ಸಿಎಂ ಸಿದ್ದರಾಮಯ್ಯಗೆ ದುರಹಂಕಾರ ಬಂದಿದೆ: ಕುಮಾರಸ್ವಾಮಿ ಕಿಡಿ

ಬೆಂಗಳೂರು, ಗುರುವಾರ, 17 ಆಗಸ್ಟ್ 2017 (15:30 IST)

Widgets Magazine

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದುರಹಂಕಾರ ಬಂದಿದೆ. ಹಣಬಲದಿಂದ ಮುಂಬರುವ ಚುನಾವಣೆ ಗೆಲ್ಲುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಸಿಎಂ, ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಜನಗೂಡು, ಗುಂಡ್ಲುಪೇಟೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು 100 ಕೋಟಿ ಖರ್ಚುಮಾಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
 
ನನ್ನನ್ನು ಬಹಳ ಮೃದು ಸ್ವಭಾವದವರು ಎಂದು ತಿಳಿದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಸ್ವೇಚ್ಚಾಚಾರ, ಹಣ ಲೂಟಿ ವಿರುದ್ಧ ಮೃದು ಧೋರಣೆ ತಾಳುವುದಿಲ್ಲ. ಸರಕಾರದ ವಿರುದ್ಧ ಹೋರಾಟ ಖಚಿತ ಎಂದು ತಿಳಿಸಿದ್ದಾರೆ.
 
ಬೆಂಗಳೂರು ಅಭಿವೃದ್ಧಿ ಮಾಡಿದ್ದೇವೆ ಎಂದು ಪುಟಗಟ್ಟಲೆ ಜಾಹೀರಾತು ನೀಡಿದ್ದಾರೆ. ಆದರೆ, ಯಾವುದೇ ರೀತಿಯಲ್ಲೂ ಬೆಂಗಳೂರು ಅಭಿವೃದ್ಧಿಯಾಗಿಲ್ಲ. ಕೇವಲ ಜಾಹೀರಾತಿನಲ್ಲಿ ಮಾತ್ರ ಅಭಿವೃದ್ಧಿಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿ ಕಾಂಗ್ರೆಸ್ ಜೆಡಿಎಸ್ Kumarswamy Congress Jds Cm Siddaramaiah

Widgets Magazine

ಸುದ್ದಿಗಳು

news

ಸೊಸೆಯನ್ನ ರಕ್ಷಿಸಲು ಮಗನನ್ನೆ ಕೊಂದ ತಾಯಿ..!

ಮಗ ಕೊಡುತ್ತಿದ್ದ ಚಿತ್ರಹಿಂಸೆಯಿಂದ ಸೊಸೆಯನ್ನ ರಕ್ಷಿಸಲು ತಾಯಿಯೇ ಮಗನನ್ನ ಕೊಂದಿರುವ ಘಟನೆ ಮುಂಬೈನ ಮ್ಯಾನ್ ...

news

ಸಿಎಂ ಸಿದ್ದರಾಮಯ್ಯ ಆಪ್ತ ಸಿಎಂ.ಇಬ್ರಾಹಿಂಗೆ ಎಂಎಲ್‌ಸಿ ಸ್ಥಾನ

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ ಸಿಎಂ. ಇಬ್ರಾಹಿಂ ಅವರಿಗೆ ವಿಧಾನಪರಿಷತ್‌ಗೆ ನಾಮ ನಿರ್ದೇಶನ ಮಾಡುವ ...

news

ಕೇಂದ್ರ ರೈಲ್ವೆ, ಗೃಹ ಸಚಿವರನ್ನ ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಮಾತುಕತೆ

ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ರೈಲ್ವೆ ಸಚಿವ ಸುರೇಶ್ ...

news

ಸಿಎಂ ಸಿದ್ದರಾಮಯ್ಯ ಬುರುಡೆ ಬಿಡುವುದನ್ನು ನಿಲ್ಲಿಸಲಿ: ಯಡಿಯೂರಪ್ಪ ಆಕ್ರೋಶ

ಬೆಂಗಳೂರು: ವಿಪಕ್ಷಗಳ ವಿರುದ್ಧ ಮನಬಂದಂತೆ ಟೀಕಿಸುತ್ತಿರುವ ಸಿಎಂ ಸಿದ್ದರಾಮಯ್ಯ. ಮೊದ್ಲು ಬುರುಡೆ ...

Widgets Magazine