ಕೆಂಪಯ್ಯ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು, ಭಾನುವಾರ, 16 ಜುಲೈ 2017 (11:09 IST)

ಬಂಟ್ವಾಳ ಗಲಭೆ ಪ್ರಕರಣ ನಿರ್ವಹಣೆಯಲ್ಲಿ ನಿರ್ಲಕ್ಷ್ಯತೆ ತೋರಿದ ಗೃಹ ಸಚಿವರ ಸಲಹೆಗಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹಿಂಸಾಚಾರ ಪ್ರಕರಣಗಳಲ್ಲಿ ಗುಪ್ತಚರ ಇಲಾಖೆ ವೈಫಲ್ಯತೆ ಮೆರೆದಿರುವ ಅಧಿಕಾರಿಗಳ ವಿರುದ್ಧ ಕೂಡಾ ಹರಿಹಾಯ್ದಿದ್ದಾರೆ. ಗುಪ್ತಚರ ಡಿಜಿ ಎಂ.ಎನ್.ರೆಡ್ಡಿ ವಿರುದ್ಧವೂ ಕಿಡಿಕಾರಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆಯುತ್ತಿರುವ ಕರ್ಮಕಾಂಡದ ಬಗ್ಗೆ ಡಿಐಜಿ ರೂಪಾ ನೀಡಿರುವ ವರದಿ ಕೂಡಾ ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ. ಡಿಐಜಿ ಮತ್ತು ಡಿಜಿ ಸತ್ಯನಾರಾಯಣ್ ರಾವ್ ನಡುವಿನ ವೈಮನಸ್ಸು ಕೂಡಾ ಸರಕಾರದ ನಿದ್ದೆಗೆಡಿಸಿದೆ ಎನ್ನಲಾಗಿದೆ.
 
ಪರಪ್ಪನ ಅಗ್ರಹಾರ ಜೈಲು ಜೈಲಲ್ಲ ಅದೊಂದು ಬಾರ್, ಜೂಜುಕೋರರ ಅಡ್ಡೆ ಇತರ ಅನೈತಿಕ ಕೃತ್ಯಗಳ ತಾಣವಾಗಿದೆ ಎಂದು ವಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವುದು ಕೂಡಾ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಕೆಂಪಯ್ಯ ಸಿಎಂ ಸಿದ್ದರಾಮಯ್ಯ ಪರಪ್ಪನ ಅಗ್ರಹಾರ ಜೈಲು ಬಂಟ್ವಾಳ ಘಟನೆ Kempayya Cm Siddaramaiah Bantwal Incident Parappana Agrahar Jail

ಸುದ್ದಿಗಳು

news

ಬಿಜೆಪಿ ಎಂಪಿ ರೂಪಾ ಗಂಗೂಲಿ ವಿರುದ್ಧ ಎಫ್ ಐಆರ್ ದಾಖಲು

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಆಡಳಿತ ಟೀಕಿಸುವ ಭರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ...

news

ಕಪಟಿ ಚೀನಾಗೆ ಭಾರತದ ಖಡಕ್ ಉತ್ತರ

ನವದೆಹಲಿ: ಒಂದು ಕಡೆ ಸಿಕ್ಕಿಂ ಗಡಿಯಲ್ಲಿ ಗಡಿ ತಗಾದೆ ತೆಗೆಯುತ್ತಿರುವ ಚೀನಾ ಮತ್ತೊಂದೆಡೆ ಪಾಕ್ –ಭಾರತ ...

news

ಆಕೆ ತೀರಿಕೊಂಡು ಐದು ವರ್ಷ ಕಳೆದರೂ ಹೋಟೆಲ್ ಕೊಠಡಿಗೆ ಇನ್ನೂ ಬೀಗ!

ನವದೆಹಲಿ: ಕಾಂಗ್ರೆಸ್ ನಾಯುಕ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ...

news

ಡಿಐಜಿ ರೂಪಾ, ಜೈಲು ಅಧೀಕ್ಷಕ ಕೃಷ್ಣಕುಮಾರ್ ಮಧ್ಯೆ ವಾಗ್ವಾದ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ಡಿಐಜಿ ರೂಪಾ ಮೌಡ್ಗಿಲ್, ಜೈಲು ಅಧೀಕ್ಷಕ ಕೃಷ್ಣಕುಮಾರ್ ...

Widgets Magazine