ಪರಪ್ಪನ ಅಗ್ರಹಾರ ರಹಸ್ಯ ಭೇದಿಸಲು ಸಿಎಂ ಆದೇಶ

ಬೆಂಗಳೂರು, ಶುಕ್ರವಾರ, 14 ಜುಲೈ 2017 (15:07 IST)

ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಿಳುನಾಡಿನ ಎಐಎಡಿಎಂಕೆ ನಾಯಕಿ ವಿ.ಕೆ. ಶಶಿಕಲಾಗೆ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎನ್ನುವ ವರದಿ ಹಿನ್ನೆಲೆಯಲ್ಲಿ ತನಿಖೆಗೆ ಆದೇಶಿಸಿದ್ದಾರೆ.
 
ಶಶಿಕಲಾಗೆ ಪ್ರತ್ಯೇಕ ಅಡುಗೆಮನೆ ಸೇರಿದಂತೆ ಇತರ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂದು ಡಿಐಜಿ ರೂಪಾ ಮೌಡ್ಗಿಲ್ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆಯಿಂದ ಡಿಐಜಿ ರೂಪಾ ಮತ್ತು ಡಿಜಿ ಸತ್ಯನಾರಾಯಣರಾವ್ ಮಧ್ಯೆ ಭಾರಿ ತಿಕ್ಕಾಟ ಆರಂಭವಾಗಿದೆ.
 
ಘಟನೆಯ ಬಗ್ಗೆ ತನಿಖೆ ನಡೆಸಲು ನಿವೃತ್ತ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದ್ದು, ಒಂದು ವಾರದೊಳಗೆ ಪ್ರಾಥಮಿಕ ವರದಿಯನ್ನು ಸಲ್ಲಿಸುವಂತೆ ಆದೇಶ ನೀಡಿದ್ದಾರೆ.
 
ಒಂದು ತಿಂಗಳೊಳಗಾಗಿ ಪರಪ್ಪನ ಅಗ್ರಹಾರ ಜೈಲಿನ ಅವ್ಯವಹಾರಗಳ ಬಗ್ಗೆ ಸಮಗ್ರ ವರದಿ ಸಲ್ಲಿಸುವಂತೆ ಸಮಿತಿಗೆ ಆದೇಶ ನೀಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಮಣಿಪುರದಲ್ಲಿ ಸಶಸ್ತ್ರಪಡೆಗಳಿಂದ ನಕಲಿ ಎನ್ ಕೌಂಟರ್: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

ಮಣಿಪುರದಲ್ಲಿ ಸೇನೆ, ಅಸ್ಸಾಂ ರೈಫಲ್ಸ್ ಮತ್ತು ಪೊಲೀಸರಿಂದ ನಡೆದಿದೆ ಎನ್ನಲಾದ ನಕಲಿ ಎನ್ ಕೌಂಟರ್ ಗೆ ...

news

ಸಿಎಂ ಪಂಥಹ್ವಾನ ನೀಡಿರುವುದು ಮುರ್ಖತನ: ಯಡಿಯೂರಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸಾಧನೆ ಮತ್ತು ತಮ್ಮ ಸಾಧನೆಯ ಬಗ್ಗೆ ಚರ್ಚಿಸಲು ಸಿಎಂ ಸಿದ್ದರಾಮಯ್ಯ ...

news

ಕಾಶ್ಮೀರದಲ್ಲಿ ಎಕೆ 47 ಗನ್ ವಿಕೆಟ್ ಮಾಡಿಕೊಂಡು ಕ್ರಿಕೆಟ್ ಆಡಿದ ಉಗ್ರರು..!

ದಕ್ಷಿಣ ಕಾಶ್ಮಿರದಲ್ಲಿ ಉಗ್ರರ ಗುಂಪೊಂದು ಎಕೆ 47 ಗನ್ ಅನ್ನ ವಿಕೆಟ್ ರೀತಿ ಇಟ್ಟು ಕ್ರಿಕೆಟ್ ಆಡಿರುವ ...

news

ಮೊದ್ಲು ನೀವು ಶಾಸಕರಾಗಿ ಆಯ್ಕೆಯಾಗ್ತೀರಾ ನೋಡಿ? : ಸಿಎಂಗೆ ಕುಮಾರಸ್ವಾಮಿ ಸವಾಲ್

ಬೆಂಗಳೂರು: ಯಡಿಯೂರಪ್ಪ, ಕುಮಾರಸ್ವಾಮಿ ಅವರಪ್ಪನಾಣೆಗೂ ಮತ್ತೊಮ್ಮೆ ಮುಖ್ಯಮಂತ್ರಿ ಆಗಲ್ಲ ಎನ್ನುವ ಸಿಎಂ ...

Widgets Magazine