Widgets Magazine
Widgets Magazine

ಲಿಂಗಾಯುತ ಧರ್ಮಕ್ಕೆ ಸರಕಾರ ಓ.ಕೆ....?

ಬೆಂಗಳೂರು, ಬುಧವಾರ, 26 ಜುಲೈ 2017 (17:13 IST)

Widgets Magazine

ಲಿಂಗಾಯುತ ಧರ್ಮಕ್ಕೆ ಸ್ವತಂತ್ರ ಧರ್ಮ ಎಂದು ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ವೀರಶೈವ ಮಹಾಸಭೆ ಸಲ್ಲಿಸಿದ ಅರ್ಜಿಯನ್ನು ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ ಎನ್ನಲಾಗುತ್ತಿದೆ.
 
ವೀರಶೈವ ಮಹಾಸಭಾ ಸಲ್ಲಿಸಿದ ಅರ್ಜಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ರವಾನಿಸಿದ್ದಾರೆ ಎನ್ನಲಾಗುತ್ತಿದೆ. 
 
ಸಿಎಂ ಆಧೀನ ಕಾರ್ಯದರ್ಶಿಯಿಂದ ಜುಲೈ 19 ರಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಅರ್ಜಿಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 
 
ಲಿಂಗಾಯುತ ಧರ್ಮಕ್ಕೆ ಮಾನ್ಯತೆ ಸಂಬಂಧ ಸಿಎಂ ಸಿದ್ದರಾಮಯ್ಯ ಸರಕಾರ ಬೆಂಬಲ ನೀಡಲು ಸಿದ್ದವಾಗಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
 
 ಆದರೆ, ಇದೀಗ ಸಿಎಂ ಸಿದ್ದರಾಮಯ್ಯ ವೀರಶೈವ ಮಹಾಸಭಾದಿಂದ ಯಾವುದೇ ಅರ್ಜಿ ಬಂದಿಲ್ಲ ಎಂದು ಹೇಳಿಕೆ ನೀಡಿರುವುದು ರಾಜಕೀಯ ಗೊಂದಲಕ್ಕೆ ಕಾರಣವಾಗಿದೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕೆರೆಗಳ ರಕ್ಷಣೆಗೆ ಧಾವಿಸುವಂತೆ ರಾಜ್ಯಪಾಲರಿಗೆ ಸಂಸದೆ ಶೋಭಾ ಮನವಿ

ಬೆಂಗಳೂರು: ರಾಜ್ಯ ಸರಕಾರ 1500 ಕೆರೆಗಳ ಡಿನೋಟಿಫಿಕೇಶನ್‌ಗೆ ಚಿಂತನೆ ನಡೆಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರು ...

news

ರೈಗೆ ಗೃಹಸಚಿವ ಸ್ಥಾನ ನೀಡಿದ್ರೆ ರಾಜ್ಯ ಹೊತ್ತಿ ಉರಿಯುತ್ತದೆ: ಆರ್. ಅಶೋಕ್

ಬೆಂಗಳೂರು: ಮಂಗಳೂರು ಜಿಲ್ಲೆಯ ಉಸ್ತುವಾರಿ ಸಚಿವರಾದ ರಮಾನಾಥ್ ರೈ ಅವರಿಗೆ ಗೃಹ ಸಚಿವ ಸ್ಥಾನ ನೀಡಿದಲ್ಲಿ ...

news

ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ಯಾರೂ ಹೇಳಿದ್ದು? : ಸಿಎಂ

ಬೆಂಗಳೂರು: ಅರಣ್ಯ ಖಾತೆ ಸಚಿವ ರಮಾನಾಥ್ ರೈಗೆ ಗೃಹ ಸಚಿವ ಸ್ಥಾನ ನೀಡಲಾಗುವುದು ಎನ್ನುವ ವರದಿಗಳನ್ನು ...

news

ನಿತೀಶ್ ಕುಮಾರ್‌ನನ್ನು ಸಿಎಂ ಮಾಡಿದ್ದು ನಾನು: ಲಾಲೂ ಗುಡುಗು

ಪಾಟ್ನಾ: ನಿತೀಶ್ ಕುಮಾರ್‌ನನ್ನು ಮುಖ್ಯಮಂತ್ರಿ ಮಾಡಿದ್ದು ನಾನು ಎಂದು ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ...

Widgets Magazine Widgets Magazine Widgets Magazine