ಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಜ್ಞಾನವಿಲ್ಸ: ಶೋಭಾ ಕರಂದ್ಲಾಜೆ

ಬನಹಟ್ಟಿ, ಶುಕ್ರವಾರ, 6 ಅಕ್ಟೋಬರ್ 2017 (16:22 IST)

ಮೀಸಲಾತಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯಗೆ ಜ್ಞಾನವಿಲ್ಲ. ಕಾನೂನು ಕಲಿತಿರುವುದನ್ನು ಕೂಡಾ ಮರೆತಿದ್ದಾರೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದ್ದಾರೆ. 
ಪಟ್ಟಣದಲ್ಲಿ ಆಯೋಜಿಸಲಾದ ನೇಕಾರರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಕಾಮ್ ಕಿ ಬಾತ್ ಮಾತನಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳ ಅಡಳಿತದಲ್ಲಿ ಅವರು ಮಾಡಿದ್ದೇನು? ಎಂದು ತಿರುಗೇಟು ನೀಡಿದರು. 
 
ರೈತರು, ನೇಕಾರರನ್ನು ಸಿಎಂ ಕಡೆಗಣಿಸಿದ್ದಾರೆ. ಕೇವಲ ಅಧಿಕಾರದ ಮದದಿಂದ ಮೆರೆಯುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ಸಂದೇಶ ರವಾನಿಸಿದರು.
 
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೆಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗುಡುಗಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  
ಮೀಸಲಾತಿ ಸಿಎಂ ಸಿದ್ದರಾಮಯ್ಯ ಶೋಭಾ ಕರಂದ್ಲಾಜೆ ಕಾಂಗ್ರೆಸ್ ಬಿಜೆಪಿ Reservation Congress Bjp Cm Siddaramaiah Shobha Karandlaje

ಸುದ್ದಿಗಳು

news

ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇವೆ: ಈಶ್ವರಪ್ಪ ಗುಡುಗು

ಬಾಗಲಕೋಟೆ: ಕಾಂಗ್ರೆಸ್ ಪಕ್ಷವನ್ನು ಕಸ ಗುಡಿಸುವಂತೆ ಗುಡಿಸಿ ಹಾಕ್ತೇನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ...

news

ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ಸಿದ್ದರಾಮಯ್ಯ: ಈಶ್ವರಪ್ಪ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌ರನ್ನು ಸೋಲಿಸಿದ್ದೇ ಸಿಎಂ ...

news

ಬಾಬಾ ರಾಮ್ ರಹೀಮ್‌ ಬೆಡ್‌ರೂಮಿಗೆ ಬಾ ಅಂದಿದ್ದ: ಮಾಡೆಲ್ ಮರೀನಾ

ಮುಂಬೈ: ಬಾಲಿವುಡ್ ಐಟಂಗರ್ಲ್ ರಾಖಿ ಸಾವಂತ್‌ ನನ್ನನ್ನು ಬಾಬಾ ರಾಮ್ ರಹೀಮ್ ಬೆಡ್‌ರೂಮಿಗೆ ಕರೆದುಕೊಂಡು ...

news

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಚುನಾವಣೆ: ಕೆ.ಸಿ ವೇಣುಗೋಪಾಲ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿಯೇ ಮುಂದಿನ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದು ...

Widgets Magazine
Widgets Magazine