ರಾಜ್ಯಸರಕಾರದ ಕಾರ್ಯಕ್ರಮದಲ್ಲಿ ಪಿಎಂ ಮೋದಿ ಹೊಗಳಿದ ಕೇಂದ್ರ ಸಚಿವ

ಬಳ್ಳಾರಿ, ಗುರುವಾರ, 21 ಸೆಪ್ಟಂಬರ್ 2017 (16:37 IST)

ರಾಜ್ಯ ಸರಕಾರದ ಕಾರ್ಯಕ್ರಮದಲ್ಲಿ ಅತಿಥಿಯಾಗಿದ್ದ ಕೇಂದ್ರ ಸಚಿವರೊಬ್ಬರು ಪ್ರಧಾನಿ ಮೋದಿಯನ್ನು ಹೊಗಳಿದ ಘಟನೆ ವರದಿಯಾಗಿದೆ.
ಉಕ್ಕು ತಯಾರಿಕೆ ಕಂಪೆನಿಯಾದ ಜಿಂದಾಲ್‌ನಲ್ಲಿ ಆಯೋಜಿಸಲಾಗಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಜಯಂತ್ ಸಿನ್ಹ, ಪ್ರಧಾನಿ ಮೋದಿ ದೇಶವನ್ನು ಅಭಿವೃದ್ಧಿಯತ್ತ ಸಾಗಿಸುತ್ತಿದ್ದಾರೆ. ಬಿಜೆಪಿಯ ಬಗ್ಗೆ ಜನತೆಗೆ ಹೆಚ್ಚನ ಒಲವಿದೆ, ಮುಂಬರುವ ಚುನಾವಣೆಯಲ್ಲಿ ಜನತೆ ಬಿಜೆಪಿ ಪರ ಮತ ಚಲಾಯಿಸುವ ವಿಶ್ವಾಸವಿದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
 
ರಾಜ್ಯ ಸರಕಾರದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿ ಚುನಾವಣೆ ವಿಷಯವನ್ನು ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
 
ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. ಕಾಂಗ್ರೆಸ್ ಸರಕಾರ ಅವಧಿಯಲ್ಲಿ ಸಾವಿರಾರು ಡ್ಯಾಂಗಳನ್ನು ನಿರ್ಮಿಸಲಾಗಿದೆ. ಸಾವಿರಾರು ಕಾರ್ಯಗಳನ್ನು ಮಾಡಿದೆ. ಆಧಾರ ಕಾರ್ಡ್, ಜಿಎಸ್‌ಟಿ, ಮಹಿಳಾ ಮೀಸಲಾತಿ, ಜನಧನ ಯೋಜನೆ ಪ್ರತಿಯೊಂದು ಕಾಂಗ್ರೆಸ್ ಜಾರಿಗೊಳಿಸಿದೆ. ಕಳೆದ ಮೂರು ವರ್ಷಗಳಲ್ಲಿ ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಸಚಿವ ಸಂತೋಷ್ ಲಾಡ್ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಪ್ರಧಾನಿ ಮೋದಿ ಜಯಂತ್ ಸಿನ್ಹಾ ಸಂತೋಷ್ ಲಾಡ್ ಕಾಂಗ್ರೆಸ್ ಬಿಜೆಪಿ Congress Bjp Santosh Lad Pm Modi Jayanth Sinha

ಸುದ್ದಿಗಳು

news

ಗುಟ್ಟು ಬಿಟ್ಟುಕೊಡದ ಕಮಲ್ ಹಾಸನ್-ಕೇಜ್ರಿವಾಲ್.. ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನು ಗೊತ್ತಾ..?

ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ತಮಿಳಿನ ಸೂಪರ್ ಸ್ಟಾರ್ ...

news

ಸಚಿವ ಮಹಾದೇವಪ್ಪ, ಶಾಸಕ ಸೋಮಶೇಖರ್ ಕಾರು ಅಪಘಾತ

ಮಂಡ್ಯ: ಸಚಿವ ಮಹಾದೇವಪ್ಪ ಮತ್ತು ಶಾಸಕ ಸೋಮಶೇಖರ್ ಕಾರು ಪರಸ್ಪರ ಡಿಕ್ಕಿಯಾಗಿ ಜಖಂಗೊಂಡ ಘಟನೆ ವರದಿಯಾಗಿದೆ.

news

ಆನ್`ಲೈನ್`ನಲ್ಲಿ ಊಹಾಪೋಹಗಳಿಗೆ ಎಡೆಮಾಡಿದ ಫೋಟೋ..!

ಹುಡುಗಿಯೊಬ್ಬಳ ಜೊತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಾಣಿಸಿಕೊಂಡಿರುವ ಫೋಟೋವೊಂದು ...

news

ಎಸ್‌,ಎಂ, ಕೃಷ್ಣ ಸೇರ್ಪಡೆ ಬಿಜೆಪಿಗೆ ಲಾಭವಾಗದಿದ್ದರಿಂದ ಐಟಿ ದಾಳಿ: ಗುಂಡೂರಾವ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಿಂದ ಪಕ್ಷಕ್ಕೆ ಯಾವುದೇ ಲಾಭವಾಗದಿರುವ ...

Widgets Magazine
Widgets Magazine