ಚಿಕ್ಕಮಾದು ಅವರ ಪುತ್ರ ಅನಿಲ್ ಚಿಕ್ಕಮಾದು ಚಿತ್ತ ಕಾಂಗ್ರೆಸ್ ನತ್ತ

ಮೈಸೂರು, ಸೋಮವಾರ, 5 ಫೆಬ್ರವರಿ 2018 (11:11 IST)

ಮೈಸೂರು : ಜೆಡಿಎಸ್ ಶಾಸಕರಾಗಿದ್ದ ದಿವಂಗತ ಚಿಕ್ಕಮಾದು ಅವರ ಕುಟುಂಬವನ್ನು ಕಾಂಗ್ರೆಸ್‍ ನತ್ತ ಎಳೆದುಕೊಳ್ಳುವಲ್ಲಿ ಸಿಎಂ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದು, ಇದರಿಂದಾಗಿ ತವರು ನಾಡಾದ ಮೈಸೂರು ಭಾಗದಲ್ಲಿ ಜೆಡಿಎಸ್ ಬಲ ತಗ್ಗಿದಂತಾಗಿದೆ.


ದಿವಂಗತ ಶಾಸಕ ಚಿಕ್ಕಮಾದು ಅವರ ಪುತ್ರ ಜಿಲ್ಲಾ ಪಂಚಾಯತ್ ಸದಸ್ಯ ಅನಿಲ್ ಚಿಕ್ಕಮಾದು, ಸೋಮವಾರ (ಇಂದು) ತಮ್ಮ ಜಿಲ್ಲಾ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರುವುದನ್ನು ಅಧಿಕೃತಗೊಳಿಸಿದ್ದಾರೆ. ಎಚ್.ಡಿ ಕೋಟೆ ಪರಿಶಿಷ್ಟ ವರ್ಗದ ಮೀಸಲು ಕ್ಷೇತ್ರದ ಶಾಸಕರಾಗಿದ್ದ ಚಿಕ್ಕಮಾದು ಅಕಾಲಿಕ ಮರಣಕ್ಕೆ ಇಡಾಗಿದ್ದರು. ಇವರ ಮಗ ಅನಿಲ್ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಆಗುವ ಇಚ್ಛೆ ಹೊಂದಿದ್ದರು. ಆದರೆ ಅಲ್ಲಿನ ಮಾಜಿ ಶಾಸಕ ಚಿಕ್ಕಣ್ಣ ಇತ್ತೀಚೆಗೆ ಜೆಡಿಎಸ್ ಸೇರ್ಪಡೆಯಾದ ಕಾರಣ ಟಿಕೆಟ್ ಕೈ ತಪ್ಪುವ ಸ್ಥಿತಿ ಇತ್ತು. ಇದನ್ನು ಅರಿತ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಟಿಕೆಟ್ ಭರವಸೆ ನೀಡಿ ಚಿಕ್ಕಮಾದು ಕುಟುಂಬವನ್ನು ಕಾಂಗ್ರೆಸ್‍ಗೆ ಸೆಳೆದಿದ್ದಾರೆ. ಇದರಿಂದ ಜೆಡಿಎಸ್‍ಗೆ ದೊಡ್ಡ ಹಿನ್ನಡೆಯಾದಂತಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದಿನಿಂದ ವಿಧಾನಮಂಡಲ ಅಧಿವೇಶನ: ಬಜೆಟ್ ಯಾವಾಗ ಗೊತ್ತಾ?

ಬೆಂಗಳೂರು: ಇಂದಿನಿಂದ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗುತ್ತಿದ್ದು, ಸದನವನ್ನುದ್ದೇಶಿಸಿ ಮಾತನಾಡಲು ...

news

ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ ಸಚಿವ ಡಿಕೆ ಶಿವಕುಮಾರ

ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ ಕಾರ್ಯಕರ್ತನಿಗೆ ಇಂಧನ ಸಚಿವ ಡಿ.ಕೆ.ಶಿವಕುಮಾರ ಕಪಾಳಮೋಕ್ಷ ...

news

ಕಾವೇರಿ ವಿವಾದ ಅಂತಿಮ ತೀರ್ಪು ಇಂದು! ಏನಾಗುತ್ತೋ ಎಂಬ ಆತಂಕ!

ಬೆಂಗಳೂರು: ಕಾವೇರಿ ನದಿ ನೀರಿನ ಹಂಚಿಕೆ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದ್ದು, ಈ ...

news

ಪ್ರಧಾನಿ ಮೋದಿ ಮಹದಾಯಿ ಬಗ್ಗೆ ಚಕಾರವೆತ್ತಲಿಲ್ಲವೇಕೆ? ಸದಾನಂದ ಗೌಡ ಹೇಳಿದ್ದೇನು ಗೊತ್ತಾ?!

ಬೆಂಗಳೂರು: ಪರಿವರ್ತನಾ ರ್ಯಾಲಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಗಂಟೆ ಭಾಷಣ ಮಾಡಿದ ...

Widgets Magazine
Widgets Magazine