ಕೆರೆಗಳ ಡಿನೋಟಿಫಿಕೇಷನ್ ಗೆ ಕೇಂದ್ರದ ವಿರೋಧ

ಬೆಂಗಳೂರು, ಶುಕ್ರವಾರ, 11 ಆಗಸ್ಟ್ 2017 (11:06 IST)

ಬೆಂಗಳೂರು: ರಾಜ್ಯದಲ್ಲಿ ಕೆರೆಗಳ ಡಿನೋಟಿಫಿಕೇಷನ್ ಗೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹಿನ್ನಡೆಯಾಗಿದೆ. ಕೆರೆಗಳ ಒತ್ತುವರಿ ಮಾಡುವುದನ್ನು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ವಿರೋಧ ವ್ಯಕ್ತಪಡಿಸಿದ್ದಾರೆ.


 
ಕರ್ನಾಟಕದಿಂದ ಕೆರೆಗಳ ಡಿನೋಟಿಫಿಕೇಷನ್ ಪ್ರಸ್ತಾವನೆ ಕೇಂದ್ರದ ಕೈ ತಲುಪಿಲ್ಲ. ಒಂದು ವೇಳೆ ಪ್ರಸ್ತಾವನೆ ಬಂದರೆ ರಾಜ್ಯ ಸರ್ಕಾರದ ವರದಿ ಕೇಳುತ್ತೇವೆ, ಇದನ್ನು ಒಪ್ಪುವ ಪ್ರಶ್ನೆಯೇ ಇಲ್ಲ ಎಂದು ಉಮಾಭಾರತಿ ಸ್ಪಷ್ಟಪಡಿಸಿದ್ದಾರೆ.
 
ಇತ್ತೀಚೆಗೆ ಮಳೆ ಕಡಿಮೆಯಾಗಿದ್ದು, ಜಲಮೂಲಗಳೇ ಬರಿದಾಗುತ್ತಿದೆ. ಅಂತಹ ಸಂದರ್ಭದಲ್ಲಿ ಕೆರೆಗಳನ್ನು ಒತ್ತುವರಿ ಮಾಡುವುದು ಸರಿಯಲ್ಲ. ಇದಕ್ಕೆ ಕೇಂದ್ರದ ಸಂಪೂರ್ಣ ವಿರೋಧವಿದೆ ಎಂದು ಲೋಕಸಭೆಯಲ್ಲಿ ಉಮಾಭಾರತಿ ಹೇಳಿದ್ದಾರೆ. ಕರ್ನಾಟಕ ಸುಮಾರು 1,600 ಕೆರೆಗಳನ್ನು ಡಿನೋಟಿಫೈ ಮಾಡುವ ಕ್ರಮಕ್ಕೆ ಮುಂದಾಗಿತ್ತು. ಇದು ಒಳ್ಳೆಯ ಕ್ರಮವಲ್ಲ ಎಂದು ಸಚಿವರು ಹೇಳಿದ್ದಾರೆ.
 
ಇದನ್ನೂ ಓದಿ… ವಾರ್ತೆ ಓದುತ್ತಿರುವಾಗ  ಪೋರ್ನ್ ವಿಡಿಯೋ ಪ್ಲೇ ಮಾಡಿದ ವಾಹಿನಿ!
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  
ಕೆರೆಗಳ ಡಿನೋಟಫಿಕೇಷನ್ ಉಮಾಭಾರತಿ ಕರ್ನಾಟಕ ಸರ್ಕಾರ ರಾಜ್ಯ ಸುದ್ದಿಗಳು Lake Denotification Uma Bharathi Karnataka Govt State News

ಸುದ್ದಿಗಳು

news

ವಾರ್ತೆ ಓದುತ್ತಿರುವಾಗ ಪೋರ್ನ್ ವಿಡಿಯೋ ಪ್ಲೇ ಮಾಡಿದ ವಾಹಿನಿ!

ಲಂಡನ್: ಬಿಬಿಸಿ ವಾರ್ತೆ ಎಂದರೆ ಅದಕ್ಕೆ ತನ್ನದೇ ಆದ ಘನತೆಯಿದೆ. ಆದರೆ ಇದೇ ಬಿಬಿಸಿ ವಾಹಿನಿಯೊಂದು ಮಾಡಿದ ...

news

ಚಿತ್ರಮಂದಿರಗಳಲ್ಲಿ ಕೂಲ್ ಡ್ರಿಂಕ್ಸ್ ಬ್ಯಾನ್.. ಎಳನೀರು ಮಾತ್ರ ಸಿಗುತ್ತೆ..?

ಸಂಕಷ್ಟದಲ್ಲಿರುವ ರೈತರ ನೆರವಿಗೆ ಬರುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮಲ್ಟಿಪ್ಲೆಕ್ಸ್ ಮತ್ತು ಇನ್ನುಳಿದ ...

news

ತುಳುವಿನಲ್ಲಿ ಸದಾನಂದ ಗೌಡರ ಇಂಟರೆಸ್ಟಿಂಗ್ ಟ್ವೀಟ್

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರು ಮೂಲತಃ ತುಳುನಾಡಿನವರು ಎಂಬುದು ಎಲ್ಲರಿಗೂ ಗೊತ್ತು. ಅವರು ತಮ್ಮ ...

news

ಉಷಾಪತಿ ಇದೀಗ 13 ನೇ ಉಪರಾಷ್ಟ್ರಪತಿ

ನವದೆಹಲಿ: ದೇಶದ 13 ನೇ ಉಪರಾಷ್ಟ್ರಪತಿಯಾಗಿ ಇಂದು ವೆಂಕಯ್ಯನಾಯ್ಡು ಪ್ರಮಾಣವಚನ ಸ್ವೀಕರಿಸಿದರು. ...

Widgets Magazine