ಯಡಿಯೂರಪ್ಪಗೆ ಮೀಟರ್ ಇಲ್ಲ, ಉತ್ತರನ ಪೌರುಷ ಇಲ್ಲಿ ಮಾತ್ರ: ಸಿಎಂ ಕಿಡಿ

ಬೆಂಗಳೂರು, ಶನಿವಾರ, 23 ಸೆಪ್ಟಂಬರ್ 2017 (14:40 IST)

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಗೆ ಮೀಟರ್ ಇಲ್ಲ. ಉತ್ತರನ ಪೌರುಷ ಇಲ್ಲಿ ಮಾತ್ರ ತೋರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ನಾನು ಮನ್ನಾ ಮಾಡುತ್ತೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಕೇಂದ್ರ ಸರಕಾರದಿಂದ ಮನ್ನಾ ಮಾಡಿಸಿ ಎಂದು ಹೇಳಿದ್ದೆ. ಆದ್ರೆ ಅವರ ಪೌರುಷ ಇಲ್ಲಿ ಮಾತ್ರ ಎಂದು ಕಿಡಿಕಾರಿದರು.
 
ಪ್ರಧಾನಮಂತ್ರಿ ಮೋದಿ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಎದುರು ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಬಾಯಿಬಿಡದ ಯಡಿಯೂರಪ್ಪ, ಇಲ್ಲಿ ಮಾತ್ರ ಉತ್ತರನ ಪೌರುಷ ತೋರಿಸಿ ಗುಡುಗುತ್ತಾರೆ ಎಂದು ವ್ಯಂಗ್ಯವಾಡಿದರು. 
 
ಬೈಕ್ ರ್ಯಾಲಿ ಮಾಡಿ ಸಾಮರಸ್ಯವನ್ನು ಹಾಳು ಮಾಡಲು ಯತ್ನಿಸಿದರು. ಆದ್ರೆ ನಾವು ಅವ್ರನ್ನ ಇಲ್ಲಿಯೇ ಬಂಧಿಸಿ ಶಾಂತಿ ಕಾಪಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಧಾನಿ ಮೋದಿಯ ಮತ್ತೊಂದು ಭರವಸೆ: ಎಲ್ರಿಗೂ ಮನೆ ಕೊಡ್ತಾರಂತೆ

ವಾರಣಾಸಿ: ಮುಂಬರುವ 2022ರ ವೇಳೆಗೆ ದೇಶದ ಪ್ರತಿಯೊಬ್ಬರಿಗೆ ಕೇಂದ್ರ ಸರಕಾರದಿಂದ ಮನೆ ಕೊಡುಗೆ ದೊರೆಯಲಿದೆ ...

news

ಮೋದಿದು ಮನ್ ಕೀ ಬಾತ್, ನಮ್ದು ಕಾಮ್ ಕೀ ಬಾತ್: ಸಿಎಂ ವಾಗ್ದಾಳಿ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ನಮ್ಮದು ಕಾಮ್ ಕೀ ಬಾತ್ ಎಂದು ಸಿಎಂ ...

news

ನೋಟು ನಿಷೇಧದಿಂದ ದೇಶದ ಆರ್ಥಿಕತೆ ಕುಸಿತದತ್ತ : ಮನಮೋಹನ್ ಸಿಂಗ್

ಮೊಹಾಲಿ(ಪಂಜಾಬ್): ಕಳೆದ ವರ್ಷ ಪ್ರಧಾನಿ ಮೋದಿ ಜಾರಿಗೊಳಿಸಲಾದ ನೋಟು ನಿಷೇಧ ಸಾಹಸದಿಂದಾಗಿ ದೇಶದ ಆರ್ಥಿಕತೆ ...

news

ಬಿಎಸ್‌ವೈಗೆ ನೋಟಿಸ್: ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಬೆಂಗಳೂರು: ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ಅಪಹರಣ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ...

Widgets Magazine
Widgets Magazine