ಬಿಜೆಪಿ ನಾಯಕರ ಡೋಂಗಿತನ ಕಳಚಿಬಿಡಿ: ಸಿಎಂ ವಾಗ್ದಾಳಿ

ಬೆಂಗಳೂರು, ಬುಧವಾರ, 9 ಆಗಸ್ಟ್ 2017 (16:20 IST)

ಬಿಜೆಪಿ ನಾಯಕರ ಡೋಂಗಿತನವನ್ನು ಕಳಚಿಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಯ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ನಡೆ ದಲಿತರ ಕಡೆ ಎಂದು ಘೋಷಣೆ ಕೂಗಿದ ಬಿಜೆಪಿ ನಾಯಕರು, ದಲಿತರ ಮನೆಗೆ ತೆರಳಿ ಹೋಟೆಲ್‌ನಿಂದ ಊಟ ತರಿಸಿಕೊಂಡು ತಿಂದು ತೇಗಿದರು. ಇದು ಅವರ ದಲಿತ ಪ್ರೇಮವಾಗಿದೆ ಎಂದು ಲೇವಡಿ ಮಾಡಿದರು. 
 
ದಲಿತರ, ಹಿಂದುಳಿದವರ, ಶೋಷಿತರ, ಬಡವರ ಬಗ್ಗೆ ಬಿಜೆಪಿಗೆ ಯಾವುದೇ ಕಾಳಜಿಯಿಲ್ಲ. ಜನರಿಗೆ ಕನಸು ತೋರಿಸಿ ಅಧಿಕಾರಕ್ಕೆ ಬರಬೇಕು ಎನ್ನುವುದೇ ಅವರ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.  
 
ದೇಶವನ್ನು ಹಿಂದು ರಾಷ್ಟ್ರ ಮಾಡುವುದೇ ಬಿಜೆಪಿಯವರ ಅಜೆಂಡಾ. ದೇಶದಲ್ಲಿರುವ ಅಲ್ಪಸಂಖ್ಯಾತರು ಮತ್ತು ಇತರ ಸಮುದಾಯವರನ್ನು ತುಳಿಯುವುದೇ ಅವರ ಕಾಯಕವಾಗಿದೆ ಎಂದರು. 
 
ಗೋರಕ್ಷಣೆ ಹೆಸರಲ್ಲಿ ದಲಿತರ ಕಗ್ಗೊಲೆಯಾಗುತ್ತಿವೆ. ಆದರೆ, ಆರೋಪಿಗಳ ವಿರುದ್ಧ ಬಿಜೆಪಿ ಸರಕಾರಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವತಿ ಅಪಹರಣ ಯತ್ನ: ಹರಿಯಾಣಾದ ಕೀಚಕ ವಿಕಾಸ್ ಬರಾಲಾ ಅರೆಸ್ಟ್

ಚಂಡೀಗಢ್: ಯುವತಿ ವರ್ನಿಕಾಗೆ ಕಿರುಕುಳ ನೀಡಿದ ಆರೋಪಿ ವಿಕಾಸ್ ಬರಾಲಾನನ್ನು ಪೊಲೀಸರು ಬಂಧಿಸಿ ವಿಚಾರಣೆ ...

news

ಭೂತಾನ್ ಹೆಸರಲ್ಲಿ ಬೆಂಕಿ ಇಡಲು ಮುಂದಾದ ಚೀನಾ..!

ಭೂತಾನ್ ಪರವಾಗಿ ಡೊಕ್ಲಾಮ್ ಪ್ರದೇಶದಲ್ಲಿ ಸೇನೆಯನ್ನ ನಿಯೋಜಿಸಿ ಚೀನಾ ಸೇನೆಯನ್ನ ಹಿಮ್ಮೆಟ್ಟಿಸಿದ ಭಾರತ ...

news

ಮತ್ತೆ ಸಚಿವ ಡಿ.ಕೆ.ಶಿವಕುಮಾರ್‌ಗೆ ಐಟಿ ಸಮನ್ಸ್ ಜಾರಿ

ಬೆಂಗಳೂರು: ಆದಾಯ ತೆರಿಗೆ ದಾಳಿ ಕುರಿತ ವಿಚಾರಣೆಗೆ ಹಾಜರಾಗುವಂತೆ ಐಟಿ ಅಧಿಕಾರಿಗಳು ಇಂಧನ ಖಾತೆ ಸಚಿವ ...

news

ವಿದ್ಯಾರ್ಥಿನಿಯರಿಂದಲೇ ವಿದ್ಯಾರ್ಥಿನಿಯನ್ನು ನಗ್ನಗೊಳಿಸಿ ಹಲ್ಲೆ, ವಿಡಿಯೋ ಚಿತ್ರಣ

ರಾಂಚಿ: ಆಘಾತಕಾರಿ ಘಟನೆಯೊಂದರಲ್ಲಿ, ಬುಡಕಟ್ಟು ಸಮುದಾಯದ ವಿದ್ಯಾರ್ಥಿನಿ ಮೊಬೈಲ್ ಕಳ್ಳತನ ಮಾಡಿದ್ದಾಳೆ ...

Widgets Magazine