ಜಾರ್ಜ್ ಕೊಲೆಗಡುಕ ಅಂದ್ರೂ ಸುಮ್ಮನಿರಬೇಕಾ?: ಸಿಎಂ ಗುಡುಗು

ಬೆಳಗಾವಿ:, ಸೋಮವಾರ, 13 ನವೆಂಬರ್ 2017 (16:57 IST)

ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ.ಜಾರ್ಜ್‌ರನ್ನು ಬಿಜೆಪಿ ನಾಯಕರು ಕೊಲೆಗಡುಕ ಎಂದರೂ ಸುಮ್ಮನಿರಬೇಕಾ ಎಂದು ಏರು ಧ್ವನಿಯಲ್ಲಿ ಗುಡುಗಿದ್ದಾರೆ.
ಅಧಿವೇಶನದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಜಾರ್ಜ್‌ರನ್ನು ಕೊಲೆಗಡುಕ ಎಂದು ಹೇಳಿದೆಯಾ? ಹೇಳಿಲ್ಲ ಅಂದ ಮೇಲೆ ಬಿಜೆಪಿ ನಾಯಕರು ಯಾಕೆ ಅಂತಹ ಪದವನ್ನು ಬಳಕೆ ಮಾಡುವುದು ಎಂದು ಕಿಡಿಕಾರಿದ್ದಾರೆ.
 
ನಿಲುವಳಿ ಸೂಚನೆಗೆ ಇದು ಯೋಗ್ಯ ವಿಷಯವಲ್ಲ. ನಿಯಮಗಳ ಪ್ರಕಾರವು ಇದು ಚರ್ಚೆಗೆ ತಕ್ಕ ವಿಷಯವಲ್ಲ. ಅಧಿಕಾರದಲ್ಲಿರುವ ಅನೇಕ ರಾಜಕಾರಣಿಗಳ ಮೇಲೆ ಎಫ್‌ಐಆರ್ ಆಗಿವೆ. ಆದರೆ ಯಾರೂ ರಾಜೀನಾಮೆ ನೀಡಿಲ್ಲ. ಹಾಗಾಗಿ ಜಾರ್ಜ್ ಕೂಡಾ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
 
ಹಿಂದೆ ಸಿಐಡಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದು ಎನ್ನುವ ಬಿಜೆಪಿ ನಾಯಕರ ಆರೋಪಗಳ ಹಿನ್ನೆಲೆಯಲ್ಲಿ ಸಚಿವ ಜಾರ್ಜ್ ರಾಜೀನಾಮೆ ನೀಡಿದ್ದನ್ನು ಮರೆಯಬೇಡಿ ಎಂದು ತಿಳಿಸಿದರು.  .
 
ಸದನ ಸುಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ಧರಣಿಯನ್ನು ಹಿಂಪಡೆಯಿರಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ ತಾಕೀತು ಮಾಡಿದ ಘಟನೆ ನಡೆಯಿತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಿಮ್ಮ ಬಳಿ ದಾಖಲೆ ಇದ್ರೆ ಸಿಬಿಐಗೆ ಕೊಡಿ: ಬಿಜೆಪಿ ನಾಯಕರಿಗೆ ಜಾರ್ಜ್ ತಿರುಗೇಟು

ಬೆಳಗಾವಿ: ಡಿವೈಎಸ್‌ಪಿ ಎಂ.ಕೆ. ಗಣಪತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಬಳಿ ದಾಖಲೆ ಇದ್ರೆ ಸಿಬಿಐಗೆ ...

news

ಬಾಲಕನನ್ನು ಅಪಹರಿಸಿ ಸೆಕ್ಸ್ ಸುಖ ತೀರಿಸಿಕೊಂಡ ಅಂಟಿ ಅರೆಸ್ಟ್

ಕೋಲಾರ: ಅಪ್ರಾಪ್ತ ಬಾಲಕನನ್ನು ಕಿಡ್ನಾಪ್ ಮಾಡಿದ ಕಾಮುದಾಹಿ ಅಂಟಿಯೊಬ್ಬಳು ನಂತರ ಆತನ ಮೇಲೆ ...

news

ಸಿಎಂಗೆ ಹೆಣ್ಣುಮಕ್ಕಳಿಲ್ಲ, ರಾಕ್ಷಸ ರಮೇಶ್‌ಕುಮಾರ್‌ಗೆ ಮಕ್ಕಳೇ ಇಲ್ಲ : ಕೆ.ಎಸ್.ಈಶ್ವರಪ್ಪ

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಹೆಣ್ಣಮಕ್ಕಳಿಲ್ಲ, ರಾಕ್ಷಸ ರಮೇಶ್‌ಕುಮಾರ್‌ಗೆ ಮಕ್ಕಳೇ ಇಲ್ಲ. ಇವರಿಗೆ ...

news

ಕುಂದಾಪುರ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹೈಡ್ರಾಮಾ

ಕುಂದಾಪುರ: ಕುಂದಾಪುರ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಹೈಡ್ರಾಮಾ ನಡೆದಿದ್ದು, ಹಾಲಾಡಿ ಬಣ ಮತ್ತು ...

Widgets Magazine
Widgets Magazine