ನಾವು ಯಾವ ನಾಯಕರನ್ನೂ ಕಡೆಗಣಿಸುತ್ತಿಲ್ಲ: ಡಿ.ಕೆ.ಸುರೇಶ್ ಆರೋಪಕ್ಕೆ ಸಿಎಂ ಉತ್ತರ

ಬೆಂಗಳೂರು, ಬುಧವಾರ, 20 ಸೆಪ್ಟಂಬರ್ 2017 (12:53 IST)

ಪಕ್ಷದಲ್ಲಿ ನಮ್ಮನ್ನ ಕಡೆಗಣಿಸಲಾಗುತ್ತಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಕ್ಕೆ ಕೋಲಾರದಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಸಿಎಂ ಸಿದ್ದರಾಮಯ್ಯ, ನಾವು ಪಕ್ಷದಲ್ಲಿ ಯಾರನ್ನೂ ಕಡೆಗಣಿಸುತ್ತಿಲ್ಲ. ಬಿಬಿಎಂಪಿ ಮೇಯರ್ ಆಯ್ಕೆ ಹೈಕಮ಻ಮಡ್ ನಿರ್ದೇಶನದಂತೆ ನಡೆಯಲಿದೆ ಎಂದು ಹೇಳಿದ್ದಾರೆ.


ಬಿಬಿಎಂಪಿಯಲ್ಲಿ ಜೆಡಿಎಸ್ ಜೊತೆ ಕಾಂಗ್ರೆಸ್ ಪಕ್ಷದ ಮೈತ್ರಿ ಮುಂದುವರೆಯಲಿದೆ. ಶಾಸಕರು, ಸಂಸದರು ಮೇಯರ್ ಅಭ್ಯರ್ಥಿಯ ಹೆಸರನ್ನ ಸೂಚಿಸಲಿದ್ದಾರೆ ಎಂದು ಡಿ.ಕೆ. ಸುರೇಶ್ ಆರೋಪವನ್ನ ಸಿಎಂ ತಳ್ಳಿ ಹಾಕಿದ್ದಾರೆ. ಮೈತ್ರಿ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾತುಕತೆ ನಡೆಸಿದ್ದಾರೆ ಎಂದು ಸಿಎಂ ಸ್ಪಷ್ಟಪಡಿಸಿದರು. ಅಧಿಕಾರ ವಿಷಯದಲ್ಲಿ ನಮ್ಮನ್ನ ಕಡೆಗಣಿಸಲಾಗುತ್ತಿದೆ ಎಂದು ಸುದ್ದಿಗೋಷ್ಠಿ ನಡೆಸಿ ಸಂಸದ ಡಿ.ಕೆ. ಸುರೇಶ್ ಅಸಮಾಧಾನ ಹೊರ ಹಾಕಿದ್ದರು.

ಈ ಮಧ್ಯೆ, ಬಿಬಿಎಂಪಿ ಮೇಯರ್ ಆಯ್ಕೆ ದಿನಾಂಕ ಸಮೀಪಿಸುತ್ತಿದ್ದಂತೆ ಕಾರ್ಪೊರೇಟರ್`ಗಳಲ್ಲೇ ಪೈಪೋಟಿ ಶುರುವಾಗಿದ್ದು, ಸಿಎಂ ಸಿದ್ದರಾಮಯ್ಯ ಜೊತೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮಾತುಕತೆ ನಡೆಸಿದ್ದಾರೆ.  ಇದೇ 28ರಮದು ನೂತನ ಮೇಯರ್ ಆಯ್ಕೆಗೆ ಚುನಾವಣೆ ನಡೆಯಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯರಷ್ಟು ಸುಳ್ಳು ಹೇಳುವ ವ್ಯಕ್ತಿ ಯಾರು ಇಲ್ಲ: ಬಿಎಸ್‌ವೈ

ಬೆಂಗಳೂರು: ಸಿದ್ದರಾಮಯ್ಯರಷ್ಟು ಸುಳ್ಳು ಹೇಱುವ ವ್ಯಕ್ತಿ ಯಾರು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ...

news

ಐಷಾರಾಮಿ ಜೀವನಕ್ಕಾಗಿ ಉಂಡ ಮನೆಗೆ ದ್ರೋಹ ಬಗೆದ ಕೆಲಸಗಾರರು

ಬೆಂಗಳೂರು: ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಕಂಪನಿಯ ಸಿಇಒ ಮನೆಯಲ್ಲಿ, ಮನೆಕೆಲಸಗಾರರೇ ಕೋಟ್ಯಂತರ ರೂ. ...

news

ನನ್ನ ಕ್ಷೇತ್ರಕ್ಕೆ ಮೇಯರ್ ಸ್ಥಾನ ಸಿಗಬೇಕು, ನನ್ನ ಸಹನೆಯ ಕಟ್ಟೆ ಒಡೆದಿದೆ: ಡಿ.ಕೆ. ಸುರೇಶ್ ಖಡಕ್ ವಾರ್ನಿಂಗ್

ಕಾಂಗ್ರೆಸ್`ನಲ್ಲಿ ನಮ್ಮನ್ನ ಕಡೆಗಣಿಸಲಾಗುತ್ತಿದೆ. ಅಭಿವೃದ್ಧಿ ಮತ್ತು ಅಧಿಕಾರ ಹಂಚಿಕೆಯಲ್ಲಿ ನಮ್ಮ ...

news

ಗೌರಿ ಲಂಕೇಶ್ ಹತ್ಯೆ: ರಾಜರಾಜೇಶ್ವರಿನಗರದಲ್ಲಿ ತೀವ್ರ ಶೋಧ

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನ ಎಸ್ಐಟಿ ಮತ್ತಷ್ಟು ತೀವ್ರಗೊಳಿಸಿದೆ. ಗೌರಿ ...

Widgets Magazine
Widgets Magazine