Widgets Magazine
Widgets Magazine

ಸಿಎಂ ಸಿದ್ದರಾಮಯ್ಯ ಸರಕಾರ ಅವನತಿಯ ಅಂಚಿನಲ್ಲಿ: ಬಿಎಸ್‌ವೈ ಭವಿಷ್ಯ

ಬೆಂಗಳೂರು:, ಬುಧವಾರ, 1 ನವೆಂಬರ್ 2017 (13:46 IST)

Widgets Magazine

ನೇತೃತ್ವದ ಕಾಂಗ್ರೆಸ್ ಸರಕಾರ ಅವನತಿಯ ಅಂಚಿನಲ್ಲಿದ್ದು, ಶೀಘ್ರದಲ್ಲಿಯೇ ಉರುಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಭವಿಷ್ಯ ನುಡಿದಿದ್ದಾರೆ.
ಬೆಂಗಳೂರಿನಿಂದ ನವ ಕರ್ನಾಟಕ ಪರಿವರ್ತನಾ ಯಾತ್ರೆ ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿದ್ದು, ರಾಜ್ಯ ಸರಕಾರದ ಭ್ರಷ್ಟಾಚಾರ, ದುರಾಡಳಿತವನ್ನು ಜನತೆಯ ಮುಂದಿಡಲಾಗುವುದು ಎಂದು ತಿಳಿಸಿದ್ದಾರೆ. 
 
ಸಿಎಂ ಸಿದ್ದರಾಮಯ್ಯ ಸರಕಾರದಿಂದ ಜನತೆ ಬೇಸತ್ತಿದ್ದಾರೆ. ಸರಕಾರ ಯಾವಾಗ ಅಂತ್ಯಗೊಳ್ಳುತ್ತದೆಯೋ ಎಂದು ಕಾಯುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ ನಾಳೆಯಿಂದ ಆರಂಭವಾಗಲಿದ್ದು ಸರ್ವ ಸಿದ್ದತೆಗಳು ಪೂರ್ಣಗೊಂಡಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆದೇಶದ ಮೇರೆಗೆ, ಐತಿಹಾಸಿಕ ಯಾತ್ರೆಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
 
75 ದಿನಗಳ ಕಾಲ ಬೃಹತ್ ರ್ಯಾಲಿ ನಡೆಯಲಿದ್ದು, ಮುಂದಿನ ವರ್ಷ ಜನವರಿ 28 ರಂದು ಬೆಂಗಳೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣದೊಂದಿಗೆ ರ್ಯಾಲಿ ಅಂತಿಮಗೊಳ್ಳಲಿದೆ ಎಂದು ತಿಳಿಸಿದ್ದಾರೆ. 
 
ಸುಮಾರು 82 ದಿನಗಳ ಕಾಲ ನಡೆಯುವ ಪರಿವರ್ತನಾ ಯಾತ್ರೆ, ಜನೆವರಿ 28 ರಂದು ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಅನೈತಿಕ ಸಂಬಂಧ: ಅತ್ತಿಗೆಯ ಕತ್ತಿಗೆ ಬ್ಲೇಡ್ ಹಾಕಿ ಹತ್ಯೆಗೈದ ಮೈದುನ ಅರೆಸ್ಟ್

ಬೆಂಗಳೂರು: ಅತ್ತಿಗೆ-ಮೈದುನನ ಅನೈತಿಕ ಸಂಬಂಧ ವಿಕೋಪಕ್ಕೆ ತೆರಳಿದಾಗ ಮೈದುನ ಅತ್ತಿಗೆಯ ಕತ್ತನ್ನು ...

news

ನೀಲಮಣಿ ರಾಜುಗೆ ರಾಜ್ಯಪಾಲೆ ಕಿರಣ್ ಬೇಡಿ ಅಭಿನಂಧನೆ

ಪುದುಚೇರಿ: ಕರ್ನಾಟಕ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ ನೀಲಮಣಿ ...

news

ರಾಷ್ಟ್ರಪತಿಯಾಗಿ 100 ದಿನಗಳನ್ನು ಪೂರೈಸಿದ ರಾಮನಾಥ್ ಕೋವಿಂದ್

ನವದೆಹಲಿ: ಸಮಯ ಅಮೂಲ್ಯವೆಂದು ಪರಿಗಣಿಸಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ರಾಷ್ಟ್ರಪತಿ ...

news

8 ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪ ಸಂಖ್ಯಾತರ ಸ್ಥಾನಮಾನ ನೀಡಿ: ಸುಪ್ರೀಂಕೋರ್ಟ್‌ಗೆ ಬಿಜೆಪಿ

ನವದೆಹಲಿ: ದೇಶದ ಎಂಟು ರಾಜ್ಯಗಳಲ್ಲಿ ಹಿಂದುಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡುವಂತೆ ಕೋರಿ ಬಿಜೆಪಿ ...

Widgets Magazine Widgets Magazine Widgets Magazine