ಡಿ.ಕೆ.ಶಿವಕುಮಾರ್‌‌ರನ್ನು ಬಿಜೆಪಿಗೆ ಆಹ್ವಾನಿಸಿದ್ರಂತೆ ಕೇಂದ್ರ ಸಚಿವ...!

ಬೆಂಗಳೂರು, ಸೋಮವಾರ, 7 ಆಗಸ್ಟ್ 2017 (13:14 IST)

ಪ್ರಭಾವಶಾಲಿ ಕೇಂದ್ರ ಸಚಿವರೊಬ್ಬರು ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಬಿಜೆಪಿಗೆ ಸೇರುವಂತೆ ಆಹ್ವಾನ ನೀಡಿದ್ದರು ಎನ್ನುವ ಸ್ಫೋಟಕ ಮಾಹಿತಿಯನ್ನು ಮಾಧ್ಯಮಗಳು ಬಹಿರಂಗಪಡಿಸಿವೆ.
 
ಕಳೆದ 20 ದಿನಗಳ ಹಿಂದೆ ಪ್ರಧಾನಿ ಮೋದಿಯವರ ಆತ್ಮಿಯರಾಗಿರುವ ಬಿಜೆಪಿಯ ಕೇಂದ್ರ ಸಚಿವರೊಬ್ಬರು ಡಿ.ಕೆ.ಶಿವಕುಮಾರ್‌‌ಗೆ ಕರೆ ಮಾಡಿ ನಿಮ್ಮಂತಹ ಡೈನಾಮಿಕ್ ನಾಯಕರು ಬಿಜೆಪಿ ಪಕ್ಷಕ್ಕೆ ಬೇಕಾಗಿದೆ. ಆದ್ದರಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಎಂದು ಆಹ್ವಾನ ನೀಡಿದ್ದರೂ ಎನ್ನಲಾಗಿದೆ.
 
ಬಿಜೆಪಿಯ ಥಿಂಕ್‌ಟ್ಯಾಂಕ್ ಎಂದು ಕರೆಯಲಾಗುವ ಕೇಂದ್ರ ಸಚಿವರೊಬ್ಬರು, ಡಿಕೆಶಿಯವರಿಗೆ ಪಕ್ಷದಲ್ಲಿ ಉನ್ನತ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗುತ್ತಿದೆ. ನಿಮ್ಮ ನಾಯಕರೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ನೀವು ಕೂಡಾ ಪಕ್ಷಕ್ಕೆ ಬನ್ನಿ ಎಂದು ಕೋರಿದ್ದರು ಎಂದು ಮೂಲಗಳು ತಿಳಿಸಿವೆ
 
ಒಂದು ವೇಳೆ, ಬಿಜೆಪಿ ಆಫರ್ ಒಪ್ಪಿಕೊಂಡಿದ್ದರೆ ಡಿ.ಕೆ.ಶಿವಕುಮಾರ್ ಐಟಿ ದಾಳಿಯಿಂದ ಬಚಾವ್ ಆಗಬಹುದಿತ್ತೋ ಎನ್ನುವ ಉಹಾಪೋಹಗಳು ಕಾಂಗ್ರೆಸ್ ವಲಯದಲ್ಲಿ ಹರಡಿವೆ.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಡಿ.ಕೆ. ಶಿವಕುಮಾರ್

ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ 2 ದಿನಗಳಿಂದ ನಿರಾಳರಾಗಿದ್ದ ಸಚಿವ ಡಿ.ಕೆ. ಶಿವಕುಮಾರ್ ಇವತ್ತು ಮತ್ತೆ ...

news

ಯುವತಿಯ ಬೆತ್ತಲೆ ಫೋಟೋ, ವಿಡಿಯೋ ಕಳುಹಿಸಿ ಖೆಡ್ಆಗೆ ಕೆಡವುತ್ತಾರೆ..!

ಭಾರತೀಯ ಹುಡುಗಿಯರನ್ನ ಕಳುಹಿಸುತ್ತೇವೆ ಎಂದು ವಿದೇಶಿಯರಿಗೆ ಆಮಿಶವೊಡ್ಡಿ ಸಾವಿರಾರು ಡಾಲರ್ ಹಣ ಪಡೆದು ...

news

ಊಟಕ್ಕಾಗಿ ಪತ್ನಿ ಜತೆ ಜಗಳವಾಡಿ ಮಕ್ಕಳನ್ನೇ ಕೊಂದ ಪಾಪಿ ತಂದೆ!

ನವದೆಹಲಿ: ಊಟದ ವಿಚಾರಕ್ಕಾಗಿ ಪತ್ನಿ ಜತೆ ಜಗಳವಾಡಿ ಕೊಲೆಯ ಹಂತಕ್ಕೆ ತಲುಪುವ ಕೆಲವು ಘಟನೆಗಳು ಇತ್ತೀಚೆಗೆ ...

news

ನಮಗೆ ಶಾಂತಿ ಬೇಕು ಆದರೆ ಭಾರತವೇ ಪ್ರತಿಕ್ರಿಯಿಸುತ್ತಿಲ್ಲ ಎಂದ ಪಾಕ್ ಸಚಿವ

ಇಸ್ಲಾಮಾಬಾದ್: ಪಾಕಿಸ್ತಾನ ಕಾಶ್ಮೀರ ವಿವಾದದ ಬಗ್ಗೆ ಮಾತುಕತೆಗೆ ಸಿದ್ಧ. ಆದರೆ ಭಾರತವೇ ಸಕಾರಾತ್ಮಕ ...

Widgets Magazine