ಯಾಚಾರ

ಮುಳುಬಾಗಿಲು: 7ನೇ ತರಗತಿ ಓದುತ್ತಿರುವ ಅಪ್ರಾಪ್ತ ಬಾಲಕಿಯ ಮೇಲೆ ಅರೋಪಿಯೊಬ್ಬ ಅತ್ಯಾಚಾರವೆಸಗಿ ಪರಾರಿಯಾದ ...

news

ಕೆಲ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯ: ಬಿಎಸ್‌ವೈ

ಬೆಂಗಳೂರು: ಕೆಲ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ...

news

ಜೈಲಿನಲ್ಲಿನ ಅವ್ಯವಹಾರ ಬಯಲಿಗೆಳೆದಿದ್ದು ತಪ್ಪಾ?: ಸಿಎಂ ವಿರುದ್ಧ ಬಿಎಸ್‌ವೈ ವಾಗ್ದಾಳಿ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿನ ಅವ್ಯವಹಾರ ಬಯಲಿಗೆಳೆದಿರುವುದು ತಪ್ಪಾ? ತಮಿಳುನಾಡಿನ ಎಐಎಢಿಎಂಕೆ ...

news

`ಒಂದು ದಿನವಾದರೂ ನನ್ನನ್ನ ಜೈಲಿಗೆ ಹಾಕಲು ನಿರ್ಧರಿಸಿದ್ದರು’

ವಿಪಕ್ಷಗಳನ್ನ ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸರನ್ನ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ...

Widgets Magazine