ಒಂದೆಡೆ ಕೊರೊನಾ ಮತ್ತೊಂದೆಡೆ ಮಳೆಹಾನಿ ರಾಜ್ಯದ ಜನರನ್ನು ಹೈರಾಣು ಮಾಡುತ್ತಿದೆ. ಈ ನಡುವೆ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಡಿಸಿಎಂ ಲಕ್ಷ್ಮಣ ಸವದಿ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ ಎಂಬ ಮಾತುಗಳು ಬಲವಾಗಿ ಕೇಳಿಬರತೊಡಗಿವೆ. ಈ ಹಿಂದೆ ಸಚಿವ ಲಕ್ಷ್ಮಣ ಸವದಿ ದೆಹಲಿಗೆ ತೆರಳಿದ್ದಾಗಲೂ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಸಿಎಂ ಅವರು ನಡೆಸಿರುವ ವೈಮಾನಿಕ ಸಮೀಕ್ಷೆ ವೇಳೆ ಡಿಸಿಎಂರನ್ನು ಜೊತೆಗೆ ಕರೆದುಕೊಂಡು ಹೋಗದಿರೋದಕ್ಕೆ ಹಲವು ಊಹಾಪೋಹಗಳು ಕೇಳಿಬರಲಾರಂಭಿಸಿವೆ.