ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣ: ಆರೋಪ

ರಾಮನಗರ, ಶುಕ್ರವಾರ, 10 ಆಗಸ್ಟ್ 2018 (14:52 IST)

ಸಿಎಂ ಕ್ಷೇತ್ರ ಭಯೋತ್ಪಾದಕರ ಅಡಗುತಾಣವಾಗ್ತಿದೆ. ಹೀಗಂತ ಆರೋಪಿಸಿ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರೇಷ್ಮೆನಗರಿ ಜಿಲ್ಲೆಯಲ್ಲಿ ಬಂಧಿತನಾದ ಮುನೀರ್ ಬಂಧನದ ಪ್ರಕರಣದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಜೆಪಿ ಕಾರ್ಯಕರ್ತರು ರಾಮನಗರದಲ್ಲಿ ಪ್ರತಿಭಟನೆ ನಡೆಸಿದ್ರು. ಸಿ.ಎಂ. ಕುಮಾರಸ್ವಾಮಿ ಅವರ ತವರು ಜಿಲ್ಲೆ ರಾಮನಗರ ಇತ್ತೀಚಿನ ದಿನಗಳಲ್ಲಿ ಭಯೋತ್ಪಾಕರ ಅಡಗು ತಾಣವಾಗ್ತಿದೆ. ರಾಜ್ಯದಲ್ಲಿನ ಸಮಿಶ್ರ ಸರ್ಕಾರ ಭಯೋತ್ಪಾದಕರಿಗೆ ಆಶ್ರಯವನ್ನು ನೀಡ್ತಿದೆ. ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ. ದೇವೇಗೌಡರು ಹಾಗೂ ಸಿ.ಎಂ. ಕುಮಾರಸ್ವಾಮಿ ಅವರು ಇಂತಹ ಭಯೋತ್ಪಾದಕರ ಪರವಾಗಿದ್ದಾರೆಯೇ ಹೊರತು, ರಾಜ್ಯದ ಹಿತವನ್ನು ಕಾಪಾಡುವುದಿಲ್ಲ.

ಕುಮಾರಸ್ವಾಮಿ ಅವರು ಓಟ್ ಬ್ಯಾಂಕಿಗಾಗಿ ಬಾಂಗ್ಲಾ ವಲಸಿಗರಿಗೆ ಆಶ್ರಯವನ್ನು ನೀಡ್ತಿದ್ದಾರೆ. ಸರ್ಕಾರ ಈ ಕೂಡಲೇ ಇಂತಹ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಿ ಗಡಿಪಾರು ಮಾಡಬೇಕು. ಸಿ.ಎಂ. ಕುಮಾರಸ್ವಾಮಿ ಅವರು ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಾರ್ಯಕರ್ತರು ಧಿಕ್ಕಾರವನ್ನು ಕೂಗಿದರು.  ರಾಮನಗರ ಜಿಲ್ಲಾಧಿಕಾರಿಗೆ ಮನವಿ ನೀಡಿ, ಕೂಡಲೇ ರಾಮನಗರದಲ್ಲಿರುವ ಬಾಡಿಗೆ ಮನೆಯವರ ಸಂಪೂರ್ಣ ವಿವರವನ್ನು ಕಲೆ ಹಾಕುವಂತೆ ಒತ್ತಾಯ ಮಾಡಿದ್ರು.
 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತಿಯ ಗುಂಡೇಟಿಗೆ ಬಲಿಯಾದ ಪಾಕಿಸ್ತಾನದ ಖ್ಯಾತ ಗಾಯಕಿ ರೇಷ್ಮಾ

ಇಸ್ಲಾಮಾಬಾದ್ : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಅವರನ್ನು ...

news

ಹುಡುಗಿಗಾಗಿ ಕಿತ್ತಾಡಿದರು; ಮಸಣ ಸೇರಿದ ಯುವಕ

ಒಂದೇ ಹುಡುಗಿಯ ವಿಷಯವಾಗಿ ಮೂವರು ಯುಕವರು ಕಿತ್ತಾಡಿಕೊಂಡಿದ್ದಾರೆ. ಮೂವರ ಜಗಳದಲ್ಲಿ ಒಬ್ಬ ಕೊಲೆಯಾಗಿ ...

news

ಧರ್ಮಸ್ಥಳ ಗ್ರಾಮಾಭಿವೃದ್ದಿ ಬ್ಯಾಂಕ್‍ನಿಂದ ಹಲವು ಯೋಜನೆ ಜಾರಿ

ರೈತರು ಜೀವನದಲ್ಲಿ ಬದಲಾವಣೆ ತರಬೇಕಾದರೆ ಅವರು ಸ್ವಾವಲಂಬಿಗಳಾಬೇಕು. ಹೀಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ...

news

ಕೋಟೆನಾಡಿನಿಂದ ರಣಕಹಳೆ ಊದಲು ಕೈಪಾಳೆಯ ರೆಡಿ

ಲೋಕಸಭಾ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ ರಾಷ್ಟ್ರೀಯ ಪಕ್ಷಗಳ ರಣಕಹಳೆ ಜೋರಾಗಿದೆ. ಗಡಿನಾಡಿನಿಂದ ...

Widgets Magazine