ಅರ್ಕಾವತಿ ಡಿನೋಟಿಫಿಕೇಶನ್`ನಲ್ಲಿ ಸಿಎಂಗೆ ಕ್ಲೀನ್ ಚಿಟ್: ಕುಮಾರಸ್ವಾಮಿ ವ್ಯಂಗ್ಯ

ಬೆಂಗಳೂರು, ಗುರುವಾರ, 24 ಆಗಸ್ಟ್ 2017 (09:49 IST)

Widgets Magazine

ಅರ್ಕಾವತಿ ಲೇಔಟ್ ಡಿನೋಟಿಫಿಕೇಶನ್`ನಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸರ್ಕಾರ ರಚಿಸಿದ್ದ ನ್ಯಾ. ಕೆಂಪಣ್ಣ ನೇತೃತ್ವದ ಸಮಿತಿ ಸರ್ಕಾರದ ಮುಖ್ಯ ಕಾರ್ದರ್ಶಿಗೆ ವರದಿ ಸಲ್ಲಿಸಿದೆ. ಡಿನೋಟಿಫಿಕೇಶನ್ನಿನಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.


ಡಿನೋಟಿಫಿಕಶನ್ನಿನಲ್ಲಿ ಮುಖ್ಯಮಂತ್ರಿಗಳ ಪಾತ್ರವಿಲ್ಲ. ಹೈಕೋರ್ಟ್ ನಿರ್ದೇಶನದ ಮೇರೆಗೆ ಸರ್ಕಾರ ರಚಿಸಿದ್ದ ವಿಶೇಷ ಅಧಿಕಾರವಿದ್ದ ಭೂಸ್ವಾಧೀನಾಧಿಕಾರಿಗಳೇ ಹೈಕೋರ್ಟ್`ನ 6 ಮಾರ್ಗಸೂಚಿಗಳ ಅನ್ವಯ ಸ್ಥಳ ಪರಿಶೀಲನೆ ನಡೆಸಿ ಡಿನೋಟಿಫೈ ಮಾಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ವರದಿಯಲ್ಲಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ನ್ಯಾಯಾಂಗ ತನಿಖೆಗೆ ಒಪ್ಪಿಸಿದ ದಿನವೇ ಹೀಗೆ ಆಗುತ್ತದೆ ಎಂದು ನಾನು ಹೇಳಿದ್ದೆ. ಕೆಂಪಣ್ಣ ಸಮಿತಿಗೆ ಸಿಎಂ ಪಾತ್ರದ ಬಗ್ಗೆ ಸಾಕ್ಷ್ಯಗಳು ಬೇಕಿದ್ದರೆ ನನ್ನನ್ನ ಕೇಳಬೇಕಿತ್ತು ಎಂದು ವ್ಯಂಗ್ಯವಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಟಿ ರಮ್ಯಾಗೆ ಬಿಜೆಪಿ ಕಾರ್ಯಕರ್ತರು ಕಳುಹಿಸಿಕೊಟ್ಟ ಸ್ಪೆಷಲ್ ಗಿಫ್ಟ್!

ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಇತ್ತೀಚೆಗೆ ಪ್ರಧಾನಿ ಮೋದಿ ವಿರುದ್ಧ ಟ್ವಿಟರ್ ಪೇಜ್ ನಲ್ಲಿ ಟೀಕೆ ...

news

ಖಾಸಗೀತನದ ಹಕ್ಕು ಮೂಲಭೂತ ಹಕ್ಕೇ..? ಸುಪ್ರೀಂಕೋರ್ಟ್`ನಿಂದ ಇಂದು ಮಹತ್ವದ ತೀರ್ಪು

ತಲಾಖ್ ತೀರ್ಪಿನ ಬಳಿಕ ಸುಪ್ರೀಂಕೋರ್ಟ್ ಇವತ್ತು ಮತ್ತೊಂದು ಮಹತ್ವದ ತೀರಪನ್ನ ಪ್ರಕಟಿಸಲಿದೆ. ಖಾಸಗೀತನದ ...

news

ನನ್ನನ್ನು ಚುಚ್ಚಿ, ಕಿರುಕುಳ ಕೊಡಿ: ರಾಬರ್ಟ್ ವಾದ್ರಾ

ನವದೆಹಲಿ: ಕಾಂಗ್ರೆಸ್ ಧುರೀಣೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ತಮ್ಮ ಮೇಲಿನ ಸಂಭಾವ್ಯ ಸಿಬಿಐ ...

news

ಕೋಲಾರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಭೇಟಿ

ನವಜಾತ ಶಿಶುಗಳು ಸಾವಿಗೀಡಾಗಿದ್ದ ಕೋಲಾರ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ಭೇಟಿ ನೀಡಿ ...

Widgets Magazine