ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಪ್ರಕರಣ: 164 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು, ಮಂಗಳವಾರ, 7 ಮಾರ್ಚ್ 2017 (11:07 IST)

Widgets Magazine

ಬೆಂಗಳೂರು(ಮಾ.07): ಡಿಸೆಂಬರ್ 31ರ ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
 


ಎಸಿಪಿ ರವಿಕುಮಾರ್ ನೇತೃತ್ವದ ತಂಡ 11ನೇ ಎಸಿಎಂಎಂ ಕೋರ್ಟ್`ಗೆ ಸಲ್ಲಿಸಲಾಗಿರುವ 164 ಪುಟಗಳ ಚಾರ್ಜ್ ಶೀಟ್`ನಲ್ಲಿ 32 ಸಾಕ್ಷ್ಯಗಳನ್ನ ಉಲ್ಲೇಖಿಸಲಾಗಿದೆ.

ಪ್ರಶಾಂತ್ ಫ್ರಾನ್ಸಿಸ್ ಹಾಗೂ ಸಿಸಿಟಿವಿ ವಿಡಿಯೋ, ಆರೋಪಿಗಳ ಅಯ್ಯಪ್ಪ, ಲಿನೋ, ರಾಜು, ಚಿನ್ನು, ಪಪ್ಪಿ ತಪ್ಪೊಪ್ಪಿಗೆ, ಸಂತ್ರಸ್ತೆ ಆರೋಪಿಗಳನ್ನ ಗುರ್ತಿಸಿದ ವರದಿ ಸೇರಿ ಇತರೆ ಸಾಕ್ಷ್ಯಗಳನ್ನ ಚಾರ್ಜ್ ಶೀಟ್`ನಲ್ಲಿ ಉಲ್ಲೇಖಿಸಲಾಗಿದೆ.

ಹೊಸವರ್ಷಾಚರಣೆಯ ರಾತ್ರಿ ಕಮ್ಮನಹಳ್ಳಿಯಲ್ಲಿ ಯುವತಿ ಮೇಲೆ ನಡೆದಿತ್ತು. ಆಟೋ ಇಳಿದು ಮನೆಗೆ ತೆರಳುತ್ತಿದ್ದ ಯುವತಿ ಮೇಲೆರಗಿದ್ದ ಕಾಮುಕರ ಗುಂಪು ಹಿಂಸೆ ನೀಡಿತ್ತು. ಒಬ್ಬ ಕಾಮುಕ ಯುವತಿಯನ್ನ ತಬ್ಬಿ ಅಸಭ್ಯವಾಗಿ ವರ್ತಿಸಿದ್ದ. ಸಿಸಿಟಿವಿಯಲ್ಲಿ ದೌರ್ಜನ್ಯದ ವಿಡಿಯೋ ರೆಕಾರ್ಡ್ ಆಗಿತ್ತು. ದೇಶಾದ್ಯಂತ  ಪ್ರಕರಣ ಭಾರೀ ಸುದ್ದಿ ಮಾಡಿತ್ತು. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮ್ಯಾನ್ ಹೋಲ್ ದುರಂತ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ

ಬೆಂಗಳೂರಿನ ಸಿ.ವಿ. ರಾಮನ್ ನಗರದ ಮ್ಯಾನ್ ಹೋಲ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ...

news

ಎಟಿಎಂ ಹಲ್ಲೆಕೋರ ಮಧುಕರ ರೆಡ್ಡಿ ಬೆಂಗಳೂರಿಗೆ

ಎಟಿಎಂ ಹಲ್ಲೆಕೋರ ಮಧುಕರ ರೆಡ್ಡಿಯನ್ನು ಬೆಂಗಳೂರಿಗೆ ಕರೆತರಲಾಗಿದೆ.

news

ಮ್ಯಾನ್‌ಹೋಲ್‌ನಲ್ಲಿ ಮೂವರು ಬಲಿ

ಮ್ಯಾನ್‌ಹೋಲ್ ದುರಸ್ತಿ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಮತ್ತು ಟ್ರಾಕ್ಟರ್ ಚಾಲಕ ಮೃತಪಟ್ಟಿರುವ ದಾರುಣ ...

news

ಹಿರಿಯ ನಟಿ ಪದ್ಮಾ ಕುಮುಟಾ ಇನ್ನಿಲ್ಲ

ಕನ್ನಡ ಚಿತ್ರರಂಗದ ಹಿರಿಯ ನಟಿ ಪದ್ಮಾ ಕುಮುಟಾ(58) ಕೊನೆಯುಸಿರೆಳೆದಿದ್ದಾರೆ.ಅವರಿಗೆ 58 ವರ್ಷ ...

Widgets Magazine Widgets Magazine