ನಗರಗಳಿರುವುದು ಸುಗಮ ಜೀವನಕ್ಕಾಗಿ, ವಾಹನಗಳ ಭರಾಟೆಗಲ್ಲ

ಬೆಂಗಳೂರು, ಶುಕ್ರವಾರ, 15 ಸೆಪ್ಟಂಬರ್ 2017 (20:45 IST)

ನಗರಗಳಿರುವುದು ಜನರ ಸುಗಮ ಜೀವನಕ್ಕಾಗಿಯೇ ಹೊರತು ವಾಹನಗಳ ಭರಾಟೆಗಲ್ಲ. ನಗರಗಳ ಸುಸ್ಥಿರತೆಗೆ ನೇಸರ್ಗಿಕ ಸಂಪನ್ಮೂಲಗಳ ಅಸಮರ್ಪಕ ಬಳಕೆ ನಿಲ್ಲಿಸಬೇಕು ಎಂದು ಅಮೆರಿಕದ ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್‌ ನಗರದ ಸುಸ್ಥಿರತೆ ವಿಭಾಗದ ನಿರ್ದೇಶಕರಾಗಿರುವ  ಲೆ ಬ್ಯಾಂಬರ್ಗರ್‌  ಅಭಿಪ್ರಾಯಪಟ್ಟಿದ್ದಾರೆ. 


ನಗರದಲ್ಲಿ ಗುರುವಾರ ಚೆನ್ನೈನ ಮೆರಿಕ ರಾಯಭಾರ ಕಚೇರಿ ಮತ್ತು ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ ಏರ್ಪಡಿಸಿದ್ದ ನಗರ, ರಾಜಕಾರಣ ಮತ್ತು ಸುಸ್ಥಿರತೆ ವಿಷಯದ ಸಂವಾದದಲ್ಲಿ ಬಗ್ಗೆ ವಿದ್ಯಾರ್ಥಿಗಳು, ವಿಜ್ಞಾನಿಗಳು ಮತ್ತು ಸಮಾಜದ ಪ್ರಮುಖರನ್ನ ಉದ್ದೇಶಿಸಿ ಉಪನ್ಯಾಸ ನೀಡಿದರು.

ಯೋಜಿಸುವಲ್ಲಿ ಸಂರಕ್ಷಣಾ ವಿಜ್ಞಾನ ಮತ್ತು ನಿರ್ವಹಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಜ್ಞಾನ ವಿನಿಮಯ ಸಂವಾದ ಕಾರ್ಯಕ್ರಮದಲ್ಲಿ ಸ್ಥಳೀಯ ಎನ್‌ಜಿಒ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ’ಗ್ರೀನೊವೇಟ್‌’ ರಾಯಭಾರಿಗಳನ್ನ ಭೇಟಿಯಾದರು. ಹವಾಮಾನ ಬದಲಾವಣೆಯನ್ನು ತಡೆಯುವಲ್ಲಿ ಉದ್ಯಮಗಳ ಪಾತ್ರದ ಕುರಿತು ಪರಿಸರ ಸ್ನೇಹಿ ಉದ್ಯಮಗಳ ಸಿಇಒ ಮತ್ತು ಸಿಒಒಗಳೊಂದಿಗೆ ಮಾತುಕತೆ ನಡೆಸಿದರು. ವಿಜ್ಞಾನಿಗಳು, ಸಂಶೋಧಕರು ಮತ್ತು ಚಿಂತಕರೊಂದಿಗೆ ಸುಸ್ಥಿರ ನಗರಗಳ ಬಗ್ಗೆ ಚರ್ಚೆ ನಡೆಸಿದರು.

ಸದ್ಯ ಲೆ ಬ್ಯಾಂಬರ್ಗರ್‌, ಅಮೆರಿಕದ ರೋಡ್‌ ಐಲ್ಯಾಂಡ್‌ನ ಪ್ರಾವಿಡೆನ್ಸ್‌ ನಗರದ  ಸಸ್ಟೈನಬಲಿಟಿ ವಿಭಾಗದ ನಿರ್ದೇಶಕರಾಗಿ ದುಡಿಯುತ್ತಿದ್ದಾರೆ. ತ್ಯಾಜ್ಯವನ್ನು ಮಿತಿಗೊಳಿಸುವುದು, ಮಾಲಿನ್ಯದ ತಡೆ, ಕಾರ್ಯಕ್ಷಮತೆ ಹೆಚ್ಚಳಕ್ಕೆ ಪ್ರೋತ್ಸಾಹ ಮತ್ತು ಸ್ಥಳೀಯ ಸಂಪನ್ಮೂಲಗಳ ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಸುಸ್ಥಿರ ನಗರದ ವಿಷಯವಾಗಿ ಬೋಸ್ಟನ್ ನಗರವನ್ನ ಪ್ರಸ್ತಾಪಿಸಿದ ವರು ನಾವಿಡುವ ಪ್ರತಿಯೊಂದು ಹೆಜ್ಜೆ ದೊಡ್ಡ ಪ್ರತ ಫಲ ಕೊಡುತ್ತದೆ. ಬೋಸ್ಟನ್ ನಗರದಲ್ಲಿರುವ ಗಲವಾದ ಪಾದಚಾರಿ ಮಾರ್ಗ, ಪ್ರತ್ಯೇಕ ಸೈಕಲ್ ಸಂಚಾರ ಮಾರ್ಗ, ನೀರಿನ ಪುನರ್ಬಳಕೆ ಪ್ರಸ್ತಾಪಿಸಿದರು. ಮಾಲಿನ್ಯದ ಅರಿವಿರುವ ಅಲ್ಲಿನ ಜನ ಸ್ವಪ್ರೇರಣೆಯಿಂದ ಇಂಧನ, ವಿದ್ಯುತ್ ಮಿತ ಬಳಕೆ, ಮಾಲಿನ್ಯ ನಿಯಂತ್ರಣದ ಮೂಲಕ ನಗರದ ಸುಸ್ಥಿರತೆಗೆ ಕಟಿಬದ್ಧರಾಗಿದ್ದಾರೆಂದು ತಿಳಿಸಿದರು.
 
 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಳೆ ಸಿಎಂ ಸಿದ್ದರಾಮಯ್ಯ, ಸೋನಿಯಾ ಗಾಂಧಿ ಭೇಟಿ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಭೇಟಿ ...

news

ಸಿಎಂ ಸಿದ್ದರಾಮಯ್ಯರೊಂದಿಗೆ ನಡೆದ ಎಂಎಲ್‌ಸಿಗಳ ಸಭೆ ವಿಫಲ

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಧಾನಪರಿಷತ್ ಸದಸ್ಯರೊಂದಿಗೆ ...

news

.ನಡುರಸ್ತೆಯಲ್ಲೇ ಮುತ್ತು ಮತ್ತು ಮತ್ತಿನಾಟ.. ಬೆಚ್ಚಿಬಿದ್ದ ಬೆಂಗಳೂರು

ಉದ್ಯಾನ ನಗರಿ ಬೆಂಗಳೂರಿನಲ್ಲಿ ಪುಂಡರ ಪುಂಡಾಟಕ್ಕೆ ಮಿತಿಯೇ ಇಲ್ಲದಂತಾಗಿದೆ. ನಡುರಸ್ತೆಯ ಸಿಗ್ನಲ್`ನಲ್ಲಿ ...

news

ಮೋದಿಯ ವಿಪಕ್ಷ ಮುಕ್ತ ಭಾರತ ಕನಸು ನನಸಾಗಲ್ಲ: ಶರದ್ ಯಾದವ್

ಜೈಪುರ್: ವಿಪಕ್ಷಮುಕ್ತ ಭಾರತ ಎನ್ನುವ ಪ್ರಧಾನಿ ನರೇಂದ್ರ ಮೋದಿಯ ಕನಸು ಯಾವತ್ತೂ ನನಸಾಗುವುದಿಲ್ಲ ಎಂದು ...

Widgets Magazine
Widgets Magazine